×
Ad

"ವಡೆ, ಪೂರಿ, ಬಜ್ಜಿಗಳ ಮೇಲೆ ಬೊಜ್ಜು ತೆರಿಗೆ ಹಾಕಿ"

Update: 2016-07-12 09:37 IST

ಬೆಂಗಳೂರು, ಜು.12: ಬರ್ಗರ್, ಫಿಡ್ಜಾ, ಧಪ್ನಟ್ ಹಾಗೂ ಸ್ಯಾಂಡ್ವಿಚ್ ಗಳ ಮೇಲೆ ಶೇಕಡ 14.5ರಷ್ಟು ಬೊಜ್ಜು ತೆರಿಗೆ ವಿಧಿಸಿರುವ ಕೇರಳ ಸರಕಾರದ ಆರೋಗ್ಯಕರ ಹೆಜ್ಜೆ ಇದೀಗ ದೇಶಾದ್ಯಂತ ಜಂಕ್ ಫುಡ್ ಸಂಸ್ಕೃತಿ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಹಲವು ಮಂದಿ ಪೌಷ್ಟಿಕಾಂಶ ತಜ್ಞರು ಮತ್ತು ಆಹಾರಪಥ್ಯ ಕ್ರಮದ ತಜ್ಞರು, ರಾಜ್ಯದಲ್ಲೂ ಇದನ್ನು ಜಾರಿಗೊಳಿಸುವಂತೆ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಸಾರ್ವಜನಿಕ ಆರೋಗ್ಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕದಲ್ಲಿ ಕೂಡಾ ಸರಕಾರ ಈ ಕ್ರಮಕ್ಕೆ ಮುಂದಾಗಬೇಕು. ಕೇವಲ ಅಂತಾರಾಷ್ಟ್ರೀಯ ಆಹಾರಗಳ ಮೇಲೆ ಈ ಬೊಜ್ಜು ತೆರಿಗೆ ವಿಧಿಸುವುದಲ್ಲ. ಬದಲಾಗಿ ಅಧಿಕ ಕೊಬ್ಬು, ಸಕ್ಕರೆ ಮತ್ತು ಸಂಸ್ಕರಿತ ಆಹಾರದ ಮೇಲೆ ಕೂಡಾ ವಿಧಿಸಬೇಕು. ಇದರಿಂದ ಇಂಥ ಆಹಾರದ ಸೇವನೆ ಭಾಗಶಃ ಕಡಿಮೆಯಾಗಬಹುದು ಎನ್ನುವುದು ಭಾರತೀಯ ಆಹಾರಪಥ್ಯ ಸಂಗದ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷೆ ಶೀಲಾ ಕುಮಾರಸ್ವಾಮಿ ಅವರ ಅಭಿಪ್ರಾಯ.

ಕೇರಳ ಸರಕಾರದ ಕ್ರಮದಿಂದ ಅಲ್ಲಿ ಜನರ ಆಹಾರ ಆದ್ಯತೆ ಬದಲಾಗಬಹುದು ಮತ್ತು ಆರೋಗ್ಯಕರ ಆಹಾರ ಸೇವನೆಗೆ ಇದು ಉತ್ತೇಜನ ನೀಡಬಹುದು. ಹಲವು ಭಾರತೀಯ ತಿನಸುಗಳಾದ ವಡಾ, ನಮ್ಕೀನ್, ಬಜ್ಜಿ, ಪೂರಿ ಕೂಡಾ ತೆರಿಗೆ ಜಾಲದ ಒಳಗೆ ಬರಬೇಕು ಎನ್ನುವುದು ಅವರ ಸಲಹೆ.

ಶಾಲೆಯೊಂದರಲ್ಲಿ ಪೌಷ್ಟಿಕಾಂಶ ತಜ್ಞೆಯಾಗಿರುವ ಪ್ರಿಯಂವಧ ಚಂದ್ರಮೌಳಿ ಅವರ ಪ್ರಕಾರ, ಸಾಮಾನ್ಯವಾಗಿ ಮಕ್ಕಳ ಆಹಾರ ಆದ್ಯತೆ 2-6ನೇ ವಯಸ್ಸಿನ ಅವಧಿಯಲ್ಲಿ ರೂಪುಗೊಳ್ಳುತ್ತದೆ" ಹಲವು ಶಾಲೆಗಳಲ್ಲಿ ನಡೆಸಿದ ಅಧ್ಯಯನದಂತೆ, ಮಕ್ಕಳ ಆಹಾರ ಪ್ರವೃತ್ತಿ ಬದಲಾಗುತ್ತಿದೆ. ಮಕ್ಕಳಿಗೆ ಸಂಸ್ಕರಿತ ಆಹಾರವನ್ನು ಬಹುಮಾನ ಅಥವಾ ಲಂಚವಾಗಿ ನೀಡದಂತೆ ಪೋಷಕರಿಗೆ ಸಲಹೆ ಮಾಡುತ್ತೇವೆ ಎಂದು ಅವರು ವಿವರಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News