×
Ad

ಸಾಹಿತಿಗಳೊಂದಿಗೆ ಕೃಷ್ಣ ಉಪಾಹಾರ-ಮಾತುಕತೆ

Update: 2016-07-26 23:53 IST

ಬೆಂಗಳೂರು, ಜು.26: ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಎಸ್.ಎಂ.ಕೃಷ್ಣ ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸಾಹಿತಿಗಳೊಂದಿಗೆ ಉಪಾಹಾರ ಸೇವಿಸುವ ಜೊತೆಗೆ ರಾಜ್ಯದಲ್ಲಿನ ಪ್ರಸಕ್ತ ವಿದ್ಯಮಾನಗಳ ಕುರಿತು ಮಾತುಕತೆ ನಡೆಸಿದರು.

ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರೊ.ಚಂದ್ರಶೇಖರ ಕಂಬಾರ, ಪ್ರೊ.ಕೆ.ಮರುಳಸಿದ್ದಪ್ಪ, ನಾಗತಿಹಳ್ಳಿ ಚಂದ್ರಶೇಖರ್, ಮುಖ್ಯಮಂತ್ರಿ ಚಂದ್ರು, ಜಿ.ಕಪ್ಪಣ್ಣ ಸೇರಿದಂತೆ ಹಲವರೊಂದಿಗೆ ಎಸ್.ಎಂ. ಕೃಷ್ಣ, ನಗರ ಖಾಸಗಿ ಹೊಟೇಲ್‌ನಲ್ಲಿ ಉಪಾಹಾರ ಸೇವಿಸಿ ಸಮಾಲೋಚನೆ ನಡೆಸಿದರು.

ಪ್ರಸ್ತುತ ರಾಜ್ಯ ರಾಜಕಾರಣ, ಸಾಮಾಜಿಕ ಸಮಸ್ಯೆಗಳು, ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್ ಕಾಲದ ರಾಜಕೀಯ ನಡೆ ಸೇರಿದಂತೆ ಇನ್ನಿತರವಿಷಯಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಿದರು. ಬೆಂಗಳೂರಿನಲ್ಲಿರುವ ಕಲಾಮಂದಿರಗಳ ಬಗ್ಗೆ ಕಪ್ಪಣ್ಣ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News