ಆಯಿಷಾ ಹಜ್ಜುಮ್ಮ
ಬೆಳ್ಳಾರೆ, ಜು.28: ಇಲ್ಲಿನ ನಿವಾಸಿ ಆಯಿಷಾ ಹಜ್ಜುಮ್ಮ (72) ಮೈಸೂರಿನ ತನ್ನ ಮಗಳ ಮನೆಯಲ್ಲಿ ಹೃದಯಾಘಾತದಿಂದ ಗುರುವಾರ ನಿಧನರಾದರು.
ಮೃತರು ತಮ್ಮ ಪುತ್ರರಾದ ದ.ಕ ಜಿಲ್ಲಾ ವಕ್ಫ್ ಬೋರ್ಡ್‌ನ ಸಲಹಾ ಸಮಿತಿ ಸದಸ್ಯ, ಬೆಳ್ಳಾರೆ ಹಿದಾಯ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ, ಬೆಳ್ಳಾರೆ ಮಸೀದಿಯ ಅಧ್ಯಕ್ಷರೂ ಆಗಿರುವ ಕೆ.ಎಂ. ಮುಹಮ್ಮದ್ ಹಾಜಿ ಬೆಳ್ಳಾರೆ ಹಾಗೂ ಬೆಳ್ಳಾರೆ ಮಸೀದಿಯ ಆಡಳಿತಾಧಿಕಾರಿ ಕೆ.ಎಂ. ರಶೀದ್ ಹಾಜಿ ಬೆಳ್ಳಾರೆ ಮತ್ತು 3 ಮಂದಿ ಹೆಣ್ಣು ಮಕ್ಕಳ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಬೆಳ್ಳಾರೆಯ ಝಕರಿಯಾ ಜುಮಾ ಮಸೀದಿಯ ವಠಾರದಲ್ಲಿ ದಫನ ಕಾರ್ಯ ನೆರವೇರಿಸಲಾಯಿತು.
ಮೃತರ ಮನೆಗೆ ಸಮಸ್ತ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ, ಕಾಸರಗೋಡು ಖಾಝಿ ಶೈಖುನಾ ಆಲಿಕುಟ್ಟಿ ಮುಸ್ಲಿಯಾರ್, ಸಮಸ್ತ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಅಲ್ಖಾಸಿಮಿ ಬಂಬ್ರಾಣ ಸಹಿತ ಹಲವು ಧಾರ್ಮಿಕ, ರಾಜಕೀಯ ಹಾಗೂ ಸಾಮಾಜಿಕ ಮುಖಂಡರು ಭೇಟಿ ನೀಡಿ ಸಂತಾಪ ಸೂಚಿಸಿದರು.
ಬೆಳ್ಳಾರೆ ಅನ್ಸಾರಿಯ ದಫ್ ಕಮಿಟಿ, ಸುನ್ನಿ ಮಹಲ್ ಫೆಡರೇಶನ್ ಬೆಳ್ಳಾರೆ, ಬೆಳ್ಳಾರೆ ಖಿದ್ಮತುಲ್ ಇಸ್ಲಾಂ ಅಸೋಸಿಯೇಶನ್, ಹಿದಾಯ ಎಜುಕೇಶನಲ್ ಟ್ರಸ್ಟ್ ಹಾಗೂ ಚಾರಿಟೇಬಲ್ ಟ್ರಸ್ಟ್ ಇವುಗಳ ಸರ್ವ ಸದಸ್ಯರು ಮತ್ತು ಊರ ಸಾರ್ವಜನಿಕರು ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.