×
Ad

ದಂತಕತೆ ವರ್ಣ ಚಿತ್ರಕಾರ ಸೈಯದ್ ರಝಾ ನಿಧನ

Update: 2016-07-23 20:58 IST

ಹೊಸದಿಲ್ಲಿ, ಜು.23: ಆಧುನಿಕ ಭಾರತದ ಕಲಾವಿದ ಸೈಯದ್ ಹೈದರ್ ರಝಾ ದೀರ್ಘ ಕಾಲದ ಅಸ್ವಾಸ್ಥದ ಬಳಿಕ ಹೊಸದಿಲ್ಲಿಯಲ್ಲಿಂದು ನಿಧನರಾಗಿದ್ದಾರೆ.
ಅವರಿಗೆ 94 ವರ್ಷ ವಯಸ್ಸಾಗಿತ್ತು. ರಝಾ ವೃದ್ಧಾಪ್ಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು. ಅವರು 2 ತಿಂಗಳುಗಳಿಂದ ಖಾಸಗಿ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿದ್ದರು.
ರಝಾ ಇಂದು ಬೆಳಗ್ಗೆ 11 ಗಂಟೆಗೆ ಕೊನೆಯುಸಿರೆಳೆದರೆಂದು ಅವರ ನಿಕಟ ಮಿತ್ರ, ಕವಿ ಅಶೋಕ್ ವಾಜಪೇಯಿ ಪಿಟಿಐಗೆ ತಿಳಿಸಿದ್ದಾರೆ.
ಮೃತರ ಇಚ್ಛೆಯಂತೆ ಅವರ ಅಂತ್ಯ ಸಂಸ್ಕಾರವನ್ನು ಮಧ್ಯಪ್ರದೇಶದ ಮಂಡಲದಲ್ಲಿ ನಡೆಸಲಾಗುವುದು.
ಅಂತಾರಾಷ್ಟ್ರೀಯ ಖ್ಯಾತಿಯ ವರ್ಣಚಿತ್ರಕಾರ ರಝಾ, ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. 1983ರಲ್ಲಿ ಅವರು ಲಲಿತಕಲಾ ಅಕಾಡಮಿಯ ಫೆಲೊ ಆಗಿ ಆಯ್ಕೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News