ರಸ್ತೆ ನಿರ್ಮಾಣಗಾರರ ಕಣ್ಣಿಗೆ ಬೆಣ್ಣೆ ವಾಹನ ಚಾಲಕರ ಕಣ್ಣಿಗೆ ಸುಣ್ಣ

Update: 2016-08-18 18:51 GMT

ಪ್ರತಿ ವರ್ಷ ಭಾರತದಲ್ಲಿ 5 ಲಕ್ಷ ರಸ್ತೆ ಅಪಘಾತಗಳು ವರದಿಯಾಗುತ್ತಿದ್ದು, 1.5 ಲಕ್ಷ ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಇಂತಹ ಅಪಘಾತ ಹಾಗೂ ಸಾವಿನ ಸಂಖ್ಯೆಯನ್ನು ಅರ್ಧಕ್ಕೆ ಇಳಿಸುವ ಬದ್ಧತೆಯನ್ನು ಸರಕಾರ ಇದೀಗ ಪ್ರದರ್ಶಿಸಿದೆ. ಈ ನಿಟ್ಟಿನಲ್ಲಿ ಮೋಟಾರು ವಾಹನ (ತಿದ್ದುಪಡಿ) ಮಸೂದೆಯನ್ನು ಮಂಡಿಸಿದೆ. ಇದು ಸಂಚಾರ ನಿಯಮಗಳ ಉಲ್ಲಂಘನೆಗೆ ವಿಸುತ್ತಿದ್ದ ದಂಡವನ್ನು ಗಣನೀಯವಾಗಿ ಹೆಚ್ಚಿಸುವ ಪ್ರಸ್ತಾವವನ್ನೊಳಗೊಂಡಿದೆ. ಆದರೆ ಕಾನೂನನ್ನು ಆಂಗೀಕರಿಸುವುದು ಸುಲಭ. ಆದರೆ ವಾಸ್ತವವಾಗಿ ತಡೆ ಎದುರಾಗುವುದು ಅದನ್ನು ಅನುಷ್ಠಾನಗೊಳಿಸುವ ಹಂತದಲ್ಲಿ ಎನ್ನುತ್ತಾರೆ ತಜ್ಞರು.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಲೋಕಸಭೆಯಲ್ಲಿ ಆಗಸ್ಟ್ 9ರಂದು ಮೋಟಾರು ವಾಹನ (ತಿದ್ದುಪಡಿ) ಮಸೂದೆ- 2016ನ್ನು ಮಂಡಿಸಿದ್ದಾರೆ. ಇದನ್ನು ರೂಪಿಸುವಲ್ಲಿ ಕೂಡಾ ಕೇಂದ್ರ ಸರಕಾರ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಅಂಕಿ ಅಂಶಗಳನ್ನು ಪರಿಗಣಿಸಿದೆ. ವಾಸ್ತವವಾಗಿ ಇದು ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿ ಸಾವುಗಳ ಅಂಕಿ ಸಂಖ್ಯೆಯನ್ನು ಕೀಳಂದಾಜು ಮಾಡಿದೆ.
ಅತಿವೇಗದ ಚಾಲನೆ, ಪರವಾನಿಗೆ ರಹಿತ ಚಾಲನೆ ಹಾಗೂ ಮದ್ಯಪಾನ ಮಾಡಿ ಚಾಲನೆ ಮಾಡಿ ಸಿಕ್ಕಿಬೀಳುವ ಅಪರಾಗಳಿಗೆ ಈ ಹಿಂದೆ ವಿಸುತ್ತಿದ್ದ ದಂಡಮೊತ್ತವನ್ನು 2000 ರೂಪಾಯಿಗಳಿಂದ 10 ಸಾವಿರ ರೂಪಾಯಿಗಳಿಗೆ ಹೆಚ್ಚಿಸಿದೆ. ಹಲವು ಪ್ರಕರಣಗಳಲ್ಲಿ ದಂಡವನ್ನು ಹತ್ತು ಪಟ್ಟು ಹೆಚ್ಚಿಸಲಾಗಿದೆ.

ಹೆಚ್ಚಿದ ದಂಡ ಎಷ್ಟು ಕಾರ್ಯಸಾಧು?
ಈ ದಂಡ ಹೆಚ್ಚಳ ಎಂದೋ ಆಗಬೇಕಿತ್ತು. 1988ರ ಮೋಟಾರು ವಾಹನ ಕಾಯ್ದೆಯಲ್ಲಿ ದಂಡ 100 ರೂಪಾಯಿಯಿಂದ ಆರಂಭವಾಗುತ್ತದೆ. ಈ ದಂಡ ಪ್ರಮಾಣ ತೀರಾ ಕಡಿಮೆ ಎನ್ನುತ್ತಾರೆ ಸೇವ್ ಲ್ೈ ೌಂಡೇಷನ್‌ನ ಕಾರ್ಯಾಚರಣೆ ವಿಭಾಗದ ನಿರ್ದೇಶಕ ಸಾಜಿ ಚೆರಿಯನ್. 1988ರ ಗ್ರಾಹಕ ಸೂಚ್ಯಂಕ ಬೆಲೆಗೆ ಹೋಲಿಸಿದರೆ, 1988ರ 100 ರೂಪಾಯಿಯ ಮೌಲ್ಯ ಇದೀಗ 800ರಿಂದ 1000 ರೂಪಾಯಿ ಆಗುತ್ತದೆ. ಇದು ಖಂಡಿತವಾಗಿಯೂ ಒಳ್ಳೆಯ ಹೆಜ್ಜೆ.

ಈ ಅಕ ದಂಡದ ಪರಿಣಾಮದ ಬಗೆಗಿನ ಅಧ್ಯಯನಗಳು ಭಿನ್ನ ಚಿತ್ರಣವನ್ನು ನೀಡುತ್ತವೆ. ಆ್ಯಕ್ಸಿಡೆಂಟ್ ಅನಾಲಿಸಿಸ್ ಆ್ಯಂಡ್ ಪ್ರಿವೆನ್ಷನ್ ನಿಯತಕಾಲಿಕದಲ್ಲಿ ಪ್ರಕಟವಾದ ನಾರ್ವೆಯ ಸಂಚಾರ ತಜ್ಞ ರೂನ್ ಎಲ್ವಿಕ್ ಅವರ ಅಧ್ಯಯನ ವರದಿಯ ಪ್ರಕಾರ, ದಂಡವನ್ನು ಹೆಚ್ಚಿಸಿದ ಕಾರಣಕ್ಕೆ ಕಾನೂನುಗಳ ಉಲ್ಲಂಘನೆ ಕಡಿಮೆಯಾಗುತ್ತದೆ ಎಂಬ ಅರ್ಥವಲ್ಲ. ಆದರೆ ಸರಾಸರಿ ಶೇ. ಒಂದರಿಂದ 12ರಷ್ಟು ಉಲ್ಲಂಘನೆ ಪ್ರಮಾಣ ಕಡಿಮೆಯಾಗುತ್ತದೆ.
ದಂಡ ಅಕವಾದಾಗ ಜನ ಪ್ರತಿಭಟನೆ ಹಾದಿ ಹಿಡಿಯುತ್ತಾರೆ ಎಂದು ಜಾನ್ ಹಾಕಿನ್ಸ್ ಸ್ಕೂಲ್ ಆ್ ಪಬ್ಲಿಕ್ ಹೆಲ್ತ್‌ನ ಪ್ರೊೆಸರ್ ಕವಿ ಭಲ್ಲಾ ಅಭಿಪ್ರಾಯಪಡುತ್ತಾರೆ. ಇತರ ದೇಶಗಳಲ್ಲಿ ದೊಡ್ಡ ಮೊತ್ತದ ದಂಡ ವಿಸಿದಾಗ ಪೊಲೀಸರು ದಂಡ ವಿಸುವ ಪ್ರಕರಣಗಳು ಕಡಿಮೆ ಮಾಡುವ ಮೂಲಕ ಜನರು ತಾಳ್ಮೆ ಕಳೆದುಕೊಳ್ಳದಂತೆ ಸಮತೋಲನ ವಹಿಸಿದ್ದಾರೆ

ಯೋಗ್ಯ ಅನುಷ್ಠಾನ
ಹಲವು ಅಧ್ಯಯನಗಳು, ಯಶಸ್ವಿ ರಸ್ತೆ ಸಾರಿಗೆ ನೀತಿಯನ್ನು ಸಮರ್ಪಕವಾಗಿ ಜಾರಿಗೊಳಿಸುವ ಅಗತ್ಯತೆಯನ್ನೂ ಪ್ರತಿಪಾದಿಸಿವೆ. ಅಂದರೆ ರಸ್ತೆಗಳಲ್ಲಿ ಹೆಚ್ಚು ಮಂದಿ ಸಂಚಾರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವುದು ಅಥವಾ ಇಲೆಕ್ಟ್ರಾನಿಕ್ ಅನುಷ್ಠಾನ ವ್ಯವಸ್ಥೆಯನ್ನು ಜಾರಿಗೊಳಿಸುವುದು ಇದರಲ್ಲಿ ಸೇರುತ್ತದೆ.
ಈ ಮಸೂದೆಯಲ್ಲಿ ಪ್ರಸ್ತಾಪಿಸಿರುವ ಒಂದು ಹೊಸ ಪ್ರಸ್ತಾವನೆಯೆಂದರೆ, ರಸ್ತೆ ಸುರಕ್ಷತೆಯ ಇಲೆಕ್ಟ್ರಾನಿಕ್ ಮೇಲ್ವಿಚಾರಣೆ ಹಾಗೂ ಕಾನೂನು ಜಾರಿಗೊಳಿಸುವ ನಿಯಮಾವಳಿಗಳನ್ನು ಸಿದ್ಧಪಡಿಸುವ ಹೊಣೆಯನ್ನು ಕೇಂದ್ರ ಸರಕಾರಕ್ಕೆ ವಹಿಸುವುದು. ಇವುಗಳನ್ನು ರಾಜ್ಯ ಸರಕಾರಗಳು ಅನುಷ್ಠಾನಕ್ಕೆ ತರಬೇಕಾಗುತ್ತದೆ. ಈ ವ್ಯವಸ್ಥೆಯಡಿ ಸ್ಪೀಡ್ ಕ್ಯಾಮೆರಾ ಅಳವಡಿಕೆ, ಕ್ಲೋಸ್ಡಿ ಸರ್ಕ್ಯೂಟ್ ಟೆಲಿವಿಷನ್ ಕ್ಯಾಮೆರಾಗಳನ್ನು ಅಳವಡಿಸುವುದು, ಸ್ಪೀಡ್ ಗನ್‌ನಂಥ ಸಾಧನಗಳ ಮೂಲಕ ನಿಯಮ ಉಲ್ಲಂಸುವವರನ್ನು ದೊಡ್ಡ ಪ್ರಮಾಣದಲ್ಲಿ ಹಿಡಿಯುವುದು ಸೇರುತ್ತದೆ.
ಹೀಗೆ ದೊಡ್ಡ ಪ್ರಮಾಣದಲ್ಲಿ ಇಲೆಕ್ಟ್ರಾನಿಕ್ ವ್ಯವಸ್ಥೆಯನ್ನು ಸಂಚಾರ ನಿಯಮ ಉಲ್ಲಂಘನೆ ಪತ್ತೆಗಾಗಿ ಅಭಿವೃದ್ಧಿಪಡಿಸುವುದರಿಂದ ಸಿಬ್ಬಂದಿ ಹಸ್ತ ಕ್ಷೇಪ ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ ಎನ್ನುವುದು ಚೆರಿಯನ್ ಅವರ ಅಭಿಪ್ರಾಯ.

ರಸ್ತೆ ವಿನ್ಯಾಸ
ಸಂಚಾರಿ ತಜ್ಞರು ಅಭಿಪ್ರಾಯಪಡುವಂತೆ, ರಸ್ತೆ ಸುರಕ್ಷತಾ ದಾಖಲೆಗಳನ್ನು ಹೊಂದಿರುವ ಬಹುತೇಕ ದೇಶಗಳಲ್ಲಿ, ಪರಿಣಾಮಕಾರಿಯಾಗಿ ವೇಗ ನಿಯಂತ್ರಣವನ್ನು ಖಾತ್ರಿಪಡಿಸುವಂತೆ ರಸ್ತೆಯನ್ನು ವಿನ್ಯಾಸಗೊಳಿಸಲಾಗುತ್ತದೆ. ಅತ್ಯಂತ ಪರಿಣಾಮಕಾರಿ ವೇಗದ ರಸ್ತೆ ವಿನ್ಯಾಸವೆಂದರೆ, ಅತ್ಯಾಧುನಿಕ ವೃತ್ತಾಕಾರದ ವಿನ್ಯಾಸ ಎಂದು ದಿಲ್ಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿಯ ಸಂಚಾರ ಯೋಜನೆಯ ತಜ್ಞ ಗೀತಂ ತಿವಾರಿ ಹೇಳುತ್ತಾರೆ. ಇಂಗ್ಲೆಂಡಿನಲ್ಲಿ ಟ್ರಾಫಿಕ್ ಸಿಗ್ನಲ್‌ಗಳ ಬದಲಾಗಿ ವೃತ್ತಾಕಾರದ ವಿನ್ಯಾಸವನ್ನು ಪರಿಚಯಿಸಲಾಗಿದೆ. ಇದು ರಸ್ತೆ ಬಳಕೆದಾರರಿಗೆ ಹೆಚ್ಚು ಸುರಕ್ಷಿತ.

ರಸ್ತೆ ಉಬ್ಬುಗಳು
ಇಷ್ಟಾಗಿಯೂ ಭಾರತದಲ್ಲಿ ಹೆಚ್ಚಿನ ಪ್ರಮಾಣದ ಸಾವು ಹಾಗೂ ಗಾಯಕ್ಕೆ ಕಾರಣವಾಗುವ ಕಳಪೆ ರಸ್ತೆ ನಿರ್ವಹಣೆ ವ್ಯವಸ್ಥೆಯನ್ನು ಹೊಸ ಮಸೂದೆ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. 2015ರಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ರಸ್ತೆ ಹೊಂಡ, ಸ್ಪೀಡ್‌ಬ್ರೇಕರ್ ಹಾಗೂ ರಸ್ತೆ ದುರಸ್ತಿ ಅಥವಾ ನಿರ್ಮಾಣ ಹಂತದಲ್ಲಿರುವ ರಸ್ತೆಗಳ ಕಾರಣಗಳಿಂದ ನಡೆದ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ಪ್ರತಿ ಅಪಘಾತ ಸಂಭವಿಸಿದ ತಕ್ಷಣ ಚಾಲಕರ ಮೇಲೆ ಗೂಬೆ ಕೂರಿಸಲಾಗುತ್ತದೆ. ಆದರೆ ರಸ್ತೆ ನಿರ್ಮಾಣ ಗುತ್ತಿಗೆದಾರರು ಅಥವಾ ಇಂಜಿನಿಯರ್‌ಗಳನ್ನು ಎಂದೂ ಹೊಣೆಗಾರರಾಗಿ ಮಾಡುವುದಿಲ್ಲ. ಈ ಅಂತರವನ್ನು ತುಂಬುವ ಪ್ರಯತ್ನ ಮಸೂದೆಯಲ್ಲಿ ಕಂಡುಬರುತ್ತಿಲ್ಲ.
ಆದ್ದರಿಂದ ಕಡ್ಡಾಯವಾಗಿ ರಸ್ತೆ ಅಪಘಾತಗಳ ವೈಜ್ಞಾನಿಕ ತನಿಖೆ ನಡೆಯಬೇಕು ಎಂದು ಚೆರಿಯನ್ ಸಲಹೆ ಮಾಡುತ್ತಾರೆ. ಇದನ್ನು ಅರ್ಥ ಮಾಡಿಕೊಳ್ಳುವ ಬಗ್ಗೆ ಪೊಲೀಸರಿಗೆ ತರಬೇತಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಅಪಘಾತಗಳ ಸಮರ್ಪಕ ವಿಶ್ಲೇಷಣೆಗೆ ಪೂರಕವಾದ ಒಂದು ಸಿದ್ಧಪಟ್ಟಿಯನ್ನು ರೂಪಿಸಿ, ಅದನ್ನು ದೇಶಾದ್ಯಂತ ಬಳಸುವ ಏಕರೂಪದ ವ್ಯವಸ್ಥೆ ಜಾರಿಯಾಗಬೇಕು
 

                            ಮಸೂದೆಯ ಇತರ ಪ್ರಮುಖ ಅಂಶಗಳು

* ಮಕ್ಕಳ ಸುರಕ್ಷೆಯ ದೃಷ್ಟಿಯಿಂದ ಮೋಟರ್‌ಸೈಕಲ್‌ನಲ್ಲಿ ನಾಲ್ಕು ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳನ್ನು ಕರೆದೊಯ್ಯು ವುದಾದರೆ, ಕಡ್ಡಾಯವಾಗಿ ಮಕ್ಕಳಿಗೂ ಹೆಲ್ಮೆಟ್ ಇರಬೇಕು. ತಪ್ಪಿದಲ್ಲಿ 1000 ರೂಪಾಯಿ ದಂಡ ವಿಸಲಾಗುತ್ತದೆ.

* ವಾಹನಗಳು ಢಿಕ್ಕಿ ಹೊಡೆದು ಪರಾರಿಯಾಗುವ ಪ್ರಕರಣಗಳ ಸಂತ್ರಸ್ತರಿಗೆ ನೀಡುವ ಪರಿಹಾರವನ್ನು 12,500 ರೂಪಾಯಿಗಳಿಂದ 25 ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಗುವುದು.

* ಅಪ್ರಾಪ್ತ ವಯಸ್ಕರು ಎಸಗುವ ಅಪಘಾತ ಕೃತ್ಯಗಳಿಗೆ ಆತನ ಪೋಷಕರು ಅಥವಾ ವಾಹನದ ಮಾಲಕರು ಹೊಣೆಗಾರರಾಗುತ್ತಾರೆ.

* ರಸ್ತೆ ಅಪಘಾತಗಳ ಸಂತ್ರಸ್ತರಿಗೆ ನೆರವಾಗುವ ಉದಾರಿಗಳಿಗೆ ಸೂಕ್ತ ರಕ್ಷಣೆ.

* ಸಮಾನರೂಪದ ವಾಹನ ಚಾಲನೆ ಪರವಾನಿಗೆ ವ್ಯವಸ್ಥೆ ಮತ್ತು ವಾಹನ ನೋಂದಣಿ ವ್ಯವಸ್ಥೆ. ಇದರ ಅನ್ವಯ ಸರಕಾರವು ವಾಹನ ಪರವಾನಿಗೆ ಹಾಗೂ ರಿಜಿಸ್ಟ್ರೇಷನ್‌ಗೆ ರಾಷ್ಟ್ರೀಯ ರಿಜಿಸ್ಟ್ರಾರ್ ನಿರ್ವಹಿಸಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ಎಲ್ಲ ರಾಜ್ಯಗಳಲ್ಲಿ ರಾಜ್ಯ ರಿಜಿಸ್ಟ್ರಾರ್‌ಗಳು ಇರುವುದು ಕಡ್ಡಾಯ.

* ಬಳಕೆದಾರರಿಗೆ, ರಸ್ತೆ ಬಳಕೆದಾರರಿಗೆ ಹಾಗೂ ಪರಿಸರಕ್ಕೆ ಹಾನಿಕಾರಕ ಎನಿಸುವ ದೋಷಯುಕ್ತ ವಾಹನಗಳನ್ನು ಮಾರುಕಟ್ಟೆಯಿಂದ ವಾಪಸು ಪಡೆಯುವಂತೆ ಸರಕಾರ ಉತ್ಪಾದಕ ಕಂಪೆನಿಗಳಿಗೆ ನಿರ್ದೇಶನ ನೀಡಲು ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News