ಬೆಂಗಳೂರು: ಮೆಟ್ರೋ ಸುರಂಗದ ಬಳಿ ಭೂಕುಸಿತ
Update: 2016-08-02 14:47 IST
ಬೆಂಗಳೂರು, ಆ.2: ಕೆಂಪೇಗೌಡ ರಸ್ತೆಯ ಅಡಿಗಾಸ್ ಹೊಟೇಲ್ ಬಳಿ ರಸ್ತೆಯಲ್ಲಿ 10 ಅಡಿಗಳಷ್ಟು ದೊಡ್ಡ ಪ್ರಮಾಣದ ಭೂಕುಸಿತ ಉಂಟಾಗಿದೆ.
ಮೆಟ್ರೋ ರೈಲಿನ ಸುರಂಗದ ಸನಿಹವೇ ಈ ಕುಸಿತ ಕಂಡುಬಂದಿದೆ.
ಘಟನಾ ಸ್ಥಳಕ್ಕೆ ಬಿಎಂಆರ್ ಸಿಎಲ್ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭೂ ಕುಸಿತದಿಂದ ಮೆಟ್ರೋ ರೈಲು ಸಂಚಾರಕ್ಕೆ ಯಾವುದೇ ಆತಂಕವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.