×
Ad

ಡಯಾಬಿಟೀಸ್ ಇರುವವರಿಗೆ ಅನ್ನವೇ ವಿಷ!

Update: 2016-09-16 14:47 IST

ಡಯಾಬಿಟೀಸ್ ರೋಗ ನಿವಾರಣೆಯ ಸಂಶೋಧನೆಯಲ್ಲಿ ಆರೋಗ್ಯ ಅಧಿಕಾರಿಗಳು ಬಹುದೊಡ್ಡ ಕಳವಳವನ್ನು ಕಂಡುಹಿಡಿದಿದ್ದಾರೆ. ಈವರೆಗೆ ತಿಳಿದಿದ್ದ ಸಿಹಿ ಸೋಡಾ ಪಾನೀಯಗಳು ಡಯಾಬಿಟೀಸ್ ತರುತ್ತದೆ ಎನ್ನುವುದಕ್ಕಿಂತಲೂ ಭೀಕರ ಸತ್ಯವಿದು. ಆರೋಗ್ಯ ಮಂಡಳಿ ಅಧ್ಯಕ್ಷ ಝೀ ಯಂಗ್ ಕಾಂಗ್ ಪ್ರಕಾರ ಕೊಬ್ಬು ಮತ್ತು ಪಾನೀಯವು ಪಶ್ಚಿಮದಲ್ಲಿ ಡಯಾಬಿಟೀಸ್‌ಗೆ ಮುಖ್ಯ ಕಾರಣವಾಗಿದೆ. ಆದರೆ ಏಷ್ಯನ್ನರಲ್ಲಿ ಈ ರೋಗವನ್ನು ತರಲು ಕೊಬ್ಬೇ ಬೇಕಾಗಿಲ್ಲ. ಸ್ಟಾರ್ಚ್ ಅಧಿಕವಿರುವ ಬಿಳಿಯನ್ನವನ್ನು ದೇಹಕ್ಕೆ ಅತಿಯಾಗಿ ತುಂಬುವುದು ರಕ್ತದಲ್ಲಿ ಸಕ್ಕರೆ ಅಂಶವನ್ನು ಏರಿಸಿ ಡಯಾಬಿಟೀಸ್‌ಗೆ ಕಾರಣವಾಗುತ್ತಿದೆ.

ಝೀ ಧೀರ್ಘ ಅಧ್ಯಯನದ ನಂತರ ಈ ವರದಿ ಸಲ್ಲಿಸಿದ್ದಾರೆ. ನಾಲ್ಕು ಪ್ರಮುಖ ಅಧ್ಯಯನಗಳ ಮೆಟಾ ಅನಾಲಿಸಿಸ್‌ನಲ್ಲಿ 3,50,000 ಮಂದಿಯನ್ನು ಸುಮಾರು 4ರಿಂದ 20 ವರ್ಷಗಳ ಕಾಲ ಅಧ್ಯಯನ ಮಾಡಿರುವ ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಈ ವರದಿಯನ್ನು ಮುಂದಿಟ್ಟಿದೆ. ನಿತ್ಯವೂ ಸೇವಿಸುವ ಪ್ರತೀ ಪ್ಲೇಟ್ ಬಿಳಿಯನ್ನ ಶೇ. 11ರಷ್ಟು ಡಯಾಬಿಟೀಸ್‌ಗೆ ಕಾರಣವಾಗುತ್ತಿದೆ.

ದುಪ್ಪಟ್ಟು ಸಕ್ಕರೆ ಅಂಶ

1 ಬೌಲ್ ಅಂದರೆ 2 ಕ್ಯಾನ್ ಪಾನೀಯಕ್ಕೆ ಸಮ. ಒಂದು ಬೌಲ್ ಅನ್ನದಲ್ಲಿ ಎರಡು ಬಾಟಲಿ ತಂಪು ಪಾನೀಯ ನೀಡುವ ಕಾರ್ಬೋಹೈಡ್ರೇಟ್ ಇರುತ್ತದೆ. ಕಾರ್ಬೋಹೈಡ್ರೇಟ್‌ಗಳು ದೇಹದಲ್ಲಿ ಸಕ್ಕರೆಯಾಗಿ ಪರಿವರ್ತನೆಗೊಳ್ಳುತ್ತವೆ. ಸಕ್ಕರೆಯನ್ನು ಮೂಳೆಗಳು ಮತ್ತು ಕೊಬ್ಬು ಹೀರಿಕೊಳ್ಳಲು ಪ್ಯಾನ್‌ಕ್ರಿಯಾಸ್ ಇನ್ಸುಲಿನನ್ನು ಸೃಷ್ಟಿಸುತ್ತದೆ. ಬಿಳಿಯನ್ನದಂತಹ ಆಹಾರದಲ್ಲಿ ಸಕ್ಕರೆಯನ್ನು ರಕ್ತ ಬೇಗನೇ ಹೀರಿಕೊಳ್ಳುತ್ತದೆ. ಈ ಸಕ್ಕರೆ ಸೆಳೆತವು ಪ್ಯಾನ್‌ಕ್ರಿಯಾಸ್ ಇನ್ನಷ್ಟು ವೇಗದಲ್ಲಿ ಕೆಲಸ ಮಾಡುವಂತೆ ಒತ್ತಡ ಹಾಕುತ್ತದೆ. ಹಾಗಾದಾಗ ಪ್ಯಾನ್‌ಕ್ರಿಯಾಸ್‌ನ ಇನ್ಸುಲಿನ್ ಬಿಡುಗಡೆ ಶಕ್ತಿ ಕ್ಷೀಣಿಸುತ್ತದೆ, ಮತ್ತು ದೇಹ ಸಕ್ಕರೆಯನ್ನು ಹೀರುತ್ತದೆ. ರಕ್ತದಲ್ಲಿ ಉಳಿದ ಸಕ್ಕರೆ ಕಿಡ್ನಿಗಳಿಗೆ ಹಾನಿ ಮಾಡಿ ಡಯಬಿಟಿೀಸ್‌ಗೆ ಕಾರಣವಾಗುತ್ತದೆ.

ನಿಮ್ಮ ಬೌಲ್‌ನಲ್ಲಿ ಏನಿದೆ?

ಏಷ್ಯನ್ನರು ಸಾಮಾನ್ಯವಾಗಿ ಹೆಚ್ಚು ಸಕ್ಕರೆ ಅಂಶವಿರುವ ಅನ್ನ ಮತ್ತು ನೂಡಲ್‌ಗಳನ್ನೇ ಸೇವಿಸುತ್ತಾರೆ. ಈ ಆಹಾರದಲ್ಲಿ ಗ್ಲಿಸಮಿಕ್ ಇಂಡೆಕ್ಸ್ ಹೇಗಿರುತ್ತದೆ?

ಆಹಾರ                                  ಗ್ಲಿಸಮಿಕ್ ಇಂಡೆಕ್ಸ್

ಬಿಳ್ಳಿಯನ್ನ ಸಣ್ಣ ಧಾನ್ಯ                       98

ನೂಡಲ್                                       82

ಬಿಳಿಯನ್ನು ಉದ್ದನೆಯ ಧಾನ್ಯ              78

ಕೆಂಪಕ್ಕಿ ಉದ್ದನೆಯ ಧಾನ್ಯ                 78

ಬ್ರೌಣ್ ರೈಸ್ (ಸಣ್ಣ ಧಾನ್ಯ)                76

ವೈಟ್ ಬ್ರೆಡ್                                  75

ಇಡೀ ಧಾನ್ಯ ಮೀಲ್ ಬ್ರೆಡ್                 53-70

ನಾಸಿ ಲೆಮಕ್ (ಅನ್ನ ಮಾತ್ರ)              69

ಚಿಕನ್ ರೈಸ್ (ಅನ್ನ ಮಾತ್ರ)               67

ಬ್ರೌನ್ ರೈಸ್ (ಉದ್ದ ಧಾನ್ಯ)               65

ಬಾಸ್ಮತಿ ಬಿಳಿಯನ್ನ                          64

ಸೋಡಾ ಪಾನೀಯ                         63

ಕೆಂಪು ಪಾಲೀಶ್ ಮಾಡದ ಬಾಸ್ಮತಿ      55

ಕಿತ್ತಳೆ ರಸ                                   50

ಹೆಚ್ಚು ಅಪಾಯ

ಅನ್ನ ಹೆಚ್ಚಾಗಿ ಸೇವಿಸುವ ಅಭ್ಯಾಸದಿಂದಲೇ ಯುರೋಪಿಯನ್ನರಿಗೆ ಹೋಲಿಸಿದಲ್ಲಿ, ಅದೇ ತೂಕದ ಏಷ್ಯನ್ನರಲ್ಲಿ ಟೈಪ್ 2 ಮಧುಮೇಹದ ಅಪಾಯ ಹೆಚ್ಚಾಗಿದೆ.

ನೀವೇನು ಮಾಡಬಹುದು?

ನಿಮ್ಮ ಶೇ.20ರಷ್ಟು ಬಿಳಿಯನ್ನವನ್ನು ಕಡಿಮೆ ಡಯಾಬಿಟೀಸ್ ಅಪಾಯವಿರುವ ಬ್ರೌನ್ ರೈಸ್ ಜೊತೆಗೆ ಬದಲಿಸುವುದರಿಂದ ಶೇ. 16ರಷ್ಟು ಅಪಾಯ ಕಡಿಮೆಯಾಗಲಿದೆ. ಬ್ರೌನ್ ರೈಸನ್ನು 15 ನಿಮಿಷ ನೀರಿನಲ್ಲಿಟ್ಟ ಮೇಲೆ ಬಿಳಿಯನ್ನದ ಜೊತೆಗೆ ಬೇಯಿಸಿ.

ಪ್ರತೀ ದಿನ 15 ನಿಮಿಷ ನಡಿಗೆಯೂ ಡಯಾಬಿಟೀಸ್‌ನಿಂದ ಬರುವ ಅಪಾಯವನ್ನು ಶೇ.4ರಷ್ಟು ಕಡಿಮೆ ಮಾಡಲಿದೆ.

ಅನ್ನವನ್ನು ಬಿಡಬೇಕೆ?

ಅಗತ್ಯವಿಲ್ಲ. ಸಣ್ಣ ಅಕ್ಕಿಯನ್ನು ಬಳಸುವ ಬದಲಾಗಿ ಉದ್ದನೆಯ ಅಕ್ಕಿಯನ್ನು ಬಳಸಿ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಮಾಡಬಹುದು.

ಕೃಪೆ:www.straitstimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News