ವಾಟ್ಸ್‌ಆಪ್‌ನ ಹೊಸ ಫಾಂಟ್ ಬಳಸುವುದು ಹೇಗೆ ನೋಡಿ

Update: 2016-07-19 08:24 GMT

ವಾಷಿಂಗ್ಟನ್, ಜು.19: ವಾಟ್ಸ್‌ಆಪ್ ತನ್ನ ಐಒಎಸ್ ಹಾಗೂ ಆಂಡ್ರಾಯ್ಡಾ ಆ್ಯಪ್‌ಗೆ ಹೊಸ ಫಾಂಟ್ ಸೇರಿಸಲು ಯೋಚಿಸುತ್ತಿದ್ದು, ಈ ಫೀಚರ್ ಆಂಡ್ರಾಯ್ಡಾ ಬೀಟಾ ಬಿಲ್ಡ್ (ವರ್ಷನ್ 2.16.179) ನಲ್ಲಿ ಕಾಣಬಹುದಾಗಿದೆ. ಈ ಹೊಸ ವಾಟ್ಸ್‌ಆಪ್ ಅವತರಣಿಕೆ ಗೂಗಲ್ ಪ್ಲೇಯ ಬೀಟಾ ಪ್ರೋಗ್ರಾಂನಲ್ಲಿ ಲಭ್ಯವಿದೆ.

ವಾಟ್ಸ್‌ಆಪ್ ಬಳಕೆದಾರರು ಈಗ ಚ್ಯಾಟ್ ಮಾಡುವಾಗ ಬೇರೆ ಫಾಂಟ್ ಬಳಸಬಹುದಾಗಿದೆ. ಈ ಫಾಂಟ್-ಫಿಕ್ಸೆಡ್ ಸಿಸ್ ವಿಂಡೋಸ್‌ನಲ್ಲಿ ಲಭ್ಯವಿರುವ ಫಾಂಟ್‌ನಂತೆಯೇ ಇದೆ ಹಾಗೂ ಅದರ ಹೆಸರೂ ಅದೇ ಆಗಿದೆ. ವಾಟ್ಸ್‌ಆಪ್‌ಗೆ ಸದ್ಯ ಲಭ್ಯವಿರುವ ಒಂದೇ ಫಾಂಟ್ ಆಯ್ಕೆ ಇದಾಗಿದೆ. ಆದರೆ ಹೊಸ ಫಾಂಟ್ ಉಪಯೋಗ ಅಷ್ಟೊಂದು ಸುಲಭವಲ್ಲ. ಬಳಕೆದಾರರು ಫಿಕ್ಸೆಡ್‌ಸಿಸ್‌ನಲ್ಲಿ ಟೈಪ್ ಮಾಡಲಿಚ್ಛಿಸುವ ಟೆಕ್ಸ್ಟ್‌ಮೂರು ಬ್ಯಾಕ್‌ಕೋಟ್ ಸಿಂಬಲ್ ಒಳಗೆ ಹೋಗಬೇಕಾಗಿದೆ. ಪದ ಅಥವಾ ವಾಕ್ಯದ ಆರಂಭದಲ್ಲಿ ಎರಡು ಹಾಗೂ ಅಂತ್ಯದಲ್ಲಿ ಒಂದು.

ಉದಾಹರಣೆಗೆ ನೀವು ಗುಡ್ ಮಾರ್ನಿಂಗ್ ಎಂಬ ಪದವನ್ನು ಫಿಕ್ಸೆಡ್‌ಸಿಸ್ ಫಾಂಟ್‌ನಲ್ಲಿ ಟೈಪ್ ಮಾಡಬೇಕಾದರೆ ಈ ಪದವನ್ನು ’’’ ಇದರ ನಡುವೆ ಟೈಪ್ ಮಾಡಬೇಕಾಗುತ್ತದೆ. ಅಂದರೆ ’’’ಗುಡ್ ಮಾರ್ನಿಂಗ್’’’ ಎಂದು ನೀವು ಟೈಪ್ ಮಾಡಿದಾಗ ಅದರ ಫಾಂಟ್ ಫಿಕ್ಸೆಡ್‌ಸಿಸ್‌ಗೆ ಬದಲಾಗುತ್ತದೆ. ಆದರೆ ಈ ಫಾಂಟನ್ನು ಇತರ ಟೆಕ್ಸ್ಟ್ ಫಾರ್ಮಾಟ್‌ಗಳಾದ ಬೋಲ್ಡ್, ಇಟಾಲಿಕ್ಸ್ ಅಥವಾ ಸ್ಟ್ರೈಕ್‌ಥ್ರೂವಿನೊಂದಿಗೆ ಉಪಯೋಗಿಸಲು ಸಾಧ್ಯವಿಲ್ಲ.

ವಾಟ್ಸ್‌ಆಪ್ ಇತ್ತೀಚೆಗೆ ಹಲವಾರು ಹೊಸ ಫೀಚರ್‌ಗಳನ್ನು ಸಾದರಪಡಿಸಿದ್ದು ಅವುಗಳು ಬಳಕೆದಾರರಿಗೆ ಮುದ ನೀಡಲಿವೆ. ಕೋಟ್ ಮೆಸೇಜ್ ಫೀಚರ್ ಬಳಕೆದಾರರಿಗೆ ನಿರ್ದಿಷ್ಟ ಸಂದೇಶಗಳನ್ನು ಉಲ್ಲೇಖಿಸಿ ಅದಕ್ಕೆ ಉತ್ತರ ಕಳುಹಿಸಲು ಅನುವು ಮಾಡಿ ಕೊಡುತ್ತದೆ. ಫೇಸ್‌ಬುಕ್ ಒಡೆತನದ ವಾಟ್ಸ್‌ಆಪ್ ತನ್ನ ಐಒಎಸ್ ಆ್ಯಪ್‌ಗೆ ಜಿಐಎಫ್ ಸಪೋರ್ಟ್ ಸೇರಿಸಲು ಯೋಚಿಸುತ್ತಿದೆ.

ಪಿಡಿಎಫ್ ಹಾಗೂ ಡಾಕ್ ಫೈಲುಗಳನ್ನು ಶೇರ್ ಮಾಡಲು ಅನುಕೂಲ ಮಾಡಿಕೊಟ್ಟಿರುವ ವಾಟ್ಸ್‌ಆಪ್ ಈಗ ಸಂಪೂರ್ಣವಾಗಿ ಎನ್‌ಕ್ರಿಪ್ಟೆಡ್ ಆಗಿದೆ. ಇದರರ್ಥ ಯಾವುದೇ ವಾಟ್ಸ್‌ಆಪ್ ಚ್ಯಾಟ್‌ಗಳನ್ನು ಮೂರನೇ ವ್ಯಕ್ತಿ ಓದಲು ಸಾಧ್ಯವಿಲ್ಲವಾಗಿದೆ.

ಪ್ರಸ್ತುತ ವೀಡಿಯೋ ಕಾಲಿಂಗ್ ಫೀಚರ್ ಕೂಡ ಸೇರಿಸಲು ವಾಟ್ಸ್‌ಆಪ್ ಪ್ರಯತ್ನಿಸುತ್ತಿದೆ. ಈ ಫೀಚರ್ ಈ ಹಿಂದೆ ವಾಟ್ಸ್‌ಆಪ್‌ನ ಆಂಡ್ರಾಯ್ಡಾ ಬೀಟಾದಲ್ಲಿ ಕಾಣಿಸಿಕೊಂಡಿದ್ದರೂ ನಂತರ ಅದನ್ನು ತೆಗೆದು ಹಾಕಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News