ಸಂಸ್ಥೆಯ ವಿರುದ್ಧ ದುರುದ್ದೇಶದ ಅಪಪ್ರಚಾರ: ಮಲಬಾರ್ ಗೋಲ್ಡ್‌ನಿಂದ ಸ್ಪಷ್ಟನೆ

Update: 2016-08-20 14:59 GMT

ಬೆಂಗಳೂರು,ಆ.20: ಸಾಮಾಜಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ, ಪಾಕಿಸ್ತಾನದ ಸ್ವಾತಂತ್ರ ದಿನದ ಅಂಗವಾಗಿ ನಡೆದದ ಕಾರ್ಯಕ್ರಮದ್ದೆನ್ನಲಾದ, ಕೆಲವು ವ್ಯಕ್ತಿಗಳು ಕೇಕ್ ಕತ್ತರಿಸುತ್ತಿರುವ ಚಿತ್ರವನ್ನು ಪ್ರಸಿದ್ಧ ಚಿನ್ನಾಭರಣಗಳ ಮಾರಾಟ ಸಂಸ್ಥೆ ಮಲಬಾರ್ ಗೋಲ್ಡ್‌ಗೆ ಸಂಬಂಧಿಸಿದ್ದು ಎಂದು ಬಿಂಬಿಸುವ ಪ್ರಯತ್ನಗಳು ನಡೆದಿದ್ದು, ಇದನ್ನು ಸಂಸ್ಥೆಯು ಸಾರಾಸಗಟಾಗಿ ತಿರಸ್ಕರಿಸಿದೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ಮಾಧ್ಯಮಗಳ ಒಂದು ವರ್ಗವು ಸಹ ಈ ಚಿತ್ರದ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಗೋಜಿಗೆ ಹೋಗದೆ ಇದನ್ನು ಪ್ರಕಟಿಸಿರುವ ಬಗ್ಗೆ ಮಲಬಾರ್ ಗೋಲ್ಡ್ ನೋವನ್ನು ವ್ಯಕ್ತಪಡಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ಚಿತ್ರವು ಕೊಲ್ಲಿ ರಾಷ್ಟ್ರಗಳಲ್ಲಿ ಗಣನೀಯ ಕಾರ್ಯಾಚರಣೆಯನ್ನು ನಡೆಸುತ್ತಿರುವ ಇನ್ನೊಂದು ಭಾರತೀಯ ಕಂಪನಿಗೆ ಸೇರಿದ್ದಾಗಿದೆ. ಚಿತ್ರದ ಹಿನ್ನೆಲೆಯಲ್ಲಿ ಆ ಕಂಪನಿ(ಯುಎಇ ಎಕ್ಸಚೇಂಜ್)ಯ ಲೋಗೊವನ್ನು ಸಹ ಕಾಣಬಹುದಾಗಿದೆ ಎಂದು ಮಲಬಾರ್ ಗೋಲ್ಡ್ ತಿಳಿಸಿದೆ.

ಈ ಚಿತ್ರಕ್ಕೂ ನಮ್ಮ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿರುವ ಮಲಬಾರ್ ಗೋಲ್ಡ್, ಜಾಗತಿಕ ಪ್ರತಿಷ್ಠೆಯ ಬ್ರಾಂಡೊಂದರ ಕುರಿತು ಇಂತಹ ತಪ್ಪು ಮಾಹಿತಿಗಳನ್ನು ಹರಡದಂತೆ ಕೋರಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News