ಭಾರತೀಯ ಸೇನೆಯಲ್ಲಿನ ಆಳದ ಕೊಳಕನ್ನು ತೋರಿಸುವ ಸೇನಾಕಾರಿಗಳ ಜಗಳ

Update: 2016-08-31 17:28 GMT

ತ್ತೀಚೆಗೆ ಪ್ರಸ್ತುತ ಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್, ತನ್ನ ಪೂರ್ವಾಕಾರಿಯಾದ ಸದ್ಯ ಸಚಿವರಾಗಿರುವ ಜನರಲ್ ವಿಕೆ ಸಿಂಗ್ ದುರುದ್ದೇಶಪೂರಿತವಾಗಿ ತನ್ನ ಭಡ್ತಿಯನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಘಟನೆ ಸೇನೆಯಲ್ಲಿನ ಹಿರಿಯಾಕಾರಿಗಳ ಮಧ್ಯೆ ಇರುವ ಒಳಜಗಳದ ಸಂಕ್ಷಿಪ್ತ ಚಿತ್ರಣ ನೀಡಿತ್ತು. ಆದರೆ ಎಲ್ಲರ ಗಮನದಿಂದ ದೂರವುಳಿದ ಅಂಶವೆಂದರೆ ಈ ಎಲ್ಲಾ ಸಮಸ್ಯೆಯ ಕೇಂದ್ರಬಿಂದು ಅಂದರೆ ಸೇನಾ ಸಿಬ್ಬಂದಿಯಿಂದ ನಡೆಸ್ಪಟ್ಟ ಒಂದು ನಕಲಿ ಎನ್‌ಕೌಂಟರ್. ಸುಹಾಗ್ ಸರ್ವೋಚ್ಚ ನ್ಯಾಯಾಲಯಕ್ಕೆ ವೈಯಕ್ತಿಕ ಸಾಮರ್ಥ್ಯ ದಲ್ಲಿ ಸಲ್ಲಿಸಿದ್ದ ಅಫಿದಾವಿತ್‌ನಲ್ಲಿ ವಿಕೆ ಸಿಂಗ್ ವಿರುದ್ಧ ಆರೋಪ ಮಾಡಿದ್ದರು.

ಈ ಅಫಿದಾವಿತ್‌ನಲ್ಲಿ, ‘‘ಸೇನಾ ಮುಖ್ಯಸ್ಥರಾಗಿರುವ ವಿಕೆ ಸಿಂಗ್ ನಾನು ಸೇನಾ ಕಮಾಂಡರ್ ಆಗಿ ಪದೋನ್ನತಿ ಪಡೆಯುವುದನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ’’ ಎಂದು ಅವರು ಹೇಳಿಕೊಂಡಿದ್ದರು. ಈ ಅಫಿದಾವಿತನ್ನು ಲೆಫ್ಟಿನೆಂಟ್ ಜನರಲ್ (ನಿವೃತ್ತ) ರವಿ ದಾಸ್ತಾನೆ, ಸುಹಾಗ್‌ರನ್ನು ಸೇನಾ ಮುಖ್ಯಸ್ಥರನ್ನಾಗಿ ನೇಮಿಸುವಲ್ಲಿ ಪಕ್ಷಪಾತ ನಡೆದಿದೆ ಎಂದು ಆರೋಪಿಸಿ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿತ್ತು. ಗೊಂದಲಮಯ ವಿಷಯ ಕೆಲವು ವರ್ಷಗಳಷ್ಟು ಹಿಂದಿನಿಂದಲೇ ನಡೆಯುತ್ತಿದೆ. 2012ರಲ್ಲಿ ಮೂರನೆ ಮುಖ್ಯವಿಭಾಗದ ಗುಪ್ತಚರ ಮತ್ತು ನಿಗಾ ವಿಭಾಗದ ಮೇಲೆ ಆರೋಪಗಳು ಬಂದಾಗ ಸುಹಾಗ್, ದೀಮಾಪುರ್‌ನಲ್ಲಿದ್ದ ಮೂರನೆ ಮುಖ್ಯವಿಭಾಗದ ಕಮಾಂಡಿಂಗ್ ಜನರಲ್ ಆಫೀಸರ್ ಆಗಿದ್ದರು. 2012ರ ಜನವರಿಯಲ್ಲಿ ಸೇನಾ ಗುಪ್ತಚರ ಅಕಾರಿ ಮೇಜರ್ ಟಿ. ರವಿಕುಮಾರ್, ಸುಹಾಗ್‌ಗೆ ಪತ್ರ ಬರೆದು ಅವರ ಗುಪ್ತಚರ ವಿಭಾಗದ ಸಹೋದ್ಯೋಗಿಗಳು ತ್ರಿವಳಿ ಹತ್ಯೆ ಮಾಡಿರುವುದಾಗಿ ಆರೋಪಿಸಿದ್ದರು. ಈ ಶಂಕಿತ ಉಗ್ರರನ್ನು ವಿಭಾಗದ ಅಕಾರಿಗಳ ಮೆಸ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಗುಪ್ತಚರ ವಿಭಾಗದ ಕಮಾಂಡಿಂಗ್ ಅಕಾರಿ ಕರ್ನಲ್ ಗೋಪಿನಾಥ್ ಶ್ರೀಕುಮಾರ್ ಈ ಹತ್ಯೆಯ ಹಿಂದಿದ್ದು ಮೇಜರ್ ರುಬೀನಾ ಕೌರ್ ಕೀರ್ ಮತ್ತು ಮೇಜರ್ ನೆಕ್ಟರ್ (21 ಪ್ಯಾರಾ-ಎಸ್‌ಎ್, ಜೋರ್ಹಟ್‌ನ ಅಕಾರಿಗಳು, ಆ ಸಮಯದಲ್ಲಿ ಗುಪ್ತಚರ ವಿಭಾಗದಲ್ಲಿ ಪರೀಕ್ಷಣಾವಯಲ್ಲಿದ್ದರು) ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು. ಈ ಆರೋಪದ ಪ್ರತಿಗಳನ್ನು ಆಗಿನ ಪೂರ್ವದ ಸೇನಾ ಕಮಾಂಡರ್ ಲೆ. ಜನರಲ್ ಬಿಕ್ರಂ ಸಿಂಗ್ ಮತ್ತು ಆಗಿನ ಸೇನಾ ಮುಖ್ಯಸ್ಥರಾಗಿದ್ದ ವಿ.ಕೆ. ಸಿಂಗ್ ಅವರಿಗೆ ಕಳುಹಿಸಲಾಗಿತ್ತು.

ದಿಲ್ಲಿಯಲ್ಲಿರುವ ಸೇನಾ ಮುಖ್ಯಕಚೇರಿಯ ಅಕಾರಿಗಳು ಈ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದರೂ ಬ್ರಿಗೇಡಿಯರ್ ನೇತೃತ್ವದ ಕೇವಲ ಒಬ್ಬ ಸದಸ್ಯನನ್ನು ತನಿಖೆಗೆ ನೇಮಿಸಲಾಗಿತ್ತು. ಇದರಿಂದ ಈ ರಹಸ್ಯ ಮತ್ತಷ್ಟು ಆಳವಾಯಿತು. ತಲೆತಿನ್ನುವ ಪ್ರಶ್ನೆಗಳು

ಕೆಲವು ಸಮಯಗಳ ನಂತರ ವಿ.ಕೆ. ಸಿಂಗ್, ಸುಹಾಗ್‌ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದರು. ನಿಯಮದಂತೆ ಒಬ್ಬ ಅಕಾರಿಯು ತನ್ನ ಮೇಲಿನ ಆರೋಪದಿಂದ ಮುಕ್ತವಾಗುವವರೆಗೆ ಆತನಿಗೆ ಭಡ್ತಿ ನೀಡುವಂತಿಲ್ಲ. ಇದೇ ಸಮಯದಲ್ಲಿ ವಿ.ಕೆ. ಸಿಂಗ್ ತನ್ನ ಸೇವಾವಯನ್ನು ವಿಸ್ತರಿಸಬೇಕು ಎಂದು ನಡೆಸುತ್ತಿದ್ದ ಹೋರಾಟದಲ್ಲಿ ವಯಸ್ಸಿನ ಕಾರಣದಿಂದ ಸೋಲುಕಂಡರು. ಇದು ಸಿಂಗ್, ತನ್ನದೇ ಆಯ್ಕೆಯ ವ್ಯಕ್ತಿಯನ್ನು ಮುಖ್ಯಸ್ಥನನ್ನಾಗಿ ನೇಮಿಸಬೇಕು ಎಂದು ಯೋಚಿಸಿದ್ದ ಜನರಲ್ ಜೆ.ಜೆ. ಸಿಂಗ್ ಜೊತೆ ನಡೆಸುತ್ತಿದ್ದ ಹಳೆಯ ಹೋರಾಟವಾಗಿತ್ತು. ಶ್ರೀಕುಮಾರ್ ಜೆ.ಜೆ. ಸಿಂಗ್‌ರ ವಿಶೇಷ ಕರ್ತವ್ಯದಲ್ಲಿದ್ದ ಅಕಾರಿ ಮತ್ತು ಅವರನ್ನು ಕೇವಲ ಸೇನೆಯ ಒಳಗಿನವರಿಗೆ ಮಾತ್ರ ತಿಳಿದಿರುವಂತಹ ವಿಚಿತ್ರ ಕಾರಣಕ್ಕೆ ರಕ್ಷಿಸಲೇಬೇಕಿತ್ತು. ಇನ್ನು ಬಿಕ್ರಂ ಸಿಂಗ್ ಕೂಡಾ ಜೆ.ಜೆ. ಸಿಂಗ್ ಆಪ್ತರಾಗಿದ್ದು ಸೇನಾ ಮುಖ್ಯಸ್ಥ ಪದವಿ ಆಕಾಂಕ್ಷಿಯಾಗಿದ್ದರು.

ಆದರೆ ವಿ.ಕೆ. ಸಿಂಗ್ ಅಕಾರ ವಿಸ್ತರಣೆ ಪಡೆದರೆ ಈ ಅವಕಾಶ ಅವರಿಂದ ತಪ್ಪಿಹೋಗುತ್ತಿತ್ತು. ಒಳಸಂಚು ಇಲ್ಲಿಗೇ ನಿಲ್ಲುವುದಿಲ್ಲ. ಅದು ದಿಲ್ಲಿಯಲ್ಲಿರುವ ರಾಜಕೀಯ ಪುಢಾರಿಗಳವರೆಗೂ ಸಾಗುತ್ತದೆ. ವಿ.ಕೆ.ಸಿಂಗ್‌ರ ಸಹಚರರ ಪ್ರಶ್ನೆ: ಒರ್ವ ಸೇನಾ ವಿಭಾಗದ ಕಮಾಂಡರ್ ನಾಗರಿಕರನ್ನು ಹತ್ಯೆ ಮಾಡಿರುವ ಕೊಲೆಗಾರರನ್ನು ಯಾಕೆ ರಕ್ಷಿಸುತ್ತಾರೆ? ಮತ್ತು ಮೇಜರ್ ಬರೆದ ಪತ್ರದ ಸಾರಾಂಶ ನಿಜವಾಗಿರದಿದ್ದರೆ ಕಮಾಂಡರ್ ಮೇಜರ್ ವಿರುದ್ಧ ಯಾಕೆ ಕ್ರಮ ತೆಗೆದುಕೊಂಡಿಲ್ಲ? ಆದರೆ ಇಲ್ಲಿ ಮತ್ತಷ್ಟು ಗೊಂದಲಮಯ ಪ್ರಶ್ನೆಗಳಿವೆ. ದಂಗೆ ನಿಗ್ರಹ ಪ್ರದೇಶಗಳಲ್ಲಿ ಹತ್ಯೆ ನಡೆಸುವುದು ಸಾಮಾನ್ಯ ವಿಷಯ. ಆದರೆ ಈ ಘಟನೆಯನ್ನು ಯಾಕೆ ಎತ್ತಿತೋರಿಸಲಾಯಿತು? ಅಕಾರದ ರಾಜಕೀಯವು ಈ ಹತ್ಯೆ ಮತ್ತು ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಹಿಂದೆ ಕೆಲಸ ಮಾಡಿದೆಯೇ? ಅಥವಾ ಹಲವಾರು ಜನರನ್ನೊಳಗೊಂಡಿರುವ ಇನ್ನೊಂದು ಅಪರಾಧದ ಜಾಲವೇ? ಭಾರತೀಯ ಗುಪ್ತಚರ ಸಂಸ್ಥೆಗಳು ಸೇನೆಯು ಆಗಾಗ ನಿಯಮಗಳನ್ನು ಉಲ್ಲಂಸುವ ಕತೆಗಳ ಬಗ್ಗೆ ಚಿರಪರಿಚಿತವಾಗಿವೆ.

ಸಂಘರ್ಷತಾಣಗಳಲ್ಲಿ ಸೇನೆಯ ಹಲವು ವಿಭಾಗಗಳು ತಾವು ಹೋರಾಡಬೇಕಾದ ಗುಂಪುಗಳ ಜೊತೆ ಸ್ನೇಹಶೀಲವಾಗಿ ವರ್ತಿಸುತ್ತವೆ ಎಂಬ ಆರೋಪವಿದೆ. ಅವುಗಳು ಎಲ್ಲಾ ಬಂಡಾಯಕೋರ ತಂಡಗಳ ಜೊತೆ ಸಂಪರ್ಕ ಹೊಂದಿರುತ್ತವೆ. ತಮ್ಮ ಶತ್ರುಗಳಿಂದ ಮುಕ್ತಿಪಡೆಯಲು ಸೇನೆಯಿಂದ ಸುಪಾರಿ (ಲಂಚ) ಪಡೆಯುತ್ತಾರೆ. ಇದೆಲ್ಲವನ್ನೂ ಮೀರಿ, ಕೆಲವರಂತೂ ಅಮಲು ಪದಾರ್ಥ ದಂಧೆಯಲ್ಲೂ ತೊಡಗಿರುವ ಬಗ್ಗೆ ಆರೋಪವಿದೆ. 2013ರ ೆಬ್ರವರಿಯಲ್ಲಿ ಸೇನಾ ಸಾರ್ವಜನಿಕ ಸಂಪರ್ಕ ಅಕಾರಿ ಯಾಗಿದ್ದ ಇಂಪಾಲ ಲೆಫ್ಟಿನೆಂಟ್ ಕರ್ನಲ್ ತಮ್ಮ ವಾಹನದಲ್ಲಿ ಡ್ರಗ್ಸ್ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದರು. ಶಸಾಸಗಳ ಬೃಹತ್ ಅಕ್ರಮ ಸಾಗಾಟವನ್ನು ಗುವಾಹಟಿಯ ರೈಲು ನಿಲ್ದಾಣದ ಬಳಿ ತಡೆಯಲಾಗಿತ್ತು ಮತ್ತು ಅದು 3ನೆ ವಿಭಾಗದಿಂದ ರವಾನಿಸಲ್ಪಟ್ಟಿದ್ದಾಗಿತ್ತು. ಎಲ್ಲಾ ಪೆಟ್ಟಿಗೆಗಳ ಮೇಲೂ ಆರ್ಡಿನೆನ್ಸ್ ್ಯಾಕ್ಟರಿ, ಪುಣೆ ಎಂದು ಬರೆಯಲಾಗಿತ್ತು. ಹೀಗೆ ಈ ಪಟ್ಟಿಗೆ ಕೊನೆಯೇ ಇಲ್ಲ. ಭಾರತೀಯ ಪಡೆಗಳಲ್ಲಿ ಒಂದು ರೀತಿಯ ನಿರ್ಭೀತಿಯ ಸಂಸ್ಕೃತಿ ಬೆಳೆದಿದೆ ಮತ್ತು ನ್ಯಾಯವನ್ನು ಎತ್ತಿಹಿಡಿಯದ ಹೊರತು ಅದು ಮುಂದುವರಿಯುತ್ತಲೇ ಇರುತ್ತದೆ. ಪೊಲೀಸರು, ಅರೆಸೇನಾ ಪಡೆ ಮತ್ತು ಸೇನೆಯ ಅಕಾರಿಗಳನ್ನು ಅದೆಷ್ಟೋ ವಿವಾದಾತ್ಮಕ ಮತ್ತು ಅದೆಷ್ಟೋ ಬಾರಿ ಕಾನೂನುಬಾಹಿರ ಹತ್ಯೆಗಳಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ. ಆದರೆ ಕಾರಾಗೃಹವಾಸ ದೂರದ ಮಾತು. ಅಪರೂಪವೆಂಬಂತೆ ಕೆಲವೇ ಪ್ರಕರಣಗಳಲ್ಲಿ ಇವರನ್ನು ಅಪರಾಗಳೆಂದು ಘೋಷಿಸಲಾಗಿದೆ. ಬಹಳಷ್ಟು ಸಂದರ್ಭಗಳಲ್ಲಿ ಈ ಎನ್‌ಕೌಂಟರ್‌ಗಳನ್ನು ಇತರ ಉಡುಗೊರೆಗಳ ಜೊತೆಗೆ ಪದಕಗಳು ಮತ್ತು ಪ್ರಶಸ್ತಿಗಳನ್ನು ಪಡೆಯುವ ಸಲುವಾಗಿ ನಡೆಸಲಾಗುತ್ತದೆ. ಸೇನೆಯಲ್ಲಿ ಅಂಕಗಳ ಆಧಾರದಲ್ಲಿ ವಿಭಾಗ ವ್ಯವಸ್ಥೆ ನಿರ್ಧಾರವಾಗುತ್ತದೆ.

ಈ ಅಂಕಗಳನ್ನು ಉಗ್ರರನ್ನು ಹತ್ಯೆ ಮಾಡುವ, ಬಂಸುವ ಅಥವಾ ದಂಗೆ ನಿಗ್ರಹ ಪ್ರದೇಶಗಳಲ್ಲಿ ಅವರನ್ನು ಶರಣಾಗುವಂತೆ ಮಾಡುವ ಮೂಲಕ ಪಡೆಯಲಾಗುತ್ತದೆ. ಸಂಘರ್ಷಪೀಡಿತ ಪ್ರದೇಶಗಳಲ್ಲಿ ಯುದ್ಧ ರಚನೆಯಲ್ಲಿ ನೈಜವಾದ ಪರಿಶ್ರಮದ ಅಗತ್ಯವಿದ್ದರೂ ಜೊತೆಗೆ ಅಂಗೀಕಾರದ ಅಗತ್ಯವೂ ಇರುತ್ತದೆ. ಹಾಗಾಗಿ ಅವರು ಹತ್ಯೆ ಮಾಡಲು ಸೂಕ್ತವಾದ ತಲೆಗಳನ್ನು ಮತ್ತು ಶರಣಾಗತಿಗೆ ಒಪ್ಪುವಂತಹ ಅಭ್ಯರ್ಥಿಗಳನ್ನು ಹುಡುಕುತ್ತಿರುತ್ತಾರೆ. ಇಂಥಾ ಪ್ರದೇಶಗಳಲ್ಲಿ ಅಕ್ರಮ ಶಸಾಸ ದಂಧೆ ವಿಪುಲವಾಗಿ ನಡೆಯುತ್ತದೆ ಯಾಕೆಂದರೆ ಭದ್ರತಾ ಪಡೆಗಳು ನಕಲಿ ಎನ್‌ಕೌಂಟರ್ ಅಥವಾ ಶರಣಾ ಗತಿಯ ಸಮಯದಲ್ಲಿ ಪ್ರದರ್ಶಿಸುವ ಸಲುವಾಗಿ ಈ ಶಸಾಸಗಳನ್ನು ಖರೀದಿಸುತ್ತಾರೆ.

ಸಂಘರ್ಷಪೀಡಿತ ಪ್ರದೇಶಗಳ ಈ ಕಾನೂನುಬಾಹಿರ ಒಪ್ಪಂದಗಳು ಕೇವಲ ಸೇನೆ ಮತ್ತು ಪೊಲೀಸರ ಮಧ್ಯೆಯಷ್ಟೇ ಸೀಮಿತವಾಗಿಲ್ಲ. ಇವರು ತಮ್ಮ ಇಚ್ಛೆ ಪ್ರಕಾರ ಜನರನ್ನು ಅಪಹರಿಸುವ, ಲೂಟಿ ಮತ್ತು ಹತ್ಯೆ ಮಾಡುವ ಸಶಸ ಭೂಗತಪಡೆಗಳ ಜೊತೆಗೂ ಶಾಂತಿ ಒಪ್ಪಂದಗಳ ನಡುವೆಯೂ ರಹಸ್ಯವಾಗಿ ಸಂಪರ್ಕ ಸಾಸುತ್ತಿರುತ್ತಾರೆ. ಸೇನಾ ಅಕಾರಿಗಳು, ಪೊಲೀಸರು, ಉಗ್ರರು ಮತ್ತು ನೇರಾನೇರ ಅಪರಾಗಳ ಮಧ್ಯೆ ನಡೆಯುವ ಕುತಂತ್ರಗಳನ್ನು ಗಮನಿಸಿದರೆ ಇವರ ಮಧ್ಯೆ ಇರುವ ವ್ಯತ್ಯಾಸವೆಂದರೆ ಕೇವಲ ಬ್ಯಾಡ್ಜ್, ಸಮವಸ ಮತ್ತು ರ್ಯಾಂಕ್ ಮಾತ್ರ ಎಂದು ತೋರುತ್ತದೆ. ಸರಕಾರ ಪ್ರಾಯೋಜಿತ ಹತ್ಯೆ ನಿಜವಾಗಿಯೂ ಮಹಾಪರಾಧ. ಇದರಲ್ಲಿ ಅಪರಾಗಳು ಭಾಗಿಯಾಗಿರುತ್ತಾರೆ ಮತ್ತು ಕೆಲವೊಮ್ಮೆ ಸರಕಾರಿ ಸೇವಕರೇ ಅಪರಾಗಳಾಗುವಂತೆ ಇದು ಪ್ರೇರೇಪಿಸುತ್ತದೆ ಮತ್ತು ಇತರರು ಮೌನವಾಗಿರುವ ಮೂಲಕ ಅವರನ್ನೂ ಈ ಅಪರಾ ಪಿತೂರಿಯ ಭಾಗವನ್ನಾಗಿಸುತ್ತದೆ. ಸೇನಾಕಾರಿಗಳ ಜಗಳ ಕನಿಷ್ಠಪಕ್ಷ ಒಳಗಿನ ಹುಳುಕನ್ನು ಕಾಣುವಂತೆ ಮಾಡಿದೆ.


 

Writer - ಕಿಶಾಲಯ್ ಭಟ್ಟಾಚಾರ್ಜಿ

contributor

Editor - ಕಿಶಾಲಯ್ ಭಟ್ಟಾಚಾರ್ಜಿ

contributor

Similar News