ಈ ದೇಶದಲ್ಲಿ ಮಕ್ಕಳಿಗೆ ಸಸ್ಯಾಹಾರ ತಿನ್ನಿಸಿದರೆ ಜೈಲು ಶಿಕ್ಷೆ

Update: 2016-08-11 07:29 GMT

ಸಂಸತ್ ಸದಸ್ಯರಾದ ಎಲ್ವಿರಾ ಸಾವಿನೋ ಪ್ರಸ್ತಾಪಿಸಿರುವ ಮಸೂದೆ ಅಂಗೀಕಾರವಾದರೆ ತಮ್ಮ ಮಕ್ಕಳು ಸಸ್ಯಾಹಾರಿಗಳಾಗಬೇಕು ಎಂದು ಬಯಸುವ ಇಟಲಿಯ ಹೆತ್ತವರು ನಾಲ್ಕು ವರ್ಷಗಳನ್ನು ಜೈಲಿನಲ್ಲಿ ಕಳೆಯಬೇಕು. ಸಂಪ್ರದಾಯವಾದಿ ಫೋರ್ಜಾ ಇಟಾಲಿಯ ಪಕ್ಷದ ಸಾವಿನೋ ಹೊಸ ಮಸೂದೆಯೊಂದನ್ನು ಮುಂದಿಟ್ಟಿದ್ದಾರೆ. ಅದರ ಪ್ರಕಾರ “ಮಕ್ಕಳ ಆರೋಗ್ಯಕರ ಮತ್ತು ಸಮತೋಲಿತ ಪ್ರಗತಿಗೆ ಅಗತ್ಯವಾಗಿರುವ ಆಹಾರವನ್ನು ಮಕ್ಕಳಿಗೆ ನೀಡದೆ ಇರುವ ಜವಾಬ್ದಾರಿಯನ್ನು ಹೆತ್ತವರು ಹೊತ್ತುಕೊಳ್ಳಬೇಕು”. ಈ ಮಸೂದೆಯನ್ನು ಅವರು ಕೆಳಮನೆಯ ಮುಂದಿಟ್ಟಿದ್ದಾರೆ.

“ನನಗೆ ಸಸ್ಯಾಹಾರಿಗಳ ಮೇಲೆ ಕೋಪವಿಲ್ಲ. ಅದು ವಯಸ್ಕರ ಸ್ವತಂತ್ರ ಆಯ್ಕೆಯಾದರೆ ಸರಿ. ಆದರೆ ಕೆಲವು ಹೆತ್ತವರು ಹುಚ್ಚುತನದ ಹಾದಿಯಲ್ಲಿ ಸಸ್ಯಾಹಾರವನ್ನು ತಮ್ಮ ಮಕ್ಕಳ ಮೇಲೆ ಹೇರುವುದು ನನಗೆ ಸರಿ ಕಂಡಿಲ್ಲ. ಸೂಕ್ತ ವೈಜ್ಞಾನಿಕ ಜ್ಞಾನವಿಲ್ಲದೆ ಅಥವಾ ವೈದ್ಯಕೀಯ ಸಲಹೆಗಳಿಲ್ಲದೆ ಹೆತ್ತವರು ಹೀಗೆ ಮಾಡುತ್ತಿದ್ದಾರೆ. ಇಂತಹ ವಿಷಯಗಳಲ್ಲಿ ಸ್ವಂತ ಆಲೋಚನೆಗಳನ್ನೇ ನಿಜವೆಂದು ನಂಬುವುದು ನನಗೆ ಆತಂಕ ತಂದಿದೆ” ಎಂದು ಸಾವಿನೋ ಮಾಧ್ಯಮಗಳಿಗೆ ಹೇಳಿದ್ದಾರೆ. ಕೆಲವು ಮಕ್ಕಳ ತಜ್ಞರು ಮಕ್ಕಳನ್ನು ಸಸ್ಯಾಹಾರಿಗಳಾಗಿಸಬಾರದು ಎಂದು ಸಲಹೆ ನೀಡಿದ್ದಾರೆ. ಸಸ್ಯಾಹಾರದಲ್ಲಿ ಸೂಕ್ತ ಪೌಷ್ಟಿಕಾಂಶವಿರುವುದಿಲ್ಲ ಎನ್ನುವುದು ಅವರ ಅಭಿಪ್ರಾಯ. ಸಸ್ಯಾಹಾರಿಗಳು ಮಾಂಸ, ಮೀನು ಮತ್ತು ಕೋಳಿಗಳನ್ನು ಮಾತ್ರವಲ್ಲದೆ, ಪ್ರಾಣಿಜನ್ಯ ಆಹಾರಗಳಾದ ಮೊಟ್ಟೆಗಳು ಮತ್ತು ಡೈರಿ ಉತ್ಪನ್ನಗಳನ್ನೂ ಸೇವಿಸುವುದಿಲ್ಲ. ಈ ಮಸೂದೆ ಅಂಗೀಕಾರವಾದಲ್ಲಿ ಮಕ್ಕಳನ್ನು ಸಸ್ಯಾಹಾರಿಗಳಾಗಿಸಿದ ಹೆತ್ತವರು ನಾಲ್ಕು ವರ್ಷ ಜೈಲಿಗೆ ಹೋಗಬೇಕು. ಮಕ್ಕಳಿಗೆ ಶಾಶ್ವತ ಆರೋಗ್ಯ ಸಮಸ್ಯೆಯಾದರೆ ಮತ್ತು ಮಗು ಸತ್ತು ಹೋದರೆ ಈ ಶಿಕ್ಷೆ ಏಳು ವರ್ಷಗಳ ಜೈಲಾಗಿ ಬದಲಾಗಲಿದೆ. ಈ ನಿಯಮವು 16ರೊಳಗಿನ ಮಕ್ಕಳಿಗೆ ಅನ್ವಯಿಸುತ್ತದೆ. ಮಕ್ಕಳು ಮೂರು ವರ್ಷಗಳಿಗಿಂತ ಕೆಳಗಿದ್ದರೆ ಶಿಕ್ಷೆಯ ಪ್ರಮಾಣ ಏರಲಿದೆ. 39 ವರ್ಷದ ಸಾವಿನೋರಿಗೆ ಏಳು ವರ್ಷದ ಮಗನಿದ್ದಾನೆ. ಆತ ಮಾಂಸ ತಿನ್ನುತ್ತಾನಾದರೂ ಹೆಚ್ಚೇನಲ್ಲ ಎನ್ನುತ್ತಾರೆ ಸಾವಿನೋ. ಇಟಲಿಯ ಇತ್ತೀಚೆಗಿನ ಕೆಲವು ಪ್ರಕರಣಗಳು ಹೊಸ ಕಾನೂನಿಗೆ ಕಾರಣವಾಗಿದೆ. ಸಸ್ಯಾಹಾರಿಯಾಗಿದ್ದ ಒಂದು ವರ್ಷದ ಬಾಲಕ ಮೂರು ತಿಂಗಳ ಮಗುವಿನ ತೂಕವಿದ್ದುದನ್ನು ಇಟಲಿಯ ಉತ್ತರಭಾಗದ ಮಿಲಾನ್ ನಗರದಲ್ಲಿ ಕಳೆದ ತಿಂಗಳು ವೈದ್ಯರು ವರದಿ ಮಾಡಿದ್ದಾರೆ. 2015ರಲ್ಲಿ ಇಟಲಿ ನ್ಯಾಯಾಲಯವು ವಿಚ್ಛೇದಿತ ಮಹಿಳೆಗೆ ತನ್ನ 12 ವರ್ಷದ ಮಗನನ್ನು ಸಸ್ಯಾಹಾರಿಯಾಗಿಸುವುದರ ವಿರುದ್ಧ ತೀರ್ಪು ನೀಡಿದೆ. ಬಾಲಕನ ತಂದೆ ಮಗನ ಪ್ರಗತಿ ಕುಂಠಿತವಾಗಿರುವ ಬಗ್ಗೆ ನ್ಯಾಯಾಲಯಕ್ಕೆ ಹೋಗಿದ್ದರು.

“ಹೆತ್ತವರ ಸಸ್ಯಾಹಾರದ ಹುಚ್ಚಿನಿಂದ ಕೇವಲ ಒಬ್ಬನೇ ಮಗು ಆಸ್ಪತ್ರೆಗೆ ಸೇರಿದರೂ, ಅದನ್ನು ರಕ್ಷಿಸುವುದು ನಮ್ಮ ಉದ್ದೇಶ” ಎನ್ನುತ್ತಾರೆ ಸಾವಿನೋ. ಮಕ್ಕಳ ತಜ್ಞರು ಇಂತಹ ಪ್ರಕರಣಗಳು ಬಂದಾಗ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಕರಡು ಮಸೂದೆಯನ್ನು ಸಂಸತ್ತಿನಲ್ಲಿ ಚರ್ಚೆಯಾದ ಮೇಲೆ ಅಂಗೀಕರಿಸಲಾಗಿದೆ. ಈ ವರ್ಷವೇ ಕಾಯ್ದೆ ಬರುವ ನಿರೀಕ್ಷೆಯಿದೆ.

ಕೃಪೆ: http://www.khaleejtimes.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News