ಶೀತ, ಕೆಮ್ಮು ನಿಯಂತ್ರಿಸಲು ವಿಕ್ಸ್ ಅನ್ನು ಹೀಗಲ್ಲ, ಹೀಗೆ ಬಳಸಿ

Update: 2016-08-11 10:13 GMT

ನಿಮಗೆ ಕೆಮ್ಮು ಇದ್ದು ಏದುಸಿರು ಬಿಡುತ್ತಿದ್ದರೆ ವಿಕ್ಸ್ ವೇಪೋರಬ್ ಅನ್ನು ಹಚ್ಚಿದರೆ ಸರಿಯಾಗುತ್ತದೆ. ಆದರೆ ನೀವು ಭಾಗಶಃ ಇದನ್ನು ಎದೆಗೆ ಹಚ್ಚುತ್ತೀರಿ. ಹಾಗೆ ರಾತ್ರಿ ಉತ್ತಮ ನಿದ್ರೆ ಬರುವ ಪ್ರಯತ್ನ ಮಾಡುತ್ತೇವೆ. ಆದರೆ ಬಳಕೆದಾರರ ಪ್ರಕಾರ ಈ ಆಯಿಂಟ್ಮೆಂಟನ್ನು ಬೇರೆಯೇ ತಂತ್ರದಲ್ಲಿ ಬಳಸಿದರೆ ಉತ್ತಮ. ನಿಮ್ಮ ಪಾದಗಳ ಹಿಮ್ಮಡಿಗೆ ಹಚ್ಚಿದಲ್ಲಿ ಹೆಚ್ಚು ಬೇಗನೇ ಶೀತ ಕಡಿಮೆಯಾಗಲಿದೆ.

ವಿಕ್ಸನ್ನು ಈ ರೀತಿ ಬಳಸುವ ಹಾದಿ ಫೇಸ್ಬುಕ್ಕಲ್ಲಿ ಪ್ರಸಾರಗೊಂಡಿರುವ ವಿಧಾನ. ಮುಖ್ಯವಾಗಿ ವಿಕ್ಸ್ ಹಚ್ಚಿಕೊಂಡ ಮೇಲೆ ಸಾಕ್ಸ್ ಹಾಕಿ ಮಲಗಬೇಕು. ಈ ವಿಧಾನ ಬಳಸುವವರ ಪ್ರಕಾರ ಮಲಗುವ ಮೊದಲು ವಿಕ್ಸ್ ಹಚ್ಚಿ ಸಾಕ್ಸ್ ಹಾಕಿಕೊಳ್ಳಬೇಕು. ಹಾಗೆ ಮಾಡಿದಾಗ ವಿಕ್ಸ್ ಹವೆ ಗಂಟಲಿನವರೆಗೆ ಬಂದ ಅನುಭವವಾಗುತ್ತದೆ. 2007ರ ಮಾರ್ಚ್‌ನಲ್ಲಿ ಆನ್ಲೈನಲ್ಲಿ ಮೊದಲ ಬಾರಿಗೆ ಈ ವಿಧಾನ ಪ್ರಚಾರ ಪಡೆಯಿತು. ಆದರೆ ವಿಜ್ಞಾನಿಗಳು ಈ ಅಭ್ಯಾಸವನ್ನು ನಿರಾಕರಿಸಿದ್ದಾರೆ. ಸಣ್ಣ ಮಕ್ಕಳಲ್ಲಿ ಇದು ಕೆಲಸ ಮಾಡುತ್ತದೆ ಎಂದೂ ಹೇಳಲಾಗಿದೆ.

ಡಾ ಲಿನೆ ಜಾರ್ಡನ್ ಪ್ರಕಾರ ಇದು ಒತ್ತಡ ಕಡಿಮೆ ಮಾಡುವ ಕಾರಣ ಕೆಲವರಲ್ಲಿ ಕೆಲಸ ಮಾಡಬಹುದು. ಆದರೆ ಮಗುವಿಗೆ ಪದೇ ಪದೇ ಹಲವು ದಿನಗಳಿಂದ ಶೀತವಾಗಿದ್ದರೆ ಇದೇ ವಿಧಾನವನ್ನು ನೆಚ್ಚಿಕೊಂಡು ಇರಬಾರದು. ಹಾಗಾದಾಗ ವೈದ್ಯರನ್ನು ಕಾಣಲೇಬೇಕು. ಈ ಕೆಳಗಿನ ಚಿಹ್ನೆಗಳ ಬಗ್ಗೆ ಜಾಗರೂಕರಾಗಿರಿ:

►ಮೂರು ದಿನಗಳಿಗಿಂತ ಹೆಚ್ಚು ಕಾಲ ಇರುವ ಕೆಮ್ಮು ಮತ್ತು ಜ್ವರ

►ತೇವವಾದ ಮತ್ತು ನೆಗಡಿ ಇರುವ ಕೆಮ್ಮು

►ಉಸಿರಾಡಲು ಕಷ್ಟವಾಗುವುದು

►ನಿದ್ರೆ ಮತ್ತು ಇತರ ಚಟುವಟಿಕೆಗೂ ತೊಂದರೆ ಕೊಡುವ ಕೆಮ್ಮು

►ನುಂಗಲು ಕಷ್ಟವಾಗುವುದು ಮತ್ತು ಇತರ ಸುಸ್ತಿನ ಜೊತೆಗೆ ಬರುವ ಕೆಮ್ಮು

ಹಿಮ್ಮಡಿಗಳಿಗೆ ವಿಕ್ಸ್ ಹಚ್ಚುವುದು ಲಾಭವಿಲ್ಲ ಎಂದು ತಜ್ಞರು ಹೇಳಿದರೂ ಈ ವಿಧಾನಕ್ಕೆ ಮಾರು ಹೋದ ಬೆಂಬಲಿಗರಿಗೆ ಕೊರತೆ ಇಲ್ಲ.

ಕೃಪೆ: http://www.stethnews.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News