ಹಾಜಿ ಇಸ್ಮಾಯೀಲ್
Update: 2016-09-15 22:04 IST
ಮಂಗಳೂರು, ಸೆ. 15: ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಬಳಿಯ ಮಂಜಲ್‌ಪಲ್ಕೆ ನಿವಾಸಿ ಹಾಜಿ ಇಸ್ಮಾಯೀಲ್ (61) ಇಂದು ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ ಖತೀಜಮ್ಮ, ಆರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕಳೆದ ಕೆಲವು ದಿನಗಳಿಂದ ಅಸೌಖ್ಯದಿಂದಿದ್ದ ಅವರು ಇಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಮನೆಯಲ್ಲಿ ನಿಧನ ಹೊಂದಿದರು.