ಒಲಿಂಪಿಕ್ ಕ್ರೀಡಾಪಟುಗಳ ಮೈಮೇಲಿರುವ ಕೆಂಪು ವೃತ್ತ ಏನು? ಏಕೆ?
ಒಲಿಂಪಿಕ್ ಕ್ರೀಡಾಪಟುಗಳು ಮುಖ್ಯವಾಗಿ ಸಾರ್ವಕಾಲಿಕ ಶ್ರೇಷ್ಠ ಈಜುಗಾರ ಮೈಕಲ್ ಫೆಲ್ಫ್ ದೇಹದ ಮೇಲೂ ಕೆಂಪು ವೃತ್ತಗಳಿರುವುದು ಫೋಟೋಗಳಲ್ಲಿ ಕಂಡಿದೆ. ಇಂತಹ ವೃತ್ತಗಳು ಅವರ ಮೈಮೇಲೆ ಏಕೆಬಂತು ಎಂದು ಆಶ್ಚರ್ಯವೇ? ಈಜುಗಾರರು, ಜಿಮ್ನಾಸ್ಟ್‌ಗಳು ಮತ್ತು ಮುಖ್ಯವಾಗಿ ಅಮೆರಿಕದ ಒಲಿಂಪಿಕ್ ತಂಡ ಈ ವೃತ್ತಗಳನ್ನು ಚರ್ಮದ ಮೇಲೆ ಹೊಂದಿದೆ. ಈ ಕೆಂಪು ವೃತ್ತಗಳಿಗೆ ಕಪ್ಪಿಂಗ್ ಎನ್ನುತ್ತಾರೆ. ಚರ್ಮದ ಮೇಲೆ ಬಿಸಿ ಮಾಡಿದ ಕಪ್ ಗಳನ್ನು ಇಡುವ ಪುರಾತನ ಚಿಕಿತ್ಸೆ ಇದು.
ಕಪ್ಪಿಂಗ್ ಮಾಡುವುದು ಹೇಗೆ?
ಇದು ಆಕ್ಯುಪಂಕ್ಚರ್ ರೀತಿಯ ಚಿಕಿತ್ಸೆ. ಬೆಳಕಿನ ಸುಡುವ ದ್ರವವಿರುವ ಗಾಜಿನ ಕಪ್ಪಿನಿಂದ ಇದನ್ನು ಮಾಡಲಾಗುತ್ತದೆ. ಸುಡುವ ಜ್ವಾಲೆಗಳು ಹೊರ ಬಂದಾಗ ಉಷ್ಣತೆ ಕಡಿಮೆಯಾಗಿ ಹೀರಲಾರಂಭಿಸುತ್ತದೆ. ಹಾಗೆ ಕಪ್ ದೇಹಕ್ಕೆ ಅಂಟಿಕೊಳ್ಳುತ್ತದೆ. ಅಂಟಿಕೊಂಡಾಗ ಚರ್ಮವನ್ನು ದೇಹದಿಂದ ದೂರ ಎಳೆದು ರಕ್ತ ಹರಿವನ್ನು ಪ್ರಚೋದಿಸುತ್ತದೆ. ಹಾಗೆ ಕೆಂಪು ವೃತ್ತಗಳು ಬರುತ್ತವೆ. ಇವು ಮೂರ್ನಾಲ್ಕು ದಿನ ಉಳಿಯುತ್ತವೆ.
ಒಲಿಂಪಿಕ್ ಕ್ರೀಡಾಳುಗಳೇಕೆ ಇದನ್ನು ಬಳಸುತ್ತಾರೆ?
ನೋವು ಮತ್ತು ಗಾಯಗಳಿಂದ ಪರಿಹಾರವಿದು. ನಿರಂತರ ತರಬೇತಿಯ ಮತ್ತು ಸ್ಪರ್ಧೆಯ ದೈಹಿಕ ನೋವನ್ನು ಇದು ತಣಿಸುತ್ತದೆ. ನನಗೆ ಈ ವರ್ಷ ಈ ಚಿಕಿತ್ಸೆ ನೋವಿನಿಂದ ಮುಕ್ತವಾಗಲು ನೆರವಾಗಿದೆ ಎಂದು ಅಮೆರಿಕದ ಜಿಮ್ನಾಸ್ಟ್ ಅಲೆಕ್ಸ್ ನಾಡೌರ್ ಹೇಳಿದ್ದಾರೆ.
ಇದನ್ನು ಯಾರೆಲ್ಲ ಬಳಸುತ್ತಾರೆ?
ಅಥ್ಲೀಟುಗಳು ಮಾತ್ರವಲ್ಲ, ಜನಪ್ರಿಯ ಉನ್ನತ ವರ್ಗದ ವ್ಯಕ್ತಿಗಳೂ ಈ ಚಿಕಿತ್ಸೆ ಪಡೆಯುತ್ತಾರೆ. 2004ರಲ್ಲಿ ನಟ ಗ್ವೇಯ್‌ನ್ತ್ ಪಾಲ್ಟ್ರೋ ಕೂಡ ಈ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಆಸ್ಟಿನ್ ಬೈಬರ್, ವಿಕ್ಟೋರಿಯ ಬೆಕಮ್ ಮತ್ತು ಜೆನಿಫರ್ ಅನಿಸ್ಟನ್ ಕೂಡ ಇದೇ ರೀತಿಯ ಕೆಂಪು ವೃತ್ತದ ಜೊತೆಗೆ ಫೋಟೋಗಳಲ್ಲಿ ಕಾಣಿಸಿದ್ದರು. ಸೌಂದರ್ಯ ಚಿಕಿತ್ಸಾ ತಾಣ ಮತ್ತು ಸ್ಪಾಗಳಲ್ಲಿ ಮತ್ತು ಪಾರಂಪರಿಕ ಚೀನೀ ವೈದ್ಯ ಮಳಿಗೆಗಳಲ್ಲಿ ಕಪ್ಪಿಂಗ್ ಬಹಳ ಜನಪ್ರಿಯ ಚಿಕಿತ್ಸೆ.
ಕಪ್ಪಿಂಗ್ ನೋವಾಗುತ್ತದೆಯೆ?
ಬ್ರಿಟಿಷ್ ಆಕ್ಯುಪಂಕ್ಚರ್ ಕೌನ್ಸಿಲ್ ಪ್ರಕಾರ ಕಪ್ಪಿಂಗ್ ನಿಂದ ನೋವಾಗುವುದಿಲ್ಲ. ಕೆಂಪು ವೃತ್ತಗಳು ರಕ್ತ ಎಳೆದ ಕಾರಣ ಆಗುತ್ತವೆ. ಇದನ್ನು ಮಾಡಿಸಿಕೊಳ್ಳುವ ಅನುಭವ ಕೇಳಬೇಕೆಂದರೆ ಚಿಕಿತ್ಸೆ ಪಡೆಯುವುದೇ ಉತ್ತಮ ಹಾದಿ. ಪಾರಂಪರಿಕ ಚೀನೀ ವೈದ್ಯದಲ್ಲಿ ಇದು ಸಿಗುತ್ತದೆ. ಕಪ್ ಇಟ್ಟಲ್ಲಿ ಬಿಗಿತ, ಒತ್ತಡ ಮತ್ತು ಹಿತಾನುಭವ ಇರುತ್ತದೆ. ನೋಡುವಾಗ ಅದರ ಅನುಭವ ಭೀಕರ ಎಂದು ಅನಿಸಿದರೂ ವಾಸ್ತವದಲ್ಲಿ ಹಾಗಿಲ್ಲ.
ಇದರಿಂದ ಲಾಭವಿದೆಯೆ?
ಸ್ನಾಯು ಸಮಸ್ಯೆ, ನೋವು ನಿವಾರಣೆ, ಆರ್ಥರೈಟಿಸ್, ನಿದ್ರಾರಾಹಿತ್ಯ, ಅಂಡಾಂಶ ವಿಷಯ ಮತ್ತು ಸೆಲ್ಯುಲೈಟ್ ಮೊದಲಾದ ವಿಷಯಗಳಲ್ಲಿ ಕಪ್ಪಿಂಗ್ ನೆರವಾಗುತ್ತದೆ ಎನ್ನಲಾಗಿದೆ. ಪಾರಂಪರಿಕ ಚೀನೀ ವೈದ್ಯದಲ್ಲಿ ಶಕ್ತಿಯ ಹರಿವಿಗೆ ಇದನ್ನು ಬಳಸಲಾಗಿದೆ ಎಂಬ ವಿವರವಿದೆ. ಗುರುತು ಹೆಚ್ಚು ಗಾಢವಿದ್ದಷ್ಟು ದೇಹದ ಆ ಭಾಗದಲ್ಲಿ ರಕ್ತದ ಹರಿವು ಬಡವಾಗಿರುವುದು ತೋರಿಸುತ್ತದೆ. ಬಹಳಷ್ಟು ಗ್ರಾಹಕರು ಈ ಚಿಕಿತ್ಸೆಯಿಂದ ಹಿತವಾಗಿದೆ ಎನ್ನುತ್ತಾರೆ.