ರಾಜ್ಯಪರ ತೀರ್ಪು ಬರುವ ವಿಶ್ವಾಸ: ಎಂ.ಬಿ.ಪಾಟೀಲ್
ಬೆಂಗಳೂರು, ಜು. 26: ಮಹಾದಾಯಿ ನದಿ ವಿವಾದಕ್ಕೆ ಸಂಬಂಧಿಸಿದ ಮಧ್ಯಾಂತರ ತೀರ್ಪು ನಾಳೆ ಹೊರಬೀಳಲಿದ್ದು, ಕರ್ನಾಟಕ ರಾಜ್ಯದ ಪರ ಆದೇಶ ಬರುವ ವಿಶ್ವಾಸವಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಇಂದಿಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗ ಳೊಂದಿಗೆ ಮಾತನಾಡಿದ ಅವರು, ನಾಳೆ ಪ್ರಕಟವಾಗಲಿರುವ ಮಹಾಾಯಿ ನದಿ ವಿವಾದದ ಮಧ್ಯಾಂತರ ತೀರ್ಪು ರಾಜ್ಯದ ಪರವಾಗಿರಲಿದೆ. ರಾಜ್ಯದ ಪರ ಹಿರಿಯ ನ್ಯಾಯವಾದಿ ಪಾಲಿ ನಾರಿಮನ್ ವಾದ ಮಂಡಿಸಿದ್ದಾರೆ ಎಂದರು.ೃಷ್ಣಾ ಜಲಭಾಗ್ಯ ನಿಗಮದ ನಿರ್ದೇಶಕರ ಮಂಡಳಿ ಸಭೆಯಲ್ಲಿಂದು ಜಲಭಾಗ್ಯ ನಿಗಮದ ಕಾಮಗಾರಿಗಳ ಪ್ರಗತಿ, ಆಗಬೇಕಾಗಿರುವ ಕಾಮಗಾರಿಗಳು, ಹಣಕಾಸಿನ ಲಭ್ಯತೆ ಇವುಗಳೆಲ್ಲದರ ಬಗ್ಗೆಯೂ ಚರ್ಚೆಗಳು ನಡೆಸಿದ್ದೇವೆ ಎಂದು ಪಾಟೀಲ್ ಇದೇ ವೇಳೆ ತಿಳಿಸಿದರು.
ರಾಜ್ಯದ ಜಲಾಶಯಗಳಲ್ಲಿರುವ ನೀರಿನ ಸಂಗ್ರಹದಲ್ಲಿ ಎಷ್ಟು ನೀರನ್ನು ಕುಡಿಯಲು ಬಳಸಬೇಕು, ಎಷ್ಟು ನೀರಿನ ಪ್ರಮಾಣವನ್ನು ಕೃಷಿ ಚಟುವಟಿಕೆಗಳಿಗೆ ಬಳಸಬೇಕು ಎಂಬ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ ಎಂದು ಪಾಟೀಲ್ ಹೇಳಿದರು.