ಸುನಿಲ್ ಕುಮಾರ್
Update: 2016-07-23 15:18 IST
ಕಾಸರಗೋಡು, ಜು.23: ಜಿಲ್ಲಾಧಿಕಾರಿ ಕಚೇರಿಯ ಸೀನಿಯರ್ ಕ್ಲರ್ಕ್ ಸಿ. ಸುನಿಲ್ ಕುಮಾರ್ (44) ಶನಿವಾರ ಬೆಳಗ್ಗೆ ಪರಿಯಾರಂ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು.
ಚುನಾವಣಾ ಸಂದರ್ಭಗಳಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸುವ ಸಿಬ್ಬಂದಿಗೆ ತರಬೇತಿ ನೀಡುವ ಜವಾಬ್ದಾರಿ ಇವರದ್ದಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಮೃತರು ತಂದೆ, ತಾಯಿ, ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.