ಡಾ ಜಯರಾಮ ಮುಂಡೋಡಿ
Update: 2016-08-14 17:09 IST
ಸುಳ್ಯ,ಆ.14: ಖ್ಯಾತ ವೈದ್ಯ ಡಾ ಜಯರಾಮ ಮುಂಡೋಡಿಯವರು ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 70 ವರ್ಷ ವಯಸ್ಸಾಗಿತ್ತು. ಸಾಮಾಜಿಕ ಧುರೀಣರಾಗಿದ್ದ ದಿವಂಗತ ಮುಂಡೋಡಿ ಬೆಳ್ಳಿಯಪ್ಪ ಗೌಡರ ಹಿರಿಯ ಪುತ್ರರಾದ ಜಯರಾಮರು ರಾಜಕೀಯ ಮುಖಂಡರಾದ ನಿತ್ಯಾನಂದ ಮುಂಡೋಡಿ, ಭರತ್ ಮುಂಡೋಡಿಯವರ ಹಿರಿಯ ಸಹೋದರ. ಅನೇಕ ವರ್ಷಗಳಿಂದ ವೈದ್ಯರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರು.