ಮಳೆಗಾಲದಲ್ಲಿ ನಿಮ್ಮ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹೀಗೆ ಮಾಡಿ
ಸೂರ್ಯನ ದಗೆಯಿಂದ ಮಳೆಗಾಲ ರಕ್ಷಿಸುವ ಜೊತೆಗೆ ಶೀತ ಮತ್ತು ಜ್ವರವನ್ನೂ ತರುತ್ತದೆ. ಮಕ್ಕಳು ಇದರ ಪರಿಣಾಮ ಬೇಗನೇ ಪಡೆಯುತ್ತಾರೆ. ಮಕ್ಕಳ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹೆತ್ತವರು ಈ ಕೆಳಗಿನ ಆಹಾರವನ್ನು ಕೊಡಬಹುದು.
ಬಿಸಿ ಸೂಪ್:
ಕೋಳಿ ಅಥವಾ ಮೊಟ್ಟೆ ಸೂಪ್ ಉತ್ತಮ ಆಹಾರ. ಇದು ಸೋಂಕು ವಿರುದ್ಧ ಹೋರಾಡಲು ನಿರೋಧಕ ಶಕ್ತಿ ಕೊಡುತ್ತದೆ. ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಮತ್ತು ಇತರ ತರಕಾರಿಗಳು ಸೂಪ್‌ಗಳ ಬ್ಯಾಕ್ಟೀರಿಯ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಹಣ್ಣುಗಳು:
ಮುಂಗಾರಿನ ಹಣ್ಣುಗಳನ್ನು ಸೇವಿಸಬಹುದು. ಇವುಗಳು ಮಕ್ಕಳಲ್ಲಿ ನಿರೋಧಕ ಶಕ್ತಿ ಹೆಚ್ಚಿಸುತ್ತವೆ.
ಕಡಲೆಗಳು:
ಪ್ರೊಟೀನ್ ಶ್ರೀಮಂತವಾಗಿರುವ ಕಡಲೆ ಕಾಳುಗಳು ಉತ್ತಮ ಆಹಾರ. ವಿವಿಧ ವಿಟಮಿನ್‌ಗಳೂ ಇದರಲ್ಲಿ ಸಿಗುತ್ತವೆ. ಮಕ್ಕಳ ಬೆಳವಣಿಗೆಗೂ ಸಹಕಾರಿ ಮತ್ತು ಸೋಂಕು ನಿವಾರಕ.
ಅರಿಶಿಣ:
ಇದು ಅತೀ ಪ್ರಭಾವೀ ಆಂಟಿ ಆಕ್ಸಿಡಂಟ್. ನಿರೋಧಕ ಶಕ್ತಿ ಕೊಡುತ್ತದೆ. ಅರಿಶಿಣ ಬೆರೆಸಿದ ಹಾಲನ್ನು ಮಲಗುವ ಮುನ್ನ ಮಕ್ಕಳಿಗೆ ಕೊಟ್ಟರೆ ಶೀತ ಮತ್ತು ಜ್ವರದಿಂದ ತಪ್ಪಿಸಬಹುದು. ಉತ್ತಮ ನಿದ್ರೆಯೂ ಬರಲಿದೆ.
ಶುಂಠಿ ಮತ್ತು ಜೇನು:
ಶುಂಟಿ ರಸ ಮತ್ತು ಜೇನು ಜೊತೆಯಾಗಿ ಕೊಟ್ಟರೆ ಶೀತ ಮತ್ತು ಜ್ವರಕ್ಕೆ ಉತ್ತಮ ಔಷಧಿ. ಇವುಗಳ ಆಂಟಿ ಬ್ಯಾಕ್ಟೀರಿಯ ಮತ್ತು ಆಂಟಿ ವೈರಲ್ ತತ್ವಗಳು ಗಂಟಲಿಗೆ ಉತ್ತಮ ಪರಿಹಾರ. ಮಲಗುವ ಸಮಯದಲ್ಲಿ ಇದನ್ನು ಕೊಡಬಹುದು.
ತುಳಸಿ ಚಹಾ/ ಕಾಡಾ:
ತುಳಸಿ ಎಲೆಗಳಲ್ಲಿ ಫಂಗಲ್ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ವಿರೋಧಿ ತತ್ವಗಳಿವೆ. ಇವುಗಳು ಶುದ್ಧ ನಿರೋಧಕ ಶಕ್ತಿ ಹೊಂದಿವೆ. ಐದಾರು ಎಲೆ ತುಳಸಿಯನ್ನು ಚಹಾದಲ್ಲಿ ಬೆರೆಸಿ ಬೆಳಗ್ಗೆ ಕೊಟ್ಟರೆ ಮಕ್ಕಳಿಗೆ ಮುಂಗಾರಿನಲ್ಲಿ ಉತ್ತಮ ಆಹಾರ.
ಮೊಟ್ಟೆ, ಕೋಳಿ, ಮೀನು, ಧಾನ್ಯ:
ಪ್ರೊಟೀನ್ ಇರುವ ಈ ಎಲ್ಲಾ ಆಹಾರವು ಮಕ್ಕಳ ಬೆಳವಣಿಗೆಗೆ ಮತ್ತು ನಿರೋಧಕ ಶಕ್ತಿ ಹೆಚ್ಚಾಗಲು ಉತ್ತಮ.