ಮಾರುತಿಯಿಂದ ಬರಲಿವೆ 7 ನೂತನ ವಾಹನಗಳು

Update: 2016-09-18 06:43 GMT

ಭಾರತದ ಅತೀ ದೊಡ್ಡ ಕಾರು ತಯಾರಕ ಮಾರುತಿ ಸುಜುಕಿ 2017ರೊಳಗೆ 7 ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧವಾಗಿದೆ. ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿರುವ ಹೊಸ ಮಾರುತಿಗಳು ಈ ಕೆಳಗಿನಂತಿವೆ,

ಹೊಸ ಮಾರುತಿ ವ್ಯಾಗನ್ ಆರ್

ಮಾರುತಿಯ ಉದ್ದನೆಯ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಕೆಲವು ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಬರಲಿದ್ದು, ರಚನಾತ್ಮಕ ಪರಿವರ್ತನೆಗಳಾಗುವ ಸಾಧ್ಯತೆಯಿದೆ. ಅಲ್ಲದೆ ಭವಿಷ್ಯದ ಕ್ರಾಶ್ ಟೆಸ್ಟ್ ನಿಯಮಗಳಿಗೆ ತಕ್ಕಂತೆ ಈ ಕಾರು ಸಿದ್ಧವಾಗುತ್ತಿದೆ.

ಹೊಸ ಮಾರುತಿ ಎಕೊ

ಮಾರುತಿ ಎಂಟ್ರಿ ಲೆವೆಲ್ ಪೀಪಲ್ ಮೂವರ್ ಅನ್ನೂ ಭವಿಷ್ಯದ ಕ್ರಾಶ್ ಟೆಸ್ಟ್ ನಿಯಮಗಳಿಗೆ ತಕ್ಕಂತೆ ಅಪ್‌ಡೇಟ್ ಮಾಡಲಾಗಿದೆ. ಪ್ರಸ್ತುತ ಎಕೋ ವಾಹನದಲ್ಲಿ ಪವರ್ ಸ್ಟೀರಿಂಗ್ ಇಲ್ಲ. ಅಲ್ಲದೆ ಎಬಿಎಸ್ ಮತ್ತು ಡ್ಯುಯಲ್ ಏರ್ ಬ್ಯಾಗ್‌ಗಳೂ ಇಲ್ಲ.

ಮಾರುತಿ ಎಸ್-ಕ್ರಾಸ್ ಫೇಸ್‌ಲಿಫ್ಟ್

ಎಸ್ ಕ್ರಾಸ್ ಫೇಸ್‌ಲಿಫ್ಟ್ ಕಳೆದ ತಿಂಗಳು ಯುರೋಪಿನಲ್ಲಿ ಬಿಡುಗಡೆಯಾಗಿದ್ದು, ಭಾರತದಲ್ಲಿ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಮೇಲ್ನೋಟದ ಬದಲಾವಣೆಗಳ ಜೊತೆಗೆ ಮಾರುತಿ ಎಸ್ ಕ್ರಾಸ್‌ನ 1.5 ಲೀಟರ್ ಪೆಟ್ರೋಲ್ ವೇರಿಯಂಟ್ ಜೊತೆಗೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಕೂಡ ಹೊಂದಿರಲಿದೆ. ಪೆಟ್ರೋಲ್ ಪವರ್ ಕಾರುಗಳಿಗೆ ಈಗ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಬದಲಾವಣೆ.

ಮಾರುತಿ ಇಗ್ನಿಸ್

ಈ ವರ್ಷದ ಅತೀ ನಿರೀಕ್ಷೆಯ ಕಾರು ಇದಾಗಿದ್ದು, ಮಾರುತಿ ಇಗ್ನಿಸ್ ಈ ಹಬ್ಬದ ಸೀಸನ್‌ನಲ್ಲಿ ಬರಲಿದೆ ಮತ್ತು ಕಂಪನಿಯ ಪ್ರೀಮಿಯಂ ನೆಕ್ಸಾ ಮಳಿಗೆಗಳಲ್ಲಿ ಬರಲಿದೆ. 1.2 ಲೀಟರ್ ಪೆಟ್ರೋಲ್ ಮತ್ತು 1.3 ಲೀಟರ್ ಡೀಸಲ್ ಎಂಜಿನ್‌ಗಳನ್ನು ಹೊಂದಿರುವ ಇಗ್ನಿಸ್ AMT (AGS)  ತಂತ್ರಜ್ಞಾನವನ್ನೂ ಹೊಂದಿರುವ ಸಾಧ್ಯತೆ ಇದೆ.

ಮಾರುತಿ ಬ್ಯಾಲೆನೋ

ಮಾರುತಿ ಬ್ಯಾಲೆನೋ RS ಅನ್ನೂ ಈ ವರ್ಷದ ಅಂತ್ಯದಲ್ಲಿ ಪರಿಚಯಿಸುವ ಸಾಧ್ಯತೆ ಇದೆ. ಬ್ಯಾಲೆನೋ RS ಅನ್ನು 1.0 ಲೀಟರ್ ಮೂರು ಸಿಲಿಂಡರ್ ಟರ್ಬೋಚಾರ್ಜ್ಡ್‌ ಬೂಸ್ಟರ್ಜೆಟ್ ಇಂಜಿನ್ ಮೂಲಕ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಾಗುವುದು. 110 PS ನ ಕ್ಷೇತ್ರದಲ್ಲಿ ಪವರ್ ಔಟ್‌ಪುಟ್ ಹೊಂದಿರುವ ನಿರೀಕ್ಷೆಯಿದೆ. 1.2 ಲೀಟರ್ ಕೆ ಸೀರೀಸ್ ಗೆ ಹೋಲಿಸಿದರೆ ಬ್ಯಾಲೆನೋ RS ಹೆಚ್ಚು ಇಂಧನ ಸಮರ್ಥವಾಗಿರುವ ನಿರೀಕ್ಷೆಯಿದೆ.

2018 ಮಾರುತಿ ಸ್ವಿಫ್ಟ್ ಡಿಸೈರ್

ಮುಂದಿನ ತಲೆಮಾರಿನ ಮಾರುತಿ ಡಿಸೈರ್ 2017ರ ಅಂತ್ಯದಲ್ಲಿ ಬರುವ ನಿರೀಕ್ಷೆಯಿದೆ. ಅದು ಮಾರಾಟಕ್ಕೆ ಹೋದಾಗ ಇನ್ನಷ್ಟು ಪ್ರಮುಖ ಸ್ಥಾನಗಳಿಸಲಿದೆ. ಇಂಧನ ಸಮರ್ಥ ಪವರ್ ಟ್ರೈನ್‌ಗಳು, ಒಂದು ಫೀಚರ್ ಪ್ಯಾಕ್ಡ್ ಇಂಟೀರಿಯರ್ ಮತ್ತು ಕ್ಯಾಪಾಸಿಯಸ್ ಬೂಟ್ ಹೊಂದಿರುವ ಕಾಂಪಾಕ್ಟ್ ಸೆಡಾನ್ ತಮ್ಮ ಪ್ರತಿಸ್ಪರ್ಧಿಗಳ ಹಣಕ್ಕೆ ಕಿಚ್ಚು ಹಚ್ಚಲಿದೆ.

2017 ಮಾರುತಿ ಸ್ವಿಫ್ಟ್

2017ರ ಮಾರುತಿ ಸ್ವಿಫ್ಟ್ 2017 ಮಾರ್ಚ್‌ನಲ್ಲಿ ಜಿನಿವಾ ಮೋಟಾರ್ ಶೋನಲ್ಲಿ ಜಾಗತಿಕವಾಗಿ ಬಿಡುಗಡೆಯಾದರೆ, ಭಾರತದಲ್ಲಿ ಮುಂದಿನ ವರ್ಷದ ಮಧ್ಯ ಭಾಗದಲ್ಲಿ ಬರಲಿದೆ. ಹೊಸ ಸ್ವಿಫ್ಟ್‌ನ ಸೋರಿಕೆಯಾಗಿರುವ ಚಿತ್ರವನ್ನು ತೋರಿಸಲಾಗಿದ್ದು, ಅದು ಹೊಸ ಇಂಟೀರಿಯರ್ ಥೀಮ್ ಮತ್ತು ಲೇಔಟ್ ಹೊಂದಿದೆ. ಇದನ್ನು ಇತರ ಮಾರುತಿ ಮಾಡೆಲ್‌ಗಳಲ್ಲೂ ಪರಿಚಯಿಸಲಾಗುವುದು.

ಕೃಪೆ: economictimes.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News