ಉಸ್ಮಾನ್ ಬೇಗ್
Update: 2016-08-06 20:57 IST
ಮಂಗಳೂರು, ಆ.5: ವೆಲೆನ್ಸಿಯಾದ ಪ್ರೈಮ್ ರೆಸಿಡೆನ್ಸಿ ಫ್ಲಾಟ್‌ನ ನಿವಾಸಿ ಉಸ್ಮಾನ್ ಬೇಗ್ (80) ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು.
ಮೃತರು ಪತ್ನಿ ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರ ಸಹಿತ ಬಂಧು, ಮಿತ್ರರನ್ನು ಅಗಲಿದ್ದಾರೆ. ಸುಮಾರು 30 ವರ್ಷಗಳಿಗೂ ಅಧಿಕ ಕಾಲ ವಿದೇಶಗಳಲ್ಲಿ ಉದ್ಯೋಗದಲ್ಲಿದ್ದ ಅವರು ಇತ್ತೀಚಿನ ವರ್ಷಗಳಲ್ಲಿ ನಿವೃತ್ತಿ ಹೊಂದಿ ಸ್ವದೇಶಕ್ಕೆ ಮರಳಿದ್ದರು.
ಮೃತರ ಮಯ್ಯಿತ್ ನಮಾಝ್ ಶನಿವಾರ ರಾತ್ರಿ ಇಶಾ ನಮಾಝಿನ ಬಳಿಕ ಕುದ್ರೋಳಿ ಜಾಮಿಯಾ ಮಸೀದಿಯಲ್ಲಿ ನೆರವೇರಿತು ಎಂದು ಮೃತರ ಕುಟುಂಬಸ್ಥರು ತಿಳಿಸಿದ್ದಾರೆ.