ಸೌದಿಯಲ್ಲಿ 50 ಡಿಗ್ರಿಯನ್ನೂ ದಾಟಿದ ತಾಪಮಾನ

Update: 2016-07-02 05:56 GMT

ರಿಯಾದ್, ಜುಲೈ 2: ರಮಝಾನ್ ಕೊನೆಯ ದಿನಗಳು ಸಮೀಪಿಸುತ್ತಿರುವಂತೆ ಸೌದಿ ಅರೇಬಿಯದ ಕೆಲವು ಭಾಗಗಳಲ್ಲಿ ಕಠಿಣ ಉಷ್ಣತಾ ಹವಾಮಾನ ಎದುರಾಗಿದೆ. ದೀರ್ಘವಾದ ಹಗಲು ಒಂದೆಡೆ ಇದ್ದರೆ ಜೊತೆಗೆ ಅತೀ ಉಷ್ಣತೆಯು ಇನ್ನೊಂದೆಡೆ ಜನರನ್ನು ಬಳಲುವಂತೆ ಮಾಡಿದೆ. ಹೊರಗೆ ಕೆಲಸ ಮಾಡುವ ಉಪವಾಸಿಗರು ಹಾಗೂ ಉಪವಾಸ ಇಲ್ಲದವರಾದ ಕಾರ್ಮಿಕರು ಕಠಿಣ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.ರಿಯಾದ್‌ನಲ್ಲಿ ನಿನ್ನೆ 50ಡಿಗ್ರಿಸೆಲ್ಸಿಯಸ್ ಉಷ್ಣತೆ ಇತ್ತು. ಕೆಲವುಕಡೆಗಳಲ್ಲಿ ಐವತ್ತುಡಿಗ್ರಿಗಿಂತಲೂ ಹೆಚ್ಚು ಉಷ್ಣತೆಯಿತ್ತು ಎಂದು ಅಧಿಕಾರಿಗಳುತಿಳಿಸಿದ್ದಾರೆ.

ಪೂರ್ವಪ್ರಾಂತ ಅಲ್‌ಜೌಫ್, ಅಲ್‌ಖಸೀಂಗಳಲ್ಲಿ ಕಠಿಣ ಉಷ್ಣತೆ ಇದೆ, ಕಳೆದ ಕೆಲವು ದಿವಸಗಳಲ್ಲಿ ಉಷ್ಣತೆಯ ಜೊತೆಗೆ ಬಿಸಿಗಾಳಿ ಬೀಸುತ್ತಿದೆ. ಹವಾಮಾನ ವೈಪರೀತ್ಯ ಬಿಸಿಗಾಳಿಗೆ ಕಾರಣವಾಗಿದೆ. ದೇಹದ ನೀರಿನ ಅಂಶಗಳು ಕಡಿಮೆಯಾಗುವುದರಿಂದ ಹೊರಕೆಲಸಗಾರರು ಹೆಚ್ಚು ಕಷ್ಟ ಅನುಭವಿಸುವಂತಾಗಿದೆ. ಸೌದಿಯಲ್ಲದೆ, ಬಹ್ರೈನ್,ಕುವೈಟ್‌ಗಳಲ್ಲಿಯೂ ಬಿಸಿಗಾಳಿ ಹಾವಳಿ ಇದೆ. ಉಷ್ಣಕಾಲದಲ್ಲಿ ಸಾಮಾನ್ಯವಾಗಿ ನೀಡುವ ಹನ್ನೆರಡು ಗಂಟೆಯಿಂದ ಮೂರುಗಂಟೆವರೆಗಿನ ಮಧ್ಯಾಹ್ನದ ವಿಶ್ರಾಂತಿ ಇದ್ದರೂ ಸಂಜೆಯೂ ಕಠಿಣ ಉಷ್ಣತೆ ಮುಂದುವರಿಯುತ್ತಿದೆ. ಆದ್ದರಿಂದ ಅಧಿಕಾರಿಗಳು ಮುನ್ನೆಚ್ಚರಿಕೆಯನ್ನು ನೀಡಿದ್ದಾರೆ. ಮಧ್ಯಾಹ್ನದ ವಿಶ್ರಾಂತಿ ಅವಧಿಯನ್ನುಉಲ್ಲಂಘಿಸುವವರನ್ನು ಪತ್ತೆಹಚ್ಚುವ ತಪಾಸಣೆ ಕಾರ್ಯವೂ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News