ಕನ್ನಡಪರ ಸಂಘಟನೆಗಳಿಂದ ಮಂತ್ರಿಮಾಲ್‌ಗೆ ನುಗ್ಗಲು ಯತ್ನ
Update: 2016-09-12 15:50 IST
ಬೆಂಗಳೂರು, ಸೆ.12: ತಮಿಳುನಾಡಿಗೆ ಸೆ.20ರ ತನಕ ಪ್ರತಿದಿನ 12,000 ಕ್ಯೂಸೆಕ್ಸ್ ಕಾವೇರಿ ನೀರನ್ನು ಹರಿಸಬೇಕೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಪರ ಸಂಘಟನೆಗಳ ಪ್ರತಿಭಟನೆ ತೀವ್ರತೆ ಪಡೆಯುತ್ತಿದೆ.
ಬೆಳಗ್ಗೆ ತಮಿಳುನಾಡು ವಾಹನಗಳ ಮೇಲೆ ಗುರಿಯಾಗಿರಿಸಿ ಬೆಂಕಿ ಹಚ್ಚಿದ್ದ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಮಲ್ಲೇಶ್ವರಂನಲ್ಲಿರುವ ಮಂತ್ರಿಮಾಲ್‌ಗೆ ನುಗ್ಗಲು ವಿಫಲ ಯತ್ನ ನಡೆಸಿದರು. ಶ್ರೀನಗರದ ಪೂರ್ವಿಕಾ ಮೊಬೈಲ್ ಅಂಗಡಿಗೆ ಕಲ್ಲೆಸೆದಿರುವ ಪ್ರತಿಭಟನಾಕಾರರು ಅಂಗಡಿಯ ಬೋರ್ಡ್‌ಗೆ ಬೆಂಕಿ ಹಚ್ಚಿದ್ದಾರೆ.
ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಮುತ್ತುಟ್ ಫೈನಾನ್ ಜಾಹೀರಾತಿನ ಕಬಾಲಿ ಚಿತ್ರದ ಪೋಸ್ಟರ್‌ನ್ನು ಹರಿದುಹಾಕಲಾಗಿದೆ.
ರಾಜಾಜಿನಗರದಲ್ಲಿ ಕೆಲವು ತಮಿಳರು ಕನ್ನಡಿಗರನ್ನು ಬೆಂಬಲಿಸಿ ಧರಣಿ ನಡೆಸುತ್ತಿದ್ದಾರೆ.