×
Ad

ಸಂಕಷ್ಟದಲ್ಲಿ ಗುಜರಾತ್‌ನ ಅನಂದಿಬೆನ್‌ ಪಟೇಲ್‌ ಸರಕಾರ

Update: 2016-07-21 10:29 IST

ಅಹ್ಮದಾಬಾದ್‌, ಜು.21: ಸತ್ತ ದನದ ಚರ್ಮ ಸುಲಿದ ಆರೋಪಕ್ಕಾಗಿ ನಾಲ್ವರು ದಲಿತ ಯುವಕರು ಹಲ್ಲೆಗೊಳಗಾದ ಹಿನ್ನೆಲೆಯಲ್ಲಿ ಉಂಟಾಗಿರುವ ವಿವಾದದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಆನಂದಿಬೆನ್‌ ನೇತೃತ್ವದ  ಗುಜರಾತ್‌ನ ಬಿಜೆಪಿ ಸರಕಾರ ಸಮಸ್ಯೆಯಲ್ಲಿ ಸಿಲುಕಿಕೊಂಡಿದೆ.
ಈ ಘಟನೆಯ ಬಳಿಕ ಕಳೆದ ಎರಡು ದಿನಗಳಿಂದ ಗುಜರಾತ್‌ನಲ್ಲಿ ಅಶಾಂತಿಯ ವಾತಾವರಣ ನೆಲೆಸಿದೆ. ಹಿಂಸಾಚಾರದ ಹಿನ್ನೆಲೆಯಲ್ಲಿ  ಓರ್ವ ಪೊಲೀಸ್‌ ಪೇದೆ ಮೃತಪಟ್ಟಿದ್ದಾರೆ.
ಈ ಘಟನೆಯ ಬಳಿಕ ಗುಜರಾತ್‌ನ ಬಿಜೆಪಿ ಸರಕಾರ ಸಮಸ್ಯೆ ಎದುರಿಸುವಂತಾಗಿದೆ. ಮುಂಬರುವ ನವೆಂಬರ‍್-ಡಿಸೆಂಬರ್‌ನಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಈಗಾಗಲೇ ಹಲವು ವಿಚಾರಗಳಲ್ಲಿ ವೈಫಲ್ಯ ಅನುಭವಿಸಿರುವ ಮುಖ್ಯ ಮಂತ್ರಿ ಆನಂದಿಬೆನ್‌ ನಾಯಕತ್ವದ ಬದಲಾವಣೆಗೆ ಬಿಜೆಪಿಯ ಹೈಕಮಾಂಡ್‌ ಯೋಚಿಸುತ್ತಿದೆ ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News