ಮಕ್ಕಳಿಗೆ ವ್ಯಾಯಾಮ ಅಗತ್ಯ ಏಕೆ ಮತ್ತು ಹೇಗೆ? ಭಾಗ 1
ಮಕ್ಕಳಿಗೂ ವ್ಯಾಯಾಮ ಅಗತ್ಯವೇ ಎಂದು ಹಿರಿಯರು ಕೇಳಿದರೆ ತಜ್ಞರು ನೀಡುವ ಉತ್ತರ ’ಹೌದು’, ಆದರೆ ಮಕ್ಕಳ ವ್ಯಾಯಾಮ ಹಿರಿಯರಷ್ಟು ಕಠಿಣವಾಗಬೇಕಿಲ್ಲ, ಬದಲಿಗೆ ನಿಯಮಿತ ಮತ್ತು ಕ್ರಮ ಬದ್ಧವಾಗಿರುವುದು ಮಾತ್ರ ಅಗತ್ಯ, ಹಾಗಂತ ಮಕ್ಕಳಿಗೆ ಕಠಿಣ ವ್ಯಾಯಾಮದ ಅಭ್ಯಾಸ, ಜಿಮ್ ಮೊದಲಾದವುಗಳ ಅಗತ್ಯ ಇಲ್ಲ, ಏಕೆಂದರೆ ಮಕ್ಕಳ ದೇಹ ಬೆಳವಣಿಗೆ ಪಡೆಯುತ್ತಿರುವ ದೇಹವಾದುದರಿಂದ ಹೆಚ್ಚಿನ ಒತ್ತಡ ಬೆಳವಣಿಗೆ ಮತ್ತು ಮಾನಸಿಕ ಕ್ಷಮತೆಯನ್ನು ಏರುಪೇರುಗೊಳಿಸಬಹುದು. ಅಲ್ಲದೇ ಇದು ಪ್ರತಿ ಮಗುವಿನ ವಯಸ್ಸು ಮತ್ತು ದೈಹಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಬೇರೆಬೇರೆಯಾಗಿರುತ್ತದೆ. ಆದರೆ ಮಕ್ಕಳಿಗೆ ನಿತ್ಯವೂ ವ್ಯಾಯಾಮ ಮಾಡಲು ಹಿರಿಯರು ಪ್ರೇರಣೆ ನೀಡುವ ಮೂಲಕ ಆಯಾ ವಯಸ್ಸಿಗೆ ತಕ್ಕ ವ್ಯಾಯಾಮಗಳನ್ನು ಮಾಡಿ ಉತ್ತಮ ಆರೋಗ್ಯ, ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಪಡೆಯಬಹುದು. ಅಲ್ಲದೇ ಈ ಅಭ್ಯಾಸಗಳು ಚಿಕ್ಕಂದಿನಿಂದಲೇ ಪ್ರಾರಂಭವಾದರೆ ಅವರ ಮುಂದಿನ ಜೀವನ ಆರೋಗ್ಯಕರ ಮತ್ತು ಉತ್ತಮ ಶರೀರ ಹೊಂದಲು ಸಾಧ್ಯವಾಗುತ್ತದೆ. ಇಂದು ಮಕ್ಕಳಿಗೆ ವ್ಯಾಯಾಮ ಮಾಡಲು ಪ್ರೇರಣೆ ನೀಡುವ ಅಗತ್ಯ ಹಿಂದಿಗಿಂತಲೂ ಹೆಚ್ಚು ಅವಶ್ಯವಾಗಿದೆ. ಏಕೆಂದರೆ ಹಿಂದಿನ ದಿನಗಳಲ್ಲಿ ನಡೆದು ಶಾಲೆಗೆ ಹೋಗುತ್ತಿದ್ದು ಆಟಗಳನ್ನೂ ಆಡುತ್ತಿದ್ದು ಸ್ವಾಭಾವಿಕವಾಗಿಯೇ ವ್ಯಾಯಾಮ ಸಿಗುತ್ತಿತ್ತು. ಆದರೆ ಇಂದಿನ ಕಂಪ್ಯೂಟರ್ ಯುಗದಲ್ಲಿ ಇವೆಲ್ಲಾ ಮೂಲೆಗುಂಪಾಗಿ ವ್ಯಾಯಾಮವಿಲ್ಲದಂತಾಗಿಬಿಟ್ಟಿದೆ. ಆದ್ದರಿಂದ ಮಕ್ಕಳಿಗೆ ವ್ಯಾಯಾಮ ಯಾವುದೇ ರೂಪದಲ್ಲಾದರೂ ದೊರಕುವಂತೆ ಮಾಡುವುದು ಪಾಲಕರ ಮತ್ತು ಪೋಷಕರ ಜವಾಬ್ದಾರಿಯೂ ಆಗಿದೆ. ನಿಮ್ಮ ಮಕ್ಕಳಿಗೆ ವ್ಯಾಯಾಮದ ಬಗ್ಗೆ ತಿಳುವಳಿಕೆ ನೀಡಲು ಕೆಲವೊಂದು ಮಾಹಿತಿಗಳು ಮುಂದಿನ ಸಂಚಿಕೆಯಲ್ಲಿ ವಿವರವಾಗಿ ನೀಡಲಾಗುತ್ತದೆ.