×
Ad

ಮಾಜಿ ಶಾಸಕ ವಸಂತ ರಾವ್ ಪಾಟೀಲ್‌ಗೆ ಶ್ರದ್ಧಾಂಜಲಿ

Update: 2016-07-12 23:59 IST

ಬೆಂಗಳೂರು, ಜು.12: ನಿನ್ನೆಯಷ್ಟೇ ನಿಧನರಾದ ಮಾಜಿ ಶಾಸಕ ವಸಂತರಾವ್ ಪಾಟೀಲ್ ಅವರಿಗೆ ವಿಧಾನಸಭೆಯಲ್ಲಿ ಮಂಗಳವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮಂಗಳವಾರ ಬೆಳಗ್ಗೆ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಂತಾಪ ಸೂಚನೆ ನಿರ್ಣಯವನ್ನು ಮಂಡಿಸಿದ ಸ್ಪೀಕರ್ ಕೆ.ಬಿ.ಕೋಳಿವಾಡ, ಅಗಲಿದ ಗಣ್ಯರ ಗುಣಗಾನ ಮಾಡಿದರು. ಆ ಬಳಿಕ ಎಲ್ಲ ಸದಸ್ಯರು ಎದ್ದುನಿಂತು ಒಂದು ನಿಮಿಷ ಮೌನ ಆಚರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News