ಫೈನಲ್‌ನಲ್ಲಿ ದೀಪಾ ಬೆಳಗಲಿಲ್ಲ

Update: 2016-08-14 18:50 GMT

ರಿಯೋ ಡಿ ಜನೈರೊ, ಆ.14: ಜಿಮ್ನಾಸ್ಟಿಕ್‌ನಲ್ಲಿ ಮೊದಲ ಬಾರಿ ಫೈನಲ್ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿ ಪದಕದ ಭರವಸೆ ಮೂಡಿಸಿದ್ದ ಭಾರತದ ದೀಪಾ ಕರ್ಮಾಕರ್ ಇಂದು ನಡೆದ ಫೈನಲ್‌ನಲ್ಲಿ ನಾಲ್ಕನೆ ಸ್ಥಾನದೊಂದಿಗೆ ಒಲಿಂಪಿಕ್ಸ್ ಅಭಿಯಾನ ಕೊನೆಗೊಳಿಸಿದರು.

 ದೀಪಾ ವನಿತೆಯರ ವಾಲ್ಟ್ ವಿಭಾಗದಲ್ಲಿ 15.066 ಅಂಕದೊಂದಿಗೆ 4ನೆ ಸ್ಥಾನಕ್ಕೆ ತೃಪ್ತಿಪಟ್ಟರು. ಅಮೆರಿಕಾದ ಸಿಮೊನ್ ಬಿಲ್ಸ್(15.966) ಪ್ರಥಮ ಸ್ಥಾನದೊಂದಿಗೆ ಚಿನ್ನ ಪಡೆದರು. ರಶ್ಯದ ಮರಿಯ ಪಸೆಕಾ (15.253) ಎರಡನೆ ಮತ್ತು ಸ್ವಿಟ್ಝರ್ಲೆಂಡ್‌ನ ಜುಲಿಯಾ ಸ್ಟಿಯೆನ್ ಗ್ರೊಬೆರ್(15.216)ಮೂರನೆ ಸ್ಥಾನದೊಂದಿಗೆ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಹಂಚಿಕೊಂಡರು. ತ್ರಿಪುರಾದ ಜಿಮ್ನಾಸ್ಟ್ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಎಂಟನೆ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದ್ದರು.
ದೀಪಾ ‘ಪ್ರೊಡುನೋವಾ ವಾಲ್ಟ್’ ನಲ್ಲಿ ಯಶಸ್ವಿಯಾಗಿ ಫೈನಲ್ ತಲುಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News