26 ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು, ಜು. 21: ಮಹತ್ವದ ಬೆಳವಣಿಗೆಯೊಂದರಲ್ಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸೇರಿದಂತೆ ಒಟ್ಟು 26 ಮಂದಿ ಐಎಎಸ್ ಅಧಿಕಾರಿಗಳನ್ನು ತಮ್ಮ ಹೆಸರಿನ ಮುಂದೆ ಸೂಚಿಸಿದ ಸ್ಥಳಕ್ಕೆ ತಕ್ಷಣವೇ ನಿಯೋಜನೆಗೊಳ್ಳುವಂತೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಡಾ.ಕೆ.ಜಿ.ಜಗದೀಶ್-ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಸಂಜೀವ್ ಕುಮಾರ್- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೌಶಲ್ಯಾಭಿವೃದ್ಧಿ ಇಲಾಖೆ(ಹೆಚ್ಚುವರಿಯಾಗಿ ಕಾರ್ಮಿಕ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಹೊಣೆ ), ಇ.ವಿ.ರಮಣರೆಡ್ಡಿ- ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ.
ಡಾ.ಬಿ.ಬಸವರಾಜು-ಪ್ರಧಾನ ಕಾರ್ಯದರ್ಶಿ ಸಾರಿಗೆ ಇಲಾಖೆ, ಗಂಗಾರಾಮ್ ಬಡೇರಿಯಾ-ಕಾರ್ಯದರ್ಶಿ ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ವಿಭಾಗ, ಮೊಹಮ್ಮದ್ ಮೊಹ್ಸೀನ್-ಕಾರ್ಯದರ್ಶಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ನವೀನ್‌ರಾಜ್ ಸಿಂಗ್-ಕಾರ್ಯದರ್ಶಿ ಪ್ರವಾಸೋದ್ಯಮ ಇಲಾಖೆ, ಪಿ. ಮಣಿವಣ್ಣನ್-ಕಾರ್ಯದರ್ಶಿ ಸಮಾಜ ಕಲ್ಯಾಣ ಇಲಾಖೆ, ಮನೀಶ್ ವೌದ್ಗಲ್- ವ್ಯವಸ್ಥಾಪಕ ನಿರ್ದೇಶಕ ಆರ್‌ಜಿಆರ್‌ಎಚ್‌ಸಿಎಲ್.
ಜೆ.ರವಿ ಶಂಕರ್-ವ್ಯವಸ್ಥಾಪಕ ನಿರ್ದೇಶಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಎ.ಬಿ.ಇಬ್ರಾಹೀಂ-ಆಯುಕ್ತ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಬೆಂಗಳೂರು, ಸಮೀರ್ ಶುಕ್ಲಾ-ಆಯುಕ್ತ ಉದ್ಯೋಗ ಮತ್ತು ತರಬೇತಿ ಇಲಾಖೆ, ವಿಫುಲ್ ಬನ್ಸಾಲ್-ಆಯುಕ್ತ ಗ್ರಾಮೀಣಾಭಿವೃದ್ಧಿ ಇಲಾಖೆ, ಡಾ.ಎಂ.ಲೋಕೇಶ್- ಜಿಲ್ಲಾಧಿಕಾರಿ ಯಾದಗಿರಿ, ಉಮೇಶ್ ಕಸ್ಗಲ್-ಸದಸ್ಯ ಕರ್ನಾಟಕ ಮೇಲ್ಮನವಿ ನ್ಯಾಯ ಮಂಡಳಿ.
ಮನೋಜ್ ಜೈನ್-ವ್ಯವಸ್ಥಾಪಕ ನಿರ್ದೇಶಕ ಕೆಎಸ್‌ಎಸ್‌ಐಡಿಸಿ, ಚೈತ್ರಾ ವಿ.-ಜಿಲ್ಲಾಧಿಕಾರಿ ಹಾಸನ, ಉಜ್ವಲ್‌ಕುಮಾರ್ ಘೋಷ್-ಜಿಲ್ಲಾಧಿಕಾರಿ ಕಲಬುರಗಿ, ಬಿ.ಬಿ.ಕಾವೇರಿ-ಸಿಇಓ ಕೋಲಾರ ಜಿ.ಪಂ., ಡಾ.ವಿ.ರಾಮ ಪ್ರಸಾದ್ ಮನೋಹರ್-ಜಿಲ್ಲಾಧಿಕಾರಿ ಬಳ್ಳಾರಿ, ಕೆ.ಎಸ್.ಮಂಜುನಾಥ್-ಇಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಟಿ.ವೆಂಕಟೇಶ್-ಜಿಲ್ಲಾಧಿಕಾರಿ ಉಡುಪಿ, ಸಿ.ಪಿ.ಶೈಲಜಾ- ಸಿಒಓ ರಾಮನಗರ ಜಿ.ಪಂ., ಜೆ.ಮಂಜುನಾಥ್-ಸಿಇಓ ಚಿಕ್ಕಬಳ್ಳಾಪುರ ಜಿ.ಪಂ. ಇವರನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ.