200 ಪ್ರಯಾಣಿಕರ ಪ್ರಾಣದೊಂದಿಗೆ ಚೆಲ್ಲಾಟ ಆಡಿದ ಪೈಲಟ್ ಗೆ ಏರ್ ಇಂಡಿಯಾ 'ಬೆಂಬಲ' !

Update: 2016-09-02 04:05 GMT

ಮುಂಬೈ, ಸೆ.2: ದಿಢೀರನೇ ವಿಕ್ಷಿಪ್ತವಾಗಿ ವರ್ತಿಸಿ, ವಿಮಾನವನ್ನು ಅಪಾಯಕಾರಿಯಾಗಿ ಅಡ್ಡಾದಿಡ್ಡಿಯಾಗಿ ಚಲಾಯಿಸಿ, 200 ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಕೂರುವಂಥ ಪರಿಸ್ಥಿತಿ ಸೃಷ್ಟಿಸಿದ ಏರ್ ಇಂಡಿಯಾದ ಹಿರಿಯ ಎಕ್ಸಿಕ್ಯೂಟಿವ್ ಕಮಾಂಡರ್ ನ ಬೆಂಬಲಕ್ಕೆ ಏರ್ ಇಂಡಿಯಾ ನಿಂತಿದೆ.

ಎಪ್ರಿಲ್ 28ರಂದು ದಿಲ್ಲಿಯಿಂದ ಪ್ಯಾರಿಸ್‌ಗೆ ಹೊರಟಿದ್ದ ಬೋಯಿಂಗ್ 787ನ ಮುಖ್ಯ ಪೈಲಟ್, ಪ್ರಯಾಣಿಕರ ಜೀವದ ಜತೆ ಚೆಲ್ಲಾಟವಾಡಿದ್ದ. ಈ ಬಗ್ಗೆ ತನಿಖೆ ನಡೆಸಲು ನೇಮಕ ಮಾಡಿದ್ದ ಸಮಿತಿ ಕಳೆದ ತಿಂಗಳು ವರದಿ ನೀಡಿದ್ದು, ಕಮಾಂಡರ್‌ನನ್ನು ಮಾನಸಿಕ ತಪಾಸಣೆಗೆ ಒಳಪಡಿಸಬೇಕು ಹಾಗೂ ಇನ್ನು ಮುಂದೆ ಆರು ತಿಂಗಳ ವರೆಗೆ ಸಹ ಪೈಲಟ್ ಆಗಿಯಷ್ಟೇ ಕಾರ್ಯನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟಿದೆ. ಆರು ತಿಂಗಳವರೆಗೆ ಅವರ ನಡವಳಿಕೆ ಮೇಲೆ ನಿಗಾ ಇಡುವಂತೆಯೂ ಸಲಹೆ ಮಾಡಿದೆ. ಇದೀಗ ಏರ್‌ಇಂಡಿಯಾ ಮತ್ತೊಂದು ಸಮಿತಿಯನ್ನು ನೇಮಕ ಮಾಡಿದ್ದು, ಕಮಾಂಡರ್‌ಗೆ ಕ್ಲೀನ್ ಚಿಟ್ ನೀಡುವ ಬಗ್ಗೆ ಊಹಾಪೋಹಗಳು ಹುಟ್ಟಿಕೊಂಡಿವೆ.

2015ರಲ್ಲಿ ಜರ್ಮನ್‌ವಿಂಗ್ಸ್ ವಿಮಾನದಲ್ಲಿ ಆತ್ಮಹತ್ಯಾಕಾರಿ ಪ್ರಯತ್ನದಲ್ಲಿ ಸಹ ಪೈಲಟ್, ಕಮಾಂಡರ್‌ನಿಂದ ಚಾಲನೆ ಕಸಿದುಕೊಂಡು ಫ್ರಾನ್ಸ್ ಅಲ್ಪ್‌ಸ್‌ಗೆ ಢಿಕ್ಕಿ ಹೊಡೆದು 150 ಮಂದಿಯ ಸಾವಿಗೆ ಕಾರಣನಾಗಿದ್ದ. ಇದಕ್ಕೆ ವಿರುದ್ಧವಾಗಿ ಇಲ್ಲಿ ಸಹಪೈಲಟ್ ಈ ಚೆಲ್ಲಾಟ ವಿರುದ್ಧ ಎಚ್ಚರಿಕೆ ಸಂದೇಶ ರವಾನಿಸಿದ್ದ. ಈ ಕಮಾಂಡರ್ ವಿಮಾನದ ಗರಿಷ್ಠ ಎತ್ತರ ಸಾಮರ್ಥ್ಯಕ್ಕಿಂತ ಹೆಚ್ಚು ಎತ್ತರಕ್ಕೆ ವಿಮಾನವನ್ನು ಒಯ್ದಿದ್ದ. ಈ ಎತ್ತರದಲ್ಲಿ ವಿಮಾನ ಅಸ್ಥಿರವಾಗುವುದಲ್ಲದೇ, ವಿಮಾನ ನಿಯಂತ್ರಣ ವ್ಯವಸ್ಥೆಯೂ ಕೆಲಸ ಮಾಡುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News