ಪೌರ ಕಾರ್ಮಿಕರಿಗೆ ಉಚಿತ ಮನೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಆ. 19: ಪೌರ ಕಾರ್ಮಿಕರಿಗೆ ಸುಮಾರು 7.5 ಲಕ್ಷ ರೂ.ಗಳ ವೆಚ್ಚದಲ್ಲಿ ಸರಕಾರದಿಂದಲೇ ಮನೆ ಕಟ್ಟಿಸಿ ಉಚಿತವಾಗಿ ವಿತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಶುಕ್ರವಾರ ನಗರದ ಅರಮನೆ ಮೈದಾನದಲ್ಲಿ ಕರ್ನಾಟಕ ರಾಜ್ಯ ನಗರದ ಪಾಲಿಕೆ, ನಗರಸಭೆ, ಪುರಸಭೆ ಪೌರಕಾರ್ಮಿಕರ ಮಹಾಸಂಘ ಹಾಗೂ ರಾಜ್ಯದ ಎಲ್ಲ ಪೌರ ಕಾರ್ಮಿಕರ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ರಾಜ್ಯ ಮಟ್ಟದ ಬೃಹತ್ ಅಭಿನಂದನಾ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೃಶ್ಯ ಮಾಧ್ಯಮಗಳ ವಿರುದ್ಧ ನಿಡುಮಾಮಿಡಿ ಕಿಡಿ
ಹಿಂದುಳಿದ ಜನಾಂಗದ ಮುಖ್ಯಮಂತ್ರಿಯೆಂದು ಸಿದ್ದರಾಮಯ್ಯನವರು ಮತ್ತು ಸರಕಾರದ ಆಡಳಿತವನ್ನು ಮೇಲ್ಜಾತಿಯ ಕೈವಶದಲ್ಲಿರುವ ದೃಶ್ಯ ಮಾಧ್ಯಮಗಳು ಸಹಿಸಿಕೊಳ್ಳುತ್ತಿಲ್ಲ. ಹೀಗಾಗಿಯೇ ಪ್ರತಿನಿತ್ಯ ಸರಕಾರದ ವಿರೋಧಿ ಕಾರ್ಯಕ್ರಮಗಳನ್ನು ರೂಪಿಸುತ್ತಿವೆ. ಮುಖ್ಯಮಂತ್ರಿ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಈ ಸಾಧನೆಗಳನ್ನು ಗಮನಿಸಿ ಅವರ ಬೆಂಬಲ ನೀಡಿ ಇನ್ನು ಉತ್ತಮ ಆಡಳಿತ ನೀಡಲು ಸಹಕರಿಸಬೇಕು.
-ನಿಡುಮಾಮಿಡಿ ಮಠದ ವೀರಚನ್ನಮಲ್ಲ ಸ್ವಾಮೀಜಿ