ಅಬ್ದುಲ್ ರಹ್ಮಾನ್
Update: 2016-09-05 09:10 IST
ಸುರತ್ಕಲ್, ಸೆ.5: ಕಾಟಿಪಳ್ಳ ಕೈಕಂಬದ ಆದರ್ಶ ಯುವಕ ಮಂಡಲ(ರಿ)ದ ಮಾಜಿ ಅಧ್ಯಕ್ಷ ಅಬ್ದುಲ್ ರಹ್ಮಾನ್(63) ಅಲ್ಪಕಾಲದಿಂದ ಅಸೌಖ್ಯದಿಂದ ರವಿವಾರ ಸಂಜೆ ನಿಧನರಾದರು. ಎನ್.ಎಂ.ಪಿ.ಟಿ. ಉದ್ಯೋಗಿಯಾಗಿದ್ದ ಇವರು, ಸ್ಥಳೀಯ ಹಲವಾರು ಸಂಘಸಂಸ್ಥೆಗಳ ಸಕ್ರಿಯ ಪ್ರವರ್ತಕರಾಗಿದ್ದು, ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೂಂಡಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.