×
Ad

ಜ್ಯುವೆಲ್ಲರಿ ಶಾಪ್‌ನಿಂದ ಕೋಟ್ಯಂತರ ರೂ. ಚಿನ್ನಾಭರಣ ಲೂಟಿ

Update: 2016-08-05 11:37 IST

 ಬೆಂಗಳೂರು, ಆ.5: ನಗರದ ಯಲಹಂಕದಲ್ಲಿರುವ ಜ್ಯುವೆಲ್ಲರಿ ಅಂಗಡಿಯೊಂದಕ್ಕೆ ಪ್ರವೇಶಿಸಿದ ಮೂವರು ದುಷ್ಕರ್ಮಿಗಳ ತಂಡ ಕೋಟ್ಯಂತರ ರೂ. ಬೆಲೆ ಬಾಳುವ ಚಿನ್ನಾಭರಣವನ್ನು ಸಿನಿಮೀಯ ರೀತಿಯಲ್ಲಿ ದರೋಡೆಗೈದಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ರಾಜಲಕ್ಷ್ಮೀ ಚಿನ್ನಾಭರಣದ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಪ್ರವೇಶಿಸಿದ ದುಷ್ಕರ್ಮಿಗಳು ಅಂಗಡಿಯಾತ ಗೋಪಾಲ್ ಎಂಬುವವರ ಮೇಲೆ ಹಲ್ಲೆ ನಡೆಸಿ 3 ಚಿನ್ನದ ಬಾಕ್ಸ್‌ಗಳನ್ನು ಕಸಿದುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.

ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News