ಕೆ.ಪಿ.ಇಬ್ರಾಹೀಂ ಹರೇಕಳ
Update: 2016-08-12 19:12 IST
ಕೊಣಾಜೆ, ಆ.12: ಹರೇಕಳ ಗ್ರಾಮದ ಕಂಡಿಗ ನಿವಾಸಿ ಸಿಪಿಐಎಂನ ಸಕ್ರಿಯ ಕಾರ್ಯಕರ್ತ ಕೆ.ಪಿ.ಇಬ್ರಾಹೀಂ(52) ಹೃದಯಾಘಾತದಿಂದ ಗುರುವಾರ ನಿಧನರಾದರು.
ಮೃತರು ಡಿವೈಎಫ್‌ಐ ಹರೇಕಳ ಘಟಕದ ಅಧ್ಯಕ್ಷರಾಗಿ, ಆಲಡ್ಕ ಬದ್ರಿಯಾ ಜುಮ್ಮಾ ಮಸೀದಿ ಉಪಾಧ್ಯಕ್ಷರಾಗಿ, ಅನ್ಸಾರುಲ್ ಮಸಾಕಿನ್ ಅಧ್ಯಕ್ಷರಾಗಿ ಹಲವು ಧಾರ್ಮಿಕ ಹಾಗೂ ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ, ಓರ್ವ ಪುತ್ರ ಮತ್ತು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.