ಆಗಸ್ಟ್ 2 ರಂದು ಸಚಿನ್ ತೆಂಡುಲ್ಕರ್ ಬ್ರೆಝಿಲ್‌ಗೆ

Update: 2016-07-22 18:12 GMT

  ಮುಂಬೈ, ಜು.22: ಭಾರತೀಯ ಕ್ರಿಕೆಟ್ ಐಕಾನ್ ಸಚಿನ್ ತೆಂಡುಲ್ಕರ್ ಅವರು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) ಅಧ್ಯಕ್ಷ ಥಾಮಸ್ ಬಾಕ್ ಹಾಗೂ ವಿಶ್ವದ ಇತರ ಪ್ರಮುಖ ಗಣ್ಯರ ಆಹ್ವಾನದ ಮೇರೆಗೆ ರಿಯೋ ಒಲಿಂಪಿಕ್ಸ್‌ಗೆ ತೆರಳಲಿದ್ದಾರೆ.

ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್‌ನ ಸದ್ಭಾವನಾ ರಾಯಭಾರಿಯೂ ಆಗಿರುವ ತೆಂಡುಲ್ಕರ್ ಆಗಸ್ಟ್ 2 ರಂದು ಬ್ರೆಝಿಲ್ ನಗರಕ್ಕೆ ತೆರಳಲಿದ್ದು, ಭಾರತೀಯ ಒಲಿಂಪಿಕ್ಸ್ ತಂಡವನ್ನು ಭೇಟಿಯಾಗಲಿದ್ದಾರೆ.

ತೆಂಡುಲ್ಕರ್ ಒಲಿಂಪಿಕ್ ಗೇಮ್ಸ್‌ಗೆ ಇದೇ ಮೊದಲ ಬಾರಿ ಭೇಟಿ ನೀಡುತ್ತಿದ್ದಾರೆ. ಆಗಸ್ಟ್ 2 ರಂದು ಅವರು ರಿಯೋ ಡಿ ಜನೈರೊಕ್ಕೆ ತೆರಳಲಿದ್ದಾರೆ. ಈ ವೇಳೆ ಅವರು ಭಾರತೀಯ ಒಲಿಂಪಿಕ್ಸ್ ತಂಡವನ್ನು ಭೇಟಿಯಾಗಿ ಶುಭ ಹಾರೈಸಲಿದ್ದಾರೆ ಎಂದು ತೆಂಡುಲ್ಕರ್‌ರ ಆಪ್ತ ಮೂಲಗಳು ತಿಳಿಸಿವೆ.

ಇತ್ತೀಚೆಗೆ ಲಂಡನ್‌ನಲ್ಲಿ ಮಂಡಿ ಚಿಕಿತ್ಸೆಗೆ ಒಳಗಾಗಿದ್ದ ಸಚಿನ್ ರಿಯೋಗೆ ಪ್ರಯಾಣ ಬೆಳೆಸಲು ಸಂಪೂರ್ಣ ಫಿಟ್ ಆಗಿದ್ದಾರೆ. ಟೀಮ್ ಇಂಡಿಯಾವನ್ನು ಬೆಂಬಲಿಸುವ ಉದ್ದೇಶದಿಂದ ರಿಯೋಗೆ ತೆರಳಲು ಸಚಿನ್ ಉತ್ಸುಕರಾಗಿದ್ದಾರೆ ಎನ್ನಲಾಗಿದೆ.

ತೆಂಡುಲ್ಕರ್ ರಿಯೋ ಗೇಮ್ಸ್‌ಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ 2024ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂಬ ಬಗ್ಗೆ ಊಹಾಪೋಹ ಕೇಳಿಬರಲಾರಂಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News