ಬಿಎಸ್‌ಎನ್‌ಎಲ್‌ನಿಂದ 1,099 ರೂ.ಗೆ ಮಿತಿಯಿಲ್ಲದ 3ಜಿ ಪ್ಲಾನ್,ಶೇ.50ದರ ಕಡಿತ

Update: 2016-08-24 16:22 GMT

ಹೊಸದಿಲ್ಲಿ,ಆ.24: ಪ್ರತಿಸ್ಪರ್ಧಿಗಳನ್ನು ಎದುರಿಸಲು ದಿಟ್ಟಹೆಜ್ಜೆಯನ್ನಿರಿಸಿರುವ ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ರಾಷ್ಟ್ರವ್ಯಾಪಿ 1,099 ರೂ.ಗಳಿಗೆ ಮಿತಿಯಿಲ್ಲದ 3ಜಿ ಮೊಬೈಲ್ ಡಾಟಾ ಪ್ಲಾನ್‌ನ್ನು ಬುಧವಾರ ಪ್ರಕಟಿಸಿದೆ, ಜೊತೆಗೆ ಕೆಲವು ಹಾಲಿ ಪ್ಲಾನ್‌ಗಳ ಡಾಟಾ ಬಳಕೆ ಮಿತಿಯನ್ನು ಇಮ್ಮಡಿಗೊಳಿಸಿದೆ.
ನೆಟ್‌ವರ್ಕ್‌ನಲ್ಲಿ ಸುಧಾರಣೆಗಳಿಂದಾಗಿ ಬಿಎಸ್‌ಎನ್‌ಎಲ್ ಹೆಚ್ಚೆಚ್ಚು ಗ್ರಾಹಕರನ್ನು ಆಕರ್ಷಿಸುತ್ತಿದೆ.

ವೇಗದಲ್ಲಿ ಯಾವುದೇ ಕಡಿತವಿಲ್ಲದೆ 1,099 ರೂ.ಗಳಿಗೆ ಮಿತಿಯಿಲ್ಲದ 3ಜಿ ಪ್ಲಾನ್‌ನ್ನು ನೀಡುವಲ್ಲಿ ನಾವು ಮೊದಲಿಗರಾಗಿದ್ದೇವೆ ಎಂದು ಬಿಎಸ್‌ಎನ್‌ಎಲ್‌ನ ಸಿಎಂಡಿ ಅನುಪಮ್ ಶ್ರೀವಾಸ್ತವ ಅವರು ಇಲ್ಲಿ ತಿಳಿಸಿದರು.


ಎಪ್ರಿಲ್‌ನಲ್ಲಿ ಸತತ ಮೂರನೇ ತಿಂಗಳಿಗೆ ಬಿಎಸ್‌ಎನ್‌ಎಲ್ ಅತ್ಯಧಿಕ ಚಂದಾದಾರರನ್ನು ಗಳಿಸಿಕೊಂಡಿದೆ ಎಂದು ಟ್ರಾಯ್ ಬಿಡುಗಡೆಗೊಳಿಸಿರುವ ಅಂಕಿಅಂಶಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News