ಯುಎಇ - ಭಾರತ ನಡುವಿನ ವಿಮಾನ ಪ್ರಯಾಣ ದರ ಭಾರೀ ಕಡಿತ !

Update: 2016-09-09 12:58 GMT

ಅಬುಧಾಬಿ, ಸೆ. 9: ಮಿತ ಪ್ರಯಾಣ ದರದ ಏರ್ ಇಂಡಿಯ ಎಕ್ಸ್‌ಪ್ರೆಸ್ ಅಬುಧಾಬಿ ಮತ್ತು ಶಾರ್ಜಾಗಳಿಂದ ಆರಂಭವಾಗುವ ಆಯ್ದ ಮಾರ್ಗಗಳಲ್ಲಿ ವಿಶೇಷ ದರದ ಕೊಡುಗೆ ನೀಡಿದೆ.


ಸೆಪ್ಟಂಬರ್ 14ರಿಂದ ಅಬುಧಾಬಿ-ಕೊಝಿಕೋಡ್ ಪ್ರಯಾಣ ದರವು 365 ದಿರ್ಹಮ್ (6630 ರೂಪಾಯಿ)ಗೆ ಇಳಿಯಲಿದೆ ಎಂದು ಏರ್ ಇಂಡಿಯ ಎಕ್ಸ್‌ಪ್ರೆಸ್ ಪ್ರಯಾಣ ಸಲಹಾಗಾರ ಅಬ್ದುಲ್ ಸಲೀಹ್ ಹೇಳಿದ್ದಾರೆ. ಸಾಮಾನ್ಯವಾಗಿ ಅಬುಧಾಬಿಯಿಂದ ಕೊಝಿಕೋಡ್‌ಗೆ ಪ್ರಯಾಣ ದರ 435 ದಿರ್ಹಮ್ (7900 ರೂ.)ಗಿಂತ ಹೆಚ್ಚಿರುತ್ತದೆ. ಆದರೆ, ಹಬ್ಬದ ಋತುವಿನಲ್ಲಿ ಇದು 1100 ದಿರ್ಹಮ್ (ಸುಮಾರು 20,000 ರೂ.)ವರೆಗೂ ತಲುಪುತ್ತದೆ.


‘‘ಕೇರಳಕ್ಕೆ ಹೋಗುವ ನಮ್ಮ ಎಲ್ಲ ವಿಮಾನಗಳಲ್ಲೂ ಸೆಪ್ಟಂಬರ್ 14ರವರೆಗೆ ಆಸನಗಳು ಭರ್ತಿಯಾಗಿವೆ. ಈದ್ ಮತ್ತು ಕೇರಳದ ಸುಗ್ಗಿ ಹಬ್ಬ ಓಣಂ ಅದೇ ವಾರದಲ್ಲಿ ಬರುತ್ತವೆ’’ ಎಂದರು.
ಸಾಮಾನ್ಯವಾಗಿ ಪ್ರಯಾಣ ದರ ಅಬುಧಾಬಿಯಿಂದ ಕೊಚ್ಚಿಗೆ 415 ದಿರ್ಹಮ್ (7538 ರೂ.) ಮತ್ತು ತಿರುವನಂತಪುರಂಗೆ 505 ದಿರ್ಹಮ್ (9,173 ರೂ.)ನಿಂದ ಆರಂಭಗೊಳ್ಳುತ್ತದೆ.
ಪ್ರಯಾಣ ದರ ಅಬುಧಾಬಿಯಿಂದ ಹೊಸದಿಲ್ಲಿಗೆ 362 ದಿರ್ಹಮ್ (6,575 ರೂ.) ಮತ್ತು ಮಂಗಳೂರಿಗೆ 370 ದಿರ್ಹಮ್ (6,720 ರೂ.)ನಿಂದ ಆರಂಭಗೊಳ್ಳುತ್ತದೆ.

ಶಾರ್ಜಾದ ಕೊಡುಗೆ
ಸೆಪ್ಟಂಬರ್ 15ರಿಂದ ಶಾರ್ಜಾ ಮತ್ತು ಚಂಡೀಗಢಗಳ ನಡುವಿನ ತಡೆರಹಿತ ಪ್ರಯಾಣಕ್ಕೆ ಕೇವಲ 210 ದಿರ್ಹಮ್ (3,814 ರೂ.) ದರ ನಿಗದಿಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News