ಒಲಿಂಪಿಕ್ಸ್ ಪದಕವೆಂಬ ಮಾಯಾ ಜಿಂಕೆಯ ಬೆನ್ನತ್ತಿ.....!

Update: 2016-08-18 18:48 GMT

ಇತ್ತೀಚೆಗೆ ಚೀನಾ ದೇಶದ ಮಾಧ್ಯಮಗಳು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿನ ಭಾರತದ ಕಳಪೆ ಪ್ರದರ್ಶನವನ್ನು ಟೀಕಿಸುತ್ತಾ ಮತ್ತು ಅದರ ವೈಲ್ಯಕ್ಕೆ ಕಾರಣವಾದ ಹಲವು ಹಿನ್ನಲೆಯ ಅಂಶಗಳನ್ನು ಪಟ್ಟಿಸಮೇತವಾಗಿ ವಿವರಿಸಿದ ಸಂಗತಿ ನಮ್ಮ ವ್ಯವಸ್ಥೆಯನ್ನು ಪುನರ್ ವಿಮರ್ಶಿಸಿಕೊಳ್ಳುವಂತೆ ಮಾಡಿದೆ. ಸೌಕರ್ಯಗಳ ಕೊರತೆ, ಬಡತನ, ಮಹಿಳೆಯರಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳಲು ವಿಸಿರುವ ನಿಬಂಧನೆ, ಕಳೆಗುಂದುತ್ತಿರುವ ಹಾಕಿ ವೈಭವ, ಕ್ರೀಡಾಸಂಸ್ಕೃತಿ ಇಲ್ಲದಿರುವಿಕೆ, ಕ್ರಿಕೆಟ್ ಮೇಲಿನ ಅಂಧಾಭಿಮಾನ, ಆರ್ಥಿಕ ಮತ್ತು ಸಾಮಾಜಿಕವಾಗಿ ಹಲವು ವರ್ಗಗಳು ಶಿಕ್ಷಣ ಹಾಗೂ ಇನ್ನಿತರ ಅಂಶಗಳಿಂದ ದೂರ ಉಳಿದಿರುವುದು- ಇವು ಚೀನಾ ಪಟ್ಟಿ ಮಾಡಿದ ಪ್ರಮುಖ ಅಂಶಗಳು. ಈ ಎಲ್ಲ ಅಂಶಗಳನ್ನು ಇಡಿಯಾಗಿ ಅಧ್ಯಯನ ಮಾಡುವುದಕ್ಕೂ ಮೊದಲು ಒಂದು ಕ್ಷಣ ಈ ಸುದೀರ್ಘ 116 ವರ್ಷಗಳ ಭಾರತದ ಒಲಿಂಪಿಕ್ಸ್ ಯಾನದ ಯಶೋಗಾಥೆ ಮತ್ತು ವೈಲ್ಯಗಳೆರಡನ್ನು ನೋಡುತ್ತಾ, ಜಾಗತಿಕ ಮತ್ತು ದೇಶೀಯ ಮಟ್ಟದಲ್ಲಾದ ಬದಲಾವಣೆಗಳೊಂದಿಗೆ ಭಾರತೀಯ ಕ್ರೀಡಾ ವ್ಯವಸ್ಥೆಯ ಕುರಿತು ವಿವಿಧ ಮಜಲುಗಳಿಂದ ಚರ್ಚಿಸಬೇಕಾಗಿದೆ.

ಈ ಐತಿಹಾಸಿಕವಾದ ಒಲಿಂಪಿಕ್ಸ್ ನ ಪರಿಕಲ್ಪನೆ ಗ್ರೀಕರ ಕಾಲದಲ್ಲಾದ ಮಹತ್ತರವಾದ ಬದಲಾವಣೆ. ಸ್ಥಳೀಯ ಮಟ್ಟದಲ್ಲಿ ಹಲವಾರು ಕ್ರೀಡೆಗಳಿದ್ದರೂ ಸಹಿತ ಜಾಗತಿಕವಾಗಿ ಒಪ್ಪಿತ ಮತ್ತು ವಿಶ್ವದೆಲ್ಲೆಡೆ ಹಬ್ಬಿದ ಕ್ರೀಡೆಗಳನ್ನು ಒಂದೆಡೆ ಸೇರಿಸಿ ವಿವಿಧ ಸ್ಪರ್ಧೆಗಳ ಒಂದು ಒಕ್ಕೂಟವಾಗಿ ಈ ಒಲಿಂಪಿಕ್ಸ್ ಕ್ರೀಡಾಕೂಟ ಜನ್ಮತಾಳಿರುವಂತದ್ದು. ಆದರೆ ಕಾಲಘಟ್ಟಗಳಲ್ಲಾದ ಹಲವಾರು ಬದಲಾವಣೆಗಳಿಂದಾಗಿ ಅದರಲ್ಲೂ ಗ್ರೀಕರ ಗತವೈಭವದ ಕೊನೆಯೊಂದಿಗೆ ಈ ಪ್ರಾಚೀನವಾದ ಒಲಿಂಪಿಕ್ಸ್ ಪರಿಕಲ್ಪನೆ ಹಲವಾರು ಶತಮಾನಗಳ ಕಾಲ ಸ್ಥಗಿತಗೊಂಡಿತ್ತು. ಆದರೆ ಈ ಪ್ರಕ್ರಿಯೆಗೆ ಪುನಃ ಚಾಲನೆ ದೊರಕಿದ್ದು, 19ನೆ ಶತಮಾನದ ಅಂತಿಮ ಘಟ್ಟದಲ್ಲಿ. ಅಂದರೆ ಕ್ರಿ.ಶ 1896ರಲ್ಲಿ ಅಥೆನ್ಸ್ ನಲ್ಲಿ ಅಧುನಿಕ ಜಗತ್ತಿನ ಪ್ರಥಮ ಜಾಗತಿಕ ಕ್ರೀಡಾಕೂಟ ಸಂಭ್ರಮವಾಗಿ ಪ್ರಾರಂಭಗೊಂಡಿತು. ಆದರೆ ಭಾರತದ ವಿಷಯಕ್ಕೆ ಬರುವುದಾದರೆ ಆ ಸಂದರ್ಭದಲ್ಲಿ ಬ್ರಿಟನ್ ದೇಶದ ವಸಾಹತು ದೇಶವಾಗಿ ಭಾರತ ಪ್ರತಿನಿಸಿತ್ತು. ಕ್ರಿ.ಶ 1900ರಲ್ಲಿ ಭಾರತೀಯ ಮೂಲಕ ಬ್ರಿಟಿಷ್ ಅಕಾರಿ ನಾರ್ಮನ್ ಪಿಟ್ಜರ್ಡ್ ಎಂಬಾತ ಏಕಮಾತ್ರ ಪ್ರತಿನಿಯಾಗಿ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾಗವಹಿಸಿ ಎರಡು ರಜತ ಪದಕಗಳನ್ನು ಗಳಿಸಿದ್ದ. ಆದರೆ ಭಾರತ ಒಂದು ತಂಡವಾಗಿ ಒಲಿಂಪಿಕ್ಸ್‌ಗೆ ತೆರಳಿದ್ದು, 1920ರಲ್ಲಿ. ಆದ್ದರಿಂದ ಪ್ಯಾರಿಸ್‌ನಲ್ಲಿ 1900ರಲ್ಲಿ ಜರುಗಿದ ಒಲಿಂಪಿಕ್ಸ್‌ನಿಂದ 2016ರ ರಿಯೋ ವರೆಗಿನ ಈ ಸುದೀರ್ಘ ಪ್ರಯಾಣದಲ್ಲಿ ಭಾರತ ಗಳಿಸಿದ ಒಟ್ಟು ಪದಕಗಳ ಸಂಖ್ಯೆ 24..! (ಮೊನ್ನೆ ಮಹಿಳಾ ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಕಂಚಿನ ಪದಕ ಜಯಿಸುವ ಮೂಲಕ ಪದಕಗಳ ಸಂಖ್ಯೆ 25 ಆಗಿದೆ.) ಇದರಲ್ಲಿ ಬಹುಪಾಲು ಪದಕಗಳು ಹಾಕಿ ಮೂಲಕವೇ ಗಳಿಸಿದವುಗಳಾಗಿವೆ.

ಒಂದು ಕಾಲದಲ್ಲಿ ಅಂದರೆ 1928ರ ಆಮಸ್ಟರ್ ಡ್ಯಾಮ್ ಒಲಿಂಪಿಕ್ಸ್‌ನಿಂದ ಹಿಡಿದು 1956ರ ಮೆಲ್ಬೋರ್ನ್ ಒಲಿಂಪಿಕ್ಸ್ ವರೆಗೆ ಸತತವಾಗಿ 6 ಬಾರಿ ಸ್ವರ್ಣ ಪದಕ ಗೆದ್ದ ಗತವೈಭವ ಭಾರತದ ಹಾಕಿಯದ್ದಾಗಿತ್ತು. ಆದರೆ ಈಗ ಕಾಲ ಭಿನ್ನವಾಗಿದೆ. ಅಂತಹ ವೈಭವದ ದಿನಗಳಿಗೆ ಮುಪ್ಪು ಬಂದು ಎಷ್ಟೋ ದಶಕಗಳೇ ಕಳೆದಿವೆ. ಇಂತಹ ಸುದೀರ್ಘ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಎಡುವುತ್ತಿರುವುದಾದರೂ ಎಲ್ಲಿ..? ಎನ್ನುವ ಪ್ರಶ್ನೆ ಪ್ರತಿ ನಾಲ್ಕು ವರ್ಷದ ಈ ಜಾಗತಿಕ ಮಟ್ಟದ ಕ್ರೀಡಾಕೂಟದ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಕಾಡದೆ ಇರಲಾರದು. ಇನ್ನು ಚೀನಾ ದೇಶದ ಮಾಧ್ಯಮಗಳು ಪಟ್ಟಿ ಮಾಡಿರುವ ಅಂಶಗಳಿಗೆ ಬರುವುದಾದರೆ ಈ ಎಲ್ಲ ಅಂಶಗಳು ನಿಜಕ್ಕೂ ಕಾರಣವೇ? ಅಥವಾ ಇನ್ನಿತರ ಅಂಶಗಳು ಏನಾದರೂ ಇದೆಯೇ.? ಎನ್ನುವ ಸಂಕೀರ್ಣ ಪ್ರಶ್ನೆ ನಮ್ಮನ್ನು ಗೊಂದಲಕ್ಕೀಡು ಮಾಡುತ್ತದೆ. ಇಂತಹ ಸಂಕೀರ್ಣತೆಯ ಮಧ್ಯದಲ್ಲಿಯೂ ಕೂಡಾ ಹಲವಾರು ಆರ್ಥಿಕ ಮತ್ತು ಸಾಮಾಜಿಕ ನೆಲೆಗಟ್ಟಿನಲ್ಲಿ ಭಾರತದಷ್ಟೇ ಸಮಸ್ಯೆಗಳನ್ನು ಎದುರಿಸುತ್ತಿರುವ ಆ್ರೆೆ-ಏಷಿಯನ್ ಮತ್ತು ಲ್ಯಾಟಿನ್ ಅಮೆರಿಕದಂತಹ ರಾಷ್ಟ್ರಗಳು ಈ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಎಷ್ಟೋ ಪಾಲು ಮುಂದಿವೆ ಎನ್ನುವ ಅಂಶ ಈ ಎಲ್ಲ ಸಮಸ್ಯೆಗಳನ್ನು ನಗಣ್ಯಗೊಳಿಸುತ್ತದೆ. ಆದರೂ ಕೂಡ ಈ ಎಲ್ಲ ಸಮಸ್ಯೆಗಳ ಹಿನ್ನೆಲೆಯಲ್ಲಿಯೇ ನಾವು ಇಲ್ಲಿಯವರೆಗಿನ ಭಾರತದ ಈ ಒಲಿಂಪಿಕ್ಸ್ ಕ್ರೀಡಾಕೂಟದ ಕಳಪೆ ಪ್ರದರ್ಶನವನ್ನು ವಿಮರ್ಶಿಸುವುದು ಸೂಕ್ತವೆನಿಸುತ್ತದೆ. ಚೀನಾ ಮತ್ತು ಭಾರತ ಎರಡು ವಿಭಿನ್ನ ರಾಜಕೀಯ ವ್ಯವಸ್ಥೆಯ ಹಾಗೂ ಭಿನ್ನ ನಾಗರಿಕತೆಯ ಮೂಲಗಳಿಂದ ಬೆಳೆದುಬಂದಂತಹ ದೇಶಗಳಾಗಿರುವುದರಿಂದ ಇಲ್ಲಿ ಭಾರತದ ವಿಲತೆ ಹಾಗೂ ಚೀನಾದ ಯಶೋಗಾಥೆಯನ್ನು ಕೇವಲ ಕ್ರೀಡಾಕೂಟದ ದೃಷ್ಟಿಕೋನದಿಂದ ಮಾತ್ರವಲ್ಲದೆ, ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಮಾರ್ಗಗಳ ಮೂಲಕ ಹಾಗೂ ಅವುಗಳು ಕಂಡುಕೊಂಡ ಎರಡು ಪರ್ಯಾಯ ಚಿಂತನೆಗಳ ಮೂಲಕ ತೌಲನಿಕ ಚರ್ಚೆಯನ್ನು ಮಾಡಬೇಕಾಗಿದೆ.

ಇಂದಿನ ಬಹುಧ್ರುವೀಯ ಜಗತ್ತಿನಲ್ಲಿ (ಋ್ಠ್ಝಿಠಿಜಿಟ್ಝಚ್ಟ ಡಿಟ್ಟ್ಝ) ಈ ಎರಡು ದೇಶಗಳು ಭಿನ್ನ ಮೌಲ್ಯಗಳಿಗೆ ಹೆಸರಾದವುಗಳು. ಒಂದು ಕಡೆ ಭಾರತ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ಅಂತ ಬೀಗುತ್ತಲೇ ತನ್ನಲ್ಲಿ ಇನ್ನೂ ಉಳಿಸಿಕೊಂಡು ಬಂದಿರುವ ಪ್ರಜಾಪ್ರಭುತ್ವದ ಸಂಸ್ಥೆಗಳ ಮೂಲಕ ಬೆಳೆದುಬಂದ ಮೌಲ್ಯಗಳ ಕುರಿತು ಹೇಳುವುದಾದರೆ ಇದಕ್ಕೆ ಪರ್ಯಾಯವೆಂಬಂತೆ ಚೀನಾ ತನ್ನ ಆರ್ಥಿಕ ಮತ್ತು ದಕ್ಷ ಆಡಳಿತದ ಮೂಲಕ ಜಾರಿಗೆ ತಂದ ಕ್ರಾಂತಿಕಾರಿ ಬದಲಾವಣೆಗಳ ಬಗ್ಗೆ ಎತ್ತಿ ತೋರಿಸುತ್ತದೆ. ಆದ್ದರಿಂದ ಜಾಗತಿಕ ಮಟ್ಟದಲ್ಲಿನ ಈ ರಾಷ್ಟ್ರಗಳ ಸ್ಥಾನಮಾನವನ್ನು ಗಮನಿಸಿದಾಗ ಅವುಗಳ ಒಂದಕ್ಕೊಂದರ ಬೆಳವಣಿಗೆಯ ರೀತಿ ಮತ್ತು ಅದರ ಪರ್ಯಾಯ ಚಿಂತನೆಗಳು ಹೇಗೆ ಇಂದಿನ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿನ ಯಶಸ್ವಿಗೆ ಕಾರಣವಾಗುತ್ತಿವೆ ಎನ್ನುವ ಅಂಶಗಳನ್ನು ತಿಳಿಸಿಕೊಡುತ್ತದೆ.

ಒಂದೆಡೆ ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ಎನ್ನುವಷ್ಟರಲ್ಲಿ ಅದು ಎಷ್ಟು ಜನರಿಗೆ ಒಳಗೊಳ್ಳುವಿಕೆಯ ಅವಕಾಶ(ಐ್ಞ್ಚ್ಝ್ಠಜಿಛಿ ಟಟ್ಟಠ್ಠ್ಞಿಜಿಠಿ) ವನ್ನು ತಲುಪಿಸಿದೆ ಎಂಬುದು ತಕ್ಷಣ ನಮಗೆ ಪ್ರಶ್ನೆಯಾಗಿ ಕಾಡುತ್ತದೆ. ಮತ್ತು ಸ್ವಾತಂತ್ರೋತ್ತರ ಭಾರತದಲ್ಲಿ ವೃತ್ತಿಪರ ಕ್ರೀಡೆ ಎನ್ನುವುದು ಕೆಲವೇ ವರ್ಗದ ಸ್ವತ್ತಾಗಿರುವುದು ದುರಂತದ ನಡೆಯಾಗಿದೆ. ಏಕೆಂದರೆ ಪ್ರಾರಂಭದಿಂದಲೂ ಅಂದರೆ ಪ್ರಾಚೀನ ಕಾಲಗಳಿಂದಲೂ ಕ್ರೀಡೆಗಳು ಶ್ರಮ ಸಂಸ್ಕೃತಿಯ ಮೂಲಕ ಬೆಳೆದು ಬಂದ ಬಳುವಳಿಗಳಾಗಿವೆ. ಆದರೆ ಇಂದು ಅಂತಹ ಶ್ರಮಸಂಸ್ಕೃತಿಯ ಭಾಗವಾದ ಉತ್ಪಾದನಾ ವರ್ಗವನ್ನು (ಕ್ಟೃಟಛ್ಠ್ಚಠಿಜಿಛಿ ್ಚ್ಝ ) ಮತ್ತು ಗ್ರಾಮೀಣ ವರ್ಗಗಳನ್ನು ನಿರಂತರವಾಗಿ ಕಡೆಗಣಿಸಲಾಗುತ್ತಿದೆ. ಅದೃಷ್ಟವಶಾತ್ ಇಂತಹ ವರ್ಗಗಳ ಭಾಗವಾಗಿ ಇಂದಿನ ಒಲಿಂಪಿಕ್ಸ್ ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಹರ್ಯಾಣದ ರೊಹ್ಟಕ್ ಮೂಲದ ಸಾಕ್ಷಿ ಮಲಿಕ್, ತ್ರಿಪುರಾದ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಹಾಗೂ ಮಹಾರಾಷ್ಟ್ರದ ಬರ ಪ್ರದೇಶವಾದ ಸತಾರ್‌ನಿಂದ ಬಂದಂತಹ ಓಟಗಾರ್ತಿ ಲಲಿತಾ ಬಾಬರ್ ನಮಗೆ ಮಾದರಿಗಳಾಗಿ ಕಾಣುತ್ತಾರೆ. ಇನ್ನು ಸರಕಾರದ ನೀತಿಗಳು ಕೂಡ ಕ್ರೀಡೆಗೆ ಪೂರಕವಾದ ವಾತಾವರಣ ಒದಗಿಸುತ್ತಿಲ್ಲ. ಕಾರಣವಿಷ್ಟೇ ಜಾಗತೀಕರಣವೆಂಬ ಅಬ್ಬರದ ಸಂಸ್ಕೃತಿಯ ನಡುವೆ ಮತ್ತು ಅದರ ಪ್ರಕ್ರಿಯೆ ಮೂಲಕ ಹುಟ್ಟಿಕೊಂಡಂತಹ ಮಧ್ಯಮ ವರ್ಗವು ತಮ್ಮ ಮಕ್ಕಳನ್ನು ಇಂಜಿನಿಯರ್, ಡಾಕ್ಟರ್ ಹಾಗೂ ಇನ್ನಿತರ ಬಹುರಾಷ್ಟ್ರೀಯ ಕಂಪೆನಿಗಳಿಗೆ ಸಂಬಂತ ಕೆಲಸಗಳಿಗೆ ತಯಾರು ಮಾಡುವ ನಿಟ್ಟಿನಲ್ಲಿ ಪೋಷಕರು ಮಗ್ನರಾಗಿರುತ್ತಾರೆ. ಸರಕಾರವೂ ಕೂಡ ಆ ನಿಟ್ಟಿನಲ್ಲಿ ಹೇರಳವಾದ ಅನುದಾನವನ್ನು ನೀಡಿ ಅಂತಹ ಶಿಕ್ಷಣವನ್ನು ಓಲೈಸುತ್ತಿದೆ. ಇಂತಹ ಅಂಶದ ಮುಂದುವರಿದ ಭಾಗವಾಗಿ ಇಂದಿನ ಕೇಂದ್ರ ಸರಕಾರದ ನೂತನ ಶಿಕ್ಷಣ ಕಾಯ್ದೆ 2016ರಲ್ಲಿಯೂ ಕಾಣಬಹುದು. ಈ ಶಿಕ್ಷಣ ನೀತಿಯ ಕರಡು ಪ್ರತಿಯಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಕ್ರೀಡಾ ಶಿಕ್ಷಣಕ್ಕೆ ಸಂಬಂಧಪಟ್ಟ ಯಾವುದೇ ಮಾಹಿತಿ ಕಂಡು ಬರುವುದಿಲ್ಲ. ಇಂತಹ ನ್ಯೂನತೆಗಳೊಂದಿಗೆ ಇನ್ನು ನಮ್ಮ ಕ್ರೀಡಾ ವ್ಯವಸ್ಥೆ ಕಾರ್ಯನಿರ್ವಹಿಸಬೇಕಾಗಿರುವುದು ದೌರ್ಭಾಗ್ಯದ ಸಂಗತಿಯಾಗಿದೆ.
 
ಸರಕಾರದ ಇಂತಹ ನಡೆಗಳಿಂದಾಗಿ ಇಂದು ಕ್ರೀಡೆಯನ್ನು ವೃತ್ತಿಪರವಾಗಿ ತೆಗೆದುಕೊಳ್ಳುವವರು ಹಿಂಜರಿಯುವಂತಾಗಿದೆ. ಇನ್ನು ಈ ಎಲ್ಲ ನೀತಿಗಳ ಮಧ್ಯದಲ್ಲಿಯೂ ಕ್ರೀಡೆಯನ್ನು ಬದುಕನ್ನಾಗಿ ತೆಗೆದುಕೊಳ್ಳುವ ಕ್ರೀಡಾಪಟುಗಳನ್ನು ಸರಕಾರ ಹೀನಾಯವಾಗಿ ನೋಡಿಕೊಳ್ಳುತ್ತಿದೆ. ಇತ್ತೀಚೆಗೆ ಕ್ರೀಡಾಪಟುಗಳಿಗೆ ಸಂಬಂತ ಸಮಸ್ಯೆಗಳ ಬಗ್ಗೆ ಸಂಸದೆ ಹಾಗೂ ಬಾಕ್ಸರ್ ಮೇರಿಕೋಮ್ ಅವರು ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಪ್ರಸ್ತಾಪಿಸಿದ್ದನ್ನೂ ಗಮನಿಸಬಹುದು. ಅಂದರೆ ಬಹುತೇಕ ಕ್ರೀಡಾಪಟುಗಳು ಗುಣಮಟ್ಟದ ಆಹಾರದ ಕೊರತೆಯಿಂದ ಹಿಡಿದು ತರಬೇತಿ ಹಾಗೂ ಅದಕ್ಕೆ ಸಂಬಂಧಪಟ್ಟ ಸಂಸ್ಥೆಗಳನ್ನು ದುಸ್ಥಿತಿಯಲ್ಲಿಟ್ಟಿರುವ ಅಂಶ ಸಾಮಾನ್ಯವಾಗಿ ಕಂಡು ಬರುತ್ತಿದೆ. ಈ ಎಲ್ಲ ಕೊರತೆಗಳನ್ನು ಮೀರಿ ದಾಟುವ ಕೆಲವು ಅಪರೂಪದ ಕ್ರೀಡಾಪಟುಗಳಿಗೆ ರಾಜಕಾರಣ ಎನ್ನುವುದು ಅವರಿಗೆ ಒಂದು ಅಡ್ಡದಾಳವಾಗಿ ಕಾಡುತ್ತದೆ. ಇದಕ್ಕೆ ರ್ಇಾನ್ ಖಾನ್ ಅಭಿನಯದ ‘ಪಾನ್ ಸಿಂಗ್ ತೋಮರ್’ ಚಲನಚಿತ್ರ ಒಂದು ನೇರ ನಿದರ್ಶನವಾಗಿದೆ. ಇತ್ತೀಚಿನ ನಿದರ್ಶನವೆಂದರೆ ಒಲಿಂಪಿಕ್ಸ್‌ಗೆ ಹೋಗುವ ಮೊದಲು ದೀಪಾ ಕರ್ಮಾಕರ್‌ಗೂ ಕೂಡ ಕ್ರೀಡಾ ಸಚಿವಾಲಯ ಮತ್ತು ಭಾರತೀಯ ಕ್ರೀಡಾ ಪ್ರಾಕಾರ ಫಿಸಿಯೋವನ್ನು ಒಲಿಂಪಿಕ್ಸ್ ಗೆ ಕಳುಹಿಸಲು ಪ್ರಾರಂಭದಲ್ಲಿ ನಿರಾಕರಿಸಲಾಗಿತ್ತು. ಆದರೆ ದೀಪಾ ಜಿಮ್ನಾಸ್ಟಿಕ್ಸ್‌ನಲ್ಲಿ ೈನಲ್ ಪ್ರವೇಶಿಸಿ ಹೊಸ ಇತಿಹಾಸ ಬರೆದ ತಕ್ಷಣ ಫಿಸಿಯೋವನ್ನು ರಿಯೋಗೆ ಕಳುಹಿಸಲಾಯಿತು. ಮತ್ತು ಬಾಕ್ಸರ್ ನರಸಿಂಗ್ ಯಾದವ್‌ನಂತಹ ಕ್ರೀಡಾಪಟುಗಳಿಗೆ ಉದ್ದೀಪನಾ ಸೇವನೆಯ ಆರೋಪದಿಂದಾಗಿ ಕ್ರೀಡಾಕೂಟದಿಂದ ಹೊರಗೊಳಿಸುವ ಪ್ರಯತ್ನಗಳನ್ನು ನೋಡಿದರೆ ನಮಗೆ ಅರ್ಥವಾಗುತ್ತದೆ. ರಾಜಕಾರಣದ ಬೇರುಗಳು ಕ್ರೀಡೆಯಲ್ಲಿಯೂ ಸಹ ಎಷ್ಟು ಆಳವಾಗಿ ಊರಿವೆ ಎನ್ನಲು ಇವಿಷ್ಟೇ ಸಾಕು.

ಇವೆಲ್ಲಾ ಅಂಶಗಳನ್ನು ಗಮನಿಸಿದಾಗ ಭಾರತದ ರಾಜಕೀಯ ವ್ಯವಸ್ಥೆಯನ್ನು ಒಂದು ರೀತಿಯ ದೋಷಪೂರಿತ ಪ್ರಜಾಪ್ರಭುತ್ವ (ಊ್ಝಡಿಛಿ ಈಛಿಞಟ್ಚ್ಟಚ್ಚ )ಅಂತ ಕರೆಯಬಹುದು. ಇಂತಹ ವ್ಯವಸ್ಥೆಯಲ್ಲಿ ಸಾರ್ವಜನಿಕ ಚುನಾವಣೆಗಳು, ವ್ಯಕ್ತಿ ಸ್ವಾತಂತ್ರ್ಯಗಳು ಸಾಮಾನ್ಯವಾಗಿದ್ದರೂ ಸಹಿತ ಆಡಳಿತದಲ್ಲಿನ ಗುಣಮಟ್ಟ ಮತ್ತು ಕೀಳು ರಾಜಕೀಯ ಸಂಸ್ಕೃತಿಗಳಿಂದ ಇಲ್ಲಿ ಜರಗುವ ಪ್ರಕ್ರಿಯೆಗಳಿಗೆ ಅದರಲ್ಲೂ ಕ್ರೀಡೆಯನ್ನೊಳಗೊಂಡಂತಹ ಅಂಶಗಳಿಗೆ ರಾಜಕೀಯ ಎನ್ನುವುದು ದಾಳವಾಗಿ ಬಿಡುತ್ತದೆ. ಇನ್ನು ಈ ಎಲ್ಲ ವ್ಯವಸ್ಥೆಗಳನ್ನು ಬದಿಗಿಟ್ಟು ಭಾರತವನ್ನು ಚೀನಾ ದೇಶಕ್ಕೆ ಹೋಲಿಸಿದಾಗ ಕ್ರೀಡೆಗಳಿಗೆ ಸಂಬಂತ ನೀತಿಗಳನ್ನು ಜಾರಿಗೆ ತರುವಲ್ಲಿ ವಿಲವಾಗಿರುವುದು ಕಂಡು ಬರುತ್ತದೆ. ಅಲ್ಲದೆ ಚೀನಾದಂತೆ ಸಮಗ್ರ ಕ್ರೀಡಾ ನೀತಿ ಹಾಗೂ ದೂರದೃಷ್ಟಿಕೋನದ ಕೊರತೆ ಸ್ಪಷ್ಟವಾಗಿ ಕಾಣುತ್ತದೆ. ಮತ್ತು ಅಲ್ಲಿರುವ ಶ್ರೇಣಿಕೃತ ಕ್ರೀಡಾ ವ್ಯವಸ್ಥೆ(ಟಈಟಡ್ಞಿ ಖಟ್ಟಠಿ ಠಿಛಿಞ )ಯಲ್ಲಿ ಮಹತ್ವದ ಜಾಗತಿಕ ಕ್ರೀಡಾಕೂಟಗಳಿಗೆ ಸರಕಾರವೇ ಮೇಲ್ಮಟ್ಟದ ಅಕಾರದ ಮೂಲಕ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ತಯಾರು ಮಾಡುತ್ತದೆ. ಆದರೆ ಭಾರತದಲ್ಲಿ ವರ್ಷಪೂರ್ತಿ ಆಯಾ ಕ್ರೀಡೆಗೆ ಅನುಸಾರವಾಗಿ ವೃತ್ತಿಪರವಾಗಿ ಆಡುವಂತಹ ಅವಕಾಶಗಳು ತೀರಾ ಕಡಿಮೆ. ಅಲ್ಲದೆ ನಮ್ಮಲ್ಲಿ ಕ್ರಿಕೆಟ್ ಒಂದನ್ನು ಹೊರತುಪಡಿಸಿ ಕ್ರೀಡೆಯನ್ನು ಕೇವಲ ಪ್ರವೃತ್ತಿಯನ್ನಾಗಿ ನೋಡಲಾಗುತ್ತಿದೆ ಹೊರತು ವೃತ್ತಿಯನ್ನಾಗಿ ಅಲ್ಲ. ಈ ಎಲ್ಲಾ ಅಂಶಗಳೊಟ್ಟಿಗೆ ಇನ್ನೂ ಅನೇಕ ರೀತಿಯ ಸಮಸ್ಯೆಗಳು ಕೂಡ ನಮ್ಮಲ್ಲಿ ನೆಲೆಯೂರಿವೆ.

ಇನ್ನು ಆರ್ಥಿಕ ಉದಾರೀಕರಣದ 25 ವರ್ಷಗಳ ಸಂಭ್ರಮವನ್ನು ಆಚರಿ ಸುತ್ತಿರುವ ಈ ಸಂದರ್ಭದಲ್ಲಿ ಸರಕಾರದ ಉದಾರೀಕರಣದ ನೀತಿಗಳಿಂದಾಗಿಯೇ ಇಂದಿನ ಬಹುತೇಕ ಭಾರತೀಯ ಬಹು ರಾಷ್ಟ್ರೀಯ ಕಂಪೆನಿಗಳು ಸರಕಾರದ ಮೂಲಕ ಹೇರಳವಾದ ಭೂಮಿ, ವಿದ್ಯುತ್, ನೀರು ಇನ್ನಿತರ ಮೂಲ ಸೌಕರ್ಯಗಳನ್ನು ಅನುಭವಿಸಿರುವಂತದ್ದು. ಈ ಎಲ್ಲ ಲಾಭದ ಬಳುವಳಿಗಳಿಗೆ ಪರ್ಯಾಯವಾಗಿ ಕನಿಷ್ಠ ಪಕ್ಷ ಈ ಕಂಪೆನಿಗಳು ದೇಶೀಯ ಕ್ರೀಡಾಪಟುಗಳಿಗೆ ಪ್ರಾಯೋಜಕತ್ವ ನೀಡಿ ಅವರನ್ನು ದೇಶೀಯ ಮಟ್ಟದಲ್ಲಿ ಬೆಳೆಸುವ ಪ್ರಯತ್ನವನ್ನೂ ಮಾಡದಿರುವುದು ದುರಂತ.
 ಕೊನೆಯದಾಗಿ ಭಾರತದ ಈ 116 ವರ್ಷಗಳ ಸುದೀರ್ಘ ಒಲಿಂಪಿಕ್ಸ್ ಇತಿಹಾಸದಲ್ಲಿ ಅದಿನ್ನೂ ಅಂಬೆಗಾಲಿಡುತ್ತಿರುವ ಕೂಸಿನಂತಾಗಿದೆ. ಮತ್ತು ಈ ಎಲ್ಲ ಮೇಲಿನ ನ್ಯೂನ್ಯತೆಗಳನ್ನು ಈಗಲೂ ಸರಿಪಡಿಸಲು ಸರಕಾರ ಎಚ್ಚೆತ್ತುಕೊಳ್ಳದಿದ್ದರೆ ಒಲಿಂಪಿಕ್ಸ್ ಪದಕವೆನ್ನುವುದು ಕೈಗೆಟುಕದ ಮಾಯಾ ಜಿಂಕೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.


ಪದಕ ಗೆಲ್ಲದಿದ್ದರೂ ಜಿಮ್ನಾಸ್ಟಿಕ್ಸ್‌ನ ಭವಿಷ್ಯದಲ್ಲಿ ಭರವಸೆ ಮೂಡಿಸಿದ ದೀಪಾ ಕರ್ಮಾಕರ್

ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದು ಕೊನೆಗೂ ಪದಕದ ಬರ ನೀಗಿಸಿದ ಸಾಕ್ಷಿ ಮಲಿಕ್

Writer - ಮಂಜುನಾಥ ನರಗುಂದ

contributor

Editor - ಮಂಜುನಾಥ ನರಗುಂದ

contributor

Similar News