×
Ad

ಇಂದಿನಿಂದ ವಿಚಾರಣೆ ಆರಂಭ: ಬಲ್ಕೀಸ್‌ಬಾನು

Update: 2016-07-26 23:58 IST

ಬೆಂಗಳೂರು, ಜು.26: ರಾಜ್ಯ ಸರಕಾರವು ಇತರ ಸಮುದಾಯಗಳ ಆಯೋಗಗಳಿಗೆ ನೀಡಿದ್ದ ಕಾನೂನು ಅಧಿಕಾರವನ್ನು ರಾಜ್ಯ ಅಲ್ಪ ಸಂಖ್ಯಾತರ ಆಯೋಗಕ್ಕೂ ನೀಡಿದೆ. ಇದರಿಂದಾಗಿ, ಸಮುದಾಯಕ್ಕೆ ಆಗುವ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಶ್ರಮಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷೆ ಬಲ್ಕೀಸ್‌ಬಾನು ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿನ ಅಲ್ಪಸಂಖ್ಯಾತರ ಆಯೋಗದ ಕಚೇರಿಯಲ್ಲಿ ನ್ಯಾಯಾಲಯ ಸಭಾಂಗಣವನ್ನು ಉದ್ಘಾಟಿಸಿ ಮಾತ ನಾಡಿದ ಅವರು, ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಆಗುವಂತಹ ಅನ್ಯಾಯವನ್ನು ಸರಿಪಡಿಸಲು ನಾವು ಪ್ರಯತ್ನಿಸುತ್ತೇವೆ ಎಂದರು.ಯೋಗಕ್ಕೆ ಕಾನೂನು ಅಧಿಕಾರ ಸಿಕ್ಕಿದೆ. ಆದರೆ, ನಾವು ಯಾವುದೆ ರೀತಿಯ ತೀರ್ಪುಗಳನ್ನು ನೀಡುವುದಿಲ್ಲ. ಉಭಯ ಪಕ್ಷಗಳ(ವಾದಿ-ಪ್ರತಿವಾದಿ) ಪ್ರತಿನಿಧಿ ಗಳನ್ನು ಕರೆಸಿ, ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಬಗೆಹರಿಸಲು ಆದ್ಯತೆ ನೀಡುತ್ತೇವೆ. ಇದೊಂದು ಕೌನ್ಸಿಲಿಂಗ್ ಕೇಂದ್ರದ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಅವರು ಹೇಳಿದರು.

ಪ್ರತಿ ತಿಂಗಳು ಕನಿಷ್ಠ ನಾಲ್ಕು ದಿನಗಳ ಕಾಲ ನಾವು ದೂರುಗಳ ಬಗ್ಗೆ ವಿಚಾರಣೆ ನಡೆಸಲಿದ್ದೇವೆ. ಮುಂದಿನ ತಿಂಗಳಿನಿಂದ ಜಿಲ್ಲಾ ಮಟ್ಟದಲ್ಲೆ ವಿಚಾರಣೆಗಳನ್ನು ನಡೆಸಿ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ. ಅಲ್ಪಸಂಖ್ಯಾತ ಸಮುದಾಯದವರು ತಮಗೆ ಆಗಿರುವ ಅನ್ಯಾಯಗಳ ವಿರುದ್ಧ ನಮ್ಮ ಕೇಂದ್ರ ಕಚೇರಿ ಅಥವಾ ಜಿಲ್ಲಾ ಮಟ್ಟದಲ್ಲಿರುವ ಅಧಿಕಾರಿ ಗಳಿಗೆ ಲಿಖಿತವಾಗಿ ದೂರು ಸಲ್ಲಿಸಬೇಕು ಎಂದು ಬಲ್ಕೀಸ್‌ಬಾನು ತಿಳಿಸಿದರು.
ಮೃತ ಪೊಲೀಸ್ ಪೇದೆಯೊಬ್ಬರ ಪತ್ನಿಗೆ ಉದ್ಯೋಗ ನೀಡುವಲ್ಲಿ ಆಗು ತ್ತಿರುವ ವಿಳಂಬ, ಮಹಿಳಾ ಡಿವೈಎಸ್ಪಿಯೊಬ್ಬರಿಗೆ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದೆ ಇರುವ ರೀತಿಯಲ್ಲಿ ಕಿರುಕುಳ ನೀಡುತ್ತಿರುವುದು, ವಕ್ಫ್ ಬೋರ್ಡ್‌ಗೆ ಸೇರಿದ ಜಮೀನಿನಲ್ಲಿರುವ ಮಸೀದಿಯನ್ನು ಮತ್ತೊಬ್ಬರ ಸ್ವತ್ತು ಎಂದು ವಾದಿಸುತ್ತಿರುವ ದೂರು ಬಂದಿದೆ ಎಂದು ಅವರು ಹೇಳಿದರು.ಲ್ಲದೆ, ಕ್ರೈಸ್ತ ಸಮುದಾಯದ ಮಹಿಳೆಯೊಬ್ಬರಿಗೆ ನೌಕರಿಯಲ್ಲಿ ಬಡ್ತಿ ನೀಡುವ ವಿಚಾರದಲ್ಲಿ ತಾರತಮ್ಯ ಅನುಸರಿಸುತ್ತಿರುವ ಕುರಿತು ದೂರುಗಳು ಬಂದಿದ್ದು, ಮೊದಲ ದಿನ ಈ ನಾಲ್ಕು ಪ್ರಕರಣಗಳ ಕುರಿತು ವಿಚಾರಣೆ ನಡೆಯಲಿದೆ. ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಬಗೆಹರಿಸಲು ನಾವು ಆದ್ಯತೆ ನೀಡುತ್ತೇವೆ ಎಂದು ಬಲ್ಕೀಸ್‌ಬಾನು ತಿಳಿಸಿದರು.ಸಂದರ್ಭದಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯರಾದ ಮಹಮೂದ್ ಪಟೇಲ್, ರಫಿ ಭಂಡಾರಿ, ಅಬ್ದುಲ್ ಹಮೀದ್, ಮಹೇಂದರ್ ೈನ್, ಬಲ್ಜೀತ್‌ಸಿಂಗ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News