ಹಾಜಿ ಮುಬಾರಕ್
Update: 2016-08-06 20:37 IST
ಮಂಗಳೂರು, ಆ.5: ನಗರದ ಪಾಂಡೇಶ್ವರ ಎಂ.ವಿ.ಶೆಟ್ಟಿ ರಸ್ತೆಯ ನಿವಾಸಿ ಹಾಜಿ ಮುಬಾರಕ್ (85) ಅಲ್ಪ ಕಾಲದ ಅಸೌಖ್ಯದಿಂದ ಇಂದು ಬೆಳಗ್ಗೆ ನಿಧನ ಹೊಂದಿದರು.
ಮೃತರು ಪತ್ನಿ, ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರ ಸಹಿತ ಬಂಧು, ಮಿತ್ರರನ್ನು ಅಗಲಿದ್ದಾರೆ.
ಕಳೆದ 30 ವರ್ಷಗಳಿಂದ ನಗರದಲ್ಲಿ ಬಟ್ಟೆ ಹಾಗೂ ಪಾದರಕ್ಷೆಗಳ ಅಂಗಡಿಯನ್ನು ಹೊಂದಿ ವ್ಯಾಪಾರ ನಡೆಸುತ್ತಿದ್ದ ಅವರು, ಕಳೆದ 20 ವರ್ಷಗಳಿಂದ ಹಂಪನಕಟ್ಟೆಯ ಬೂಟ್ ಬಝಾರ್‌ನ ಶೂ ಮಳಿಗೆಯನ್ನು ನಡೆಸುತ್ತಿದ್ದರು.
ಮೃತರ ಅಂತ್ಯ ಕ್ರಿಯೆಯು ಶನಿವಾರ ಸಂಜೆ 5:30ಕ್ಕೆ ನಗರದ ಬಂದ್‌ನ ಜುಮಾ ಮಸೀದಿಯಲ್ಲಿ ನೆರವೇರಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.