×
Ad

ನಿಮ್ಮ ದಿನವನ್ನು ಇವುಗಳೊಂದಿಗೆ ಆರಂಭಿಸಲೇಬೇಡಿ!

Update: 2016-08-12 10:07 IST

ಬೆಳಗಿನ ಉಪಾಹಾರ ಬಹಳ ಮುಖ್ಯವಾಗಿರುವ ಆಹಾರ ಎನ್ನುವುದನ್ನು ನಾವೆಲ್ಲರೂ ತಿಳಿದಿದ್ದೇವೆ. ಆರೋಗ್ಯಕರ ಉಪಾಹಾರವನ್ನು ಬೆಳಗಿನ ಜಾವ ಸೇವಿಸುವುದು ಕ್ಯಾನ್ಸರ್ ಮತ್ತು ಮಧುಮೇಹದ ಸಮಸ್ಯೆಯನ್ನು ನಿವಾರಿಸಲಿದೆ. ಆದರೆ ಕೆಲವರ ಆಹಾರದ ಆಯ್ಕೆಯೇ ತಪ್ಪಾಗಿರಬಹುದು. ಬೆಳಗಿನ ಜಾವ ಸೇವಿಸಬಾರದ ಆಹಾರಗಳ ವಿವರ ಇಲ್ಲಿದೆ.

ಸಕ್ಕರೆ ಅಂಶವಿರುವ ಧಾನ್ಯಗಳು ಮತ್ತು ಬೇಕರಿ ವಸ್ತುಗಳು

ಕೆಲವರು ಬೆಳಗೆ ಧಾನ್ಯಗಳು ಮತ್ತು ಸಕ್ಕರೆ ಅಂಶ ಸೇವಿಸುತ್ತಾರೆ. ಅವುಗಳು ನಿಮ್ಮ ರಕ್ತದೊತ್ತಡವನ್ನು ಏರಿಸುತ್ತವೆ ಮತ್ತು ಅಷ್ಟೇ ವೇಗದಲ್ಲಿ ಇಳಿಸುತ್ತವೆ. ಶಕ್ತಿಯನ್ನು ಹೀಗೆ ಇಳಿಸಿಕೊಳ್ಳುವುದು ಉತ್ತಮವಲ್ಲ. ಹೀಗಾಗಿ ಧಾನ್ಯ ಮತ್ತು ಬೇಕರಿ ವಸ್ತುಗಳನ್ನು ಸೇವಿಸುವುದು ಬಿಡಿ. ಅಧಿಕ ಫೈಬರ್ ಮತ್ತು ಪ್ರೊಟಿನ್ ಇರುವ ಧಾನ್ಯಗಳು, ಫ್ಲಾಕ್ಸ್ ಸೀಡ್ ಮತ್ತು ವಾಲ್ನಟ್ ಗಳು ಉತ್ತಮ. ಪ್ಯಾಕೇಜ್ಡ್ ಪ್ಯಾನ್ ಕೇಕ್, ಡೋನಟ್ ಮೊದಲಾದವು ಕೊಬ್ಬು ತರಲಿದೆ. ಬದಲಾಗಿ ಗೋಧಿಯ ಟೋಸ್ಟನ್ನು ಸೇವಿಸಬಹುದು.

ಗ್ರನೋಲ

ಗ್ರನೋಲಗಳು ಜೇನು, ಸಕ್ಕರೆ, ಓಟ್ಸ್ ಮತ್ತು ಒಣ ಹಣ್ಣುಗಳ ಉತ್ತಮ ಮಿಶ್ರಣ ಎನಿಸಬಹುದು. ಆದರೆ ಇವು ಕೊಬ್ಬು ಮತ್ತು ಕ್ಯಾಲರಿಯನ್ನು ದೇಹಕ್ಕೆ ಕೊಡುತ್ತವೆ. ಸಾಮಾನ್ಯವಾಗಿ ಸಾವಯವ ಮತ್ತು ನ್ಯಾಚುರಲ್ ವಿಧದವೆಂದು ಖರೀದಿಸುತ್ತೇವೆ. ಆದರೆ ಇವೆಲ್ಲವೂ ಉಪಾಹಾರಕ್ಕೆ ಡೆಸರ್ಟ್ ಸೇವಿಸಿದಂತಾಗುತ್ತದೆ.

ಸ್ಯಾಂಡ್ ವಿಚ್ ಬೇಡ

ಬೆಳಗಿನ ಸಮಯದಲ್ಲಿ ಮೊಟ್ಟೆ, ಮಾಂಸ, ಬೆಣ್ಣೆ ಮತ್ತು ಟೋಸ್ಟ್ ಸಮತೋಲಿತ ಆಹಾರ ಎನಿಸಬಹುದು. ಆದರೆ ಸ್ಯಾಂಡ್ ವಿಚ್ ಸೇವಿಸುವಾಗ ಫ್ರೈ ಮಾಡಿದ ಮೊಟ್ಟೆ, ಸಂಸ್ಕರಿತ ಹ್ಯಾಂ ಅಥವಾ ಬೇಕನ್ ಮತ್ತು ಕೊಬ್ಬಿನ ಚೀಸ್ ಖಂಡಿತಾ ಉತ್ತಮವಲ್ಲ. ಬದಲಾಗಿ ಕಡಿಮೆ ಕೊಬ್ಬಿನ ಚೀಸ್ ಬಳಸಿ ಮನೆಯಲ್ಲೇ ಮೊಟ್ಟೆ ಬೇಯಿಸಿ.

ಸ್ಮೂಥೀಸ್

ಸ್ಮೂಥೀಸ್ ಎಂದರೆ ಸಂಸ್ಕರಿತ ಸಕ್ಕರೆ. ಬಹುತೇಕ ವಿಧಗಳಲ್ಲಿ ಕೊಬ್ಬು ತುಂಬಿದ ಹಾಲು ಇರುತ್ತವೆ. ಅವುಗಳಲ್ಲಿ ಕೆನೆ ಇದ್ದರೆ ಇನ್ನೂ ಅಪಾಯಕಾರಿ. ಮುಖ್ಯವಾಗಿ ಬೆಳಗಿನ ಉಪಾಹಾರದ ಬದಲಾಗಿ ಡೆಸರ್ಟ್ ಶೇಕ್ ಆಗಿಬಿಡುತ್ತದೆ. ಆರೋಗ್ಯಕರ ಮನೆಯಲ್ಲೇ ತಯಾರಿಸಿದ ಯೋಗಾರ್ಟ್, ಬಾದಾಮಿ ಅಥವಾ ಸ್ಕಿಮ್ ಹಾಲು ಮತ್ತು ತಾಜಾ ಹಣ್ಣುಗಳು ಮತ್ತು ಕಡಲೆಗಳನ್ನು ಸೇವಿಸಿ.

ಕೃಪೆ: http://timesofindia.indiatimes.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News