ಹುಬ್ಬಳ್ಳಿಯಲ್ಲಿ ಸೆ.17ರಿಂದ ಕೆಪಿಎಲ್

Update: 2016-09-13 18:53 GMT

 ಬೆಂಗಳೂರು, ಸೆ.13: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಆಶ್ರಯದಲ್ಲಿ ಐದನೆ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್‌ನ ಟ್ವೆಂಟಿ-20ಪಂದ್ಯಗಳು ಸೆಪ್ಟಂಬರ್ 17ರಿಂದ ಅಕ್ಟೋಬರ್ 2ರ ತನಕ ನಡೆಯಲಿದೆ.
ಕಾವೇರಿ ಹೋರಾಟದ ಪರಿಣಾಮವಾಗಿ ಮೈಸೂರಿನಲ್ಲಿ ್ನ ಅಶಾಂತಿಯ ವಾತಾವರಣ ನೆಲೆಸಿರುವ ಹಿನ್ನೆಲೆಯಲ್ಲಿ ಪ್ರಥಮ ಹಂತದ ಎಲ್ಲ ಪಂದ್ಯಗಳನ್ನು ಹುಬ್ಬಳ್ಳಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಸೆಪ್ಟಂಬರ್ 16ರಂದು ಮೈಸೂರಿನಲ್ಲಿ ನಿಗದಿಯಾಗಿದ್ದ ಪಂದ್ಯಮರುದಿನಕ್ಕೆ ಮುಂದೂಡಲಾಗಿದ್ದು, ಸೆ.17ರಂದು ಹುಬ್ಬಳ್ಳಿಯ ರಾಜ್‌ನಗರದ ಕೆಎಸ್‌ಸಿಎ ನಗರದಲ್ಲಿ ಮೊದಲ ದಿನ ಮೂರು ಪಂದ್ಯಗಳು ನಿಗದಿಯಾಗಿದೆ. ಮೊದಲ ಪಂದ್ಯ ನಮ್ಮ ಶಿವಮೊಗ್ಗ ಮತ್ತು ಹುಬ್ಳಿ ಟೈಗರ್ಸ್‌ ತಂಡಗಳ ನಡುವೆ ನಡೆಯಲಿದೆ.

 ಎರಡನೆ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ಮಂಗಳೂರು ಯುನೈಟೆಡ್ ತಂಡ ಮೈಸೂರು ವಾರಿಯರ್ಸ್‌ನ್ನು ಮೂರನೆ ಪಂದ್ಯದಲ್ಲಿ ಬಿಜಾಪುರ ಬುಲ್ಸ್ ತಂಡವು ಬೆಳಗಾವಿ ಪ್ಯಾಂಥರ್ಸ್‌ ತಂಡವನ್ನು ಎದುರಿಸಲಿದೆ. ಮೊದಲ ಹಂತದ ಪಂದ್ಯಗಳು ಹುಬ್ಬಳ್ಳಿಯಲ್ಲಿ ಸೆ.17ರಿಂದ ಸೆ.26ರ ತನಕ ನಡೆಯಲಿದೆ. ಎರಡನೆ ಹಂತದ ಪಂದ್ಯಗಳು ಮೈಸೂರಿನಲ್ಲಿ ಸೆ.28ರಿಂದ ಅ.2ರ ತನಕ ನಡೆಯಲಿದೆ.
ಹುಬ್ಬಳ್ಳಿಯ ಲ್ಲಿ ಮೊದಲ ಹಂತದಲ್ಲಿ 22ಪಂದ್ಯಗಳು ಹಾಗೂ ಮೈಸೂರಿನಲ್ಲಿ ಎರಡನೆ ಹಂತದಲ್ಲಿ 9 ಪಂದ್ಯಗಳು ನಿಗದಿಯಾಗಿದೆ.
ಸೆಮಿಫೈನಲ್ ಅ.1ರಂದು ಮತ್ತು ಫೈನಲ್ ಪಂದ್ಯ ಅ.2ರಂದು ನಡೆಯಲಿದೆ.
,,,,,,,


*

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News