ಈ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೆ ನಿರ್ಲಕ್ಷಿಸಬೇಡಿ!

Update: 2016-09-22 08:57 GMT

ಜನಪ್ರಿಯ ನಂಬಿಕೆಗೆ ವಿರುದ್ಧವಾಗಿ ಉದ್ಯೋಗ ತೃಪ್ತಿ ಮತ್ತು ಒತ್ತಡ ಯಾವಾಗಲೂ ಬೇರೆ ಬೇರೆಯಾಗಿಯೇ ಇರಬೇಕಾಗಿಲ್ಲ. ಕೆಲವೊಮ್ಮೆ ನೀವು ಕೆಲಸವನ್ನು ಪ್ರೀತಿಸಿದರೂ ಒತ್ತಡದ ಅನುಭವವಾಗಬಹುದು. ಒತ್ತಡದ ಚಿಹ್ನೆಗಳು ಆರೋಗ್ಯಕ್ಕೆ ಹಾನಿಕರ. ಈ ಕೆಳಗಿನ ಚಿಹ್ನೆಗಳು ನಿಮಗೆ ಕಂಡು ಬಂದಲ್ಲಿ ನೀವು ಟೆನ್ಷನ್ ಕಡಿಮೆ ಮಾಡುವತ್ತ ಗಮನಹರಿಸಬೇಕಿದೆ.

ನಿದ್ರಾ ಸಮಸ್ಯೆಗಳು

Stress.org ಪ್ರಕಾರ ನಿದ್ದೆ ಬಾರದೆ ಇರುವುದು ಮತ್ತು ದುಸ್ವಪ್ನಗಳು ಒತ್ತಡದ ಪರಿಣಾಮವಾಗಿರುತ್ತವೆ. ಖಾಸಗಿ ಜೀವನದಲ್ಲಿ ಎಲ್ಲ ಚೆನ್ನಾಗಿದೆ ಎಂದರೆ ಉತ್ತಮ ಆರೋಗ್ಯವೂ ಇರುತ್ತದೆ. ಹೀಗಾಗಿ ನಿದ್ರೆ ಬಾರದೆ ಇರಲು ಕೆಲಸದ ಒತ್ತಡವೇ ಕಾರಣವಾಗಿರುತ್ತದೆ. ಈ ಸಮಸ್ಯೆಯನ್ನು ಬಗೆ ಹರಿಸಲು ದಾರಿ ಹುಡುಕಿ.

ಅಂಟಾಸಿಡ್ ಟ್ಯಾಬ್ಲೆಟ್‌ಗಳು

 ನಿಮಗೆ ಭಡ್ತಿ ಸಿಕ್ಕಿದೆ, ಉತ್ತಮ ಹಣ ಬರುತ್ತಿದೆ. ಆದರೆ ಪ್ರತೀ ಬಾರಿ ಮನಸ್ಸಿಗೆ ಬೇಸರವಾದಾಗ ಅಂಟಾಸಿಡ್ ಟ್ಯಾಬ್ಲೆಟ್ ಗಳನ್ನು ಮಿಠಾಯಿಯಂತೆ ಸೇವಿಸುತ್ತೀರಿ. ಉದ್ಯೋಗದ ಒತ್ತಡ ಮತ್ತು ಆಸಿಡ್ ಪರಿಣಾಮ ಚಿಹ್ನೆಗಳಾದ ಹೃದಯರೋಗ ಮತ್ತು ವಾಂತಿ ನಡುವೆ ಸಂಬಂಧವಿದೆ ಎಂದು ಸಂಶೋಧಕರು ಹೇಳಿದ್ದಾರೆ. ಹೊಟ್ಟೆಯೊಳಗೆ ಎಲ್ಲವೂ ಸರಿಯಾಗಿಲ್ಲದಿದ್ದರೆ ಉದ್ಯೋಗದ ಒತ್ತಡ ದೇಹದ ಮೇಲೆ ಪರಿಣಾಮ ಬೀರುವ ಚಿಹ್ನೆಯಾಗಲಿದೆ.

ಸತತ ತಲೆನೋವು

healthline.com ಸತತವಾಗಿ ತಲೆನೋವು ಬರಲು ಸಾಕಷ್ಟು ಕಾರಣಗಳಿವೆ. ಆದರೆ ದೊಡ್ಡ ಸಮಸ್ಯೆ ಎಂದರೆ ಒತ್ತಡ. ನಲ್ಲಿ ಕಿಂಬರ್ಲಿ ಹಾಲಂಡ್ ಬರೆದ ಪ್ರಕಾರ ನಿರಂತರ ಮಾನಸಿಕ ಒತ್ತಡ ಮೈಗ್ರೇನ್‌ಗೆ ಕಾರಣವಾಗಲಿದೆ. ಒತ್ತಡಕ್ಕೆ ಮುಖ್ಯ ಕಾರಣವಾಗುವುದು ಮನೆ ಮತ್ತು ಉದ್ಯೋಗದ ಪರಿಸರ. ನಿಯಂತ್ರಣ ಸಾಧಿಸದಿದ್ದರೆ ಇದು ಮನಸ್ಸು ಮತ್ತು ದೇಹದ ಮೇಲೆ ಹಾನಿಯುಂಟು ಮಾಡಬಹುದು.

ಹಲ್ಲು ಕಡಿಯುವುದು

ಕಂಪ್ಯೂಟರ್ ಸ್ಕ್ರೀನ್ ನೋಡುತ್ತಾ ಹಲ್ಲು ಕಡಿಯುತ್ತೀರಾ? ಸಭೆಗಳ ಸಂದರ್ಭ ಹಲ್ಲು ಕಡಿಯುತ್ತೀರಾ? ಮಾಯೋ ಕ್ಲಿನಿಕ್ ಅಧ್ಯಯನದ ಪ್ರಕಾರ ಒತ್ತಡ ಮತ್ತು ಖಿನ್ನತೆ ಹಲ್ಲು ಕಡಿತಕ್ಕೆ ಕಾರಣವಾಗಲಿದೆ. ಇದರಿಂದ ದವಡೆಗೆ ಹಾನಿಯಾಗಿ ಹಲ್ಲುಗಳಿಗೂ ಹಾನಿಯಾಗಲಿದೆ.

ಮರೆವು

ಹೈಡಿ ಮಿಷೆಲ್ ಪ್ರಕಾರ ಒತ್ತಡವಿರುವ ವ್ಯಕ್ತಿ ಕೈಲಿರುವ ಕೆಲಸದ ಕಡೆಗೆ ಗುರಿಯಿಡಲು ಸಾಧ್ಯವಾಗುವುದಿಲ್ಲ. ಸಂಬಂಧಿತ ವಿಷಯಗಳನ್ನು ಬೇಗನೇ ಮರೆಯುತ್ತಾನೆ. ಮರೆವು ಮತ್ತು ನೆನಪು ಸಂಬಂಧಿತ ರೋಗಗಳು ಅನಿಯಂತ್ರಿತ ಒತ್ತಡದಿಂದಲೇ ಬರುತ್ತದೆ.

ಪ್ಯಾನಿಕ್ ಅಟಾಕ್

ಕೆಲಸದ ಸಂದರ್ಭ ಪ್ಯಾನಿಕ್ ಅಟಾಕ್ ಆದರೆ ಒತ್ತಡವೇ ಕಾರಣ. ಇದು ಎಚ್ಚರಿಕೆಯೇ ಕೊಡದೆ ಆಕಸ್ಮಿಕವಾಗಿ ಬರಬಹುದು. ಸಾಮಾನ್ಯ ಚಿಹ್ನೆ ಎಂದರೆ ವೇಗದ ಹೃದಯಬಡಿತ, ಬೆವರು, ನಡುಕ, ವಾಂತಿ, ಚಳಿ ಮತ್ತು ಹೃದಯ ನೋವು.

ಆಕ್ರೋಶ ತೋರಿಸುವುದು

ಸಾಮಾನ್ಯವಾಗಿ ಸಂತೋಷ ಮತ್ತು ಶಾಂತವಾಗಿರುವ ವ್ಯಕ್ತಿ ಆಕಸ್ಮಿಕವಾಗಿ ಕೆಲಸ ಮತ್ತು ಮನೆಯಲ್ಲಿ ಸಿಟ್ಟು ಮಾಡಿಕೊಳ್ಳುತ್ತಾರೆ. ಅಸ್ಥಿರತೆ, ಸಿಟ್ಟು ಒತ್ತಡದ ಚಿಹ್ನೆಗಳು.

ಭಾನುವಾರ ರಾತ್ರಿಯ ನಡುಕ

ಭಾನುವಾರ ರಾತ್ರಿ ಬಂತೆಂದರೆ ವಾರಾಂತ್ಯ ಮುಗಿಯಿತೆಂದು ಮರುದಿನದ ಕೆಲಸ ನೆನಪಿಸಿ ಬೇಸರವಾಗುತ್ತದೆ. ಅಧ್ಯಯನವೊಂದರ ಪ್ರಕಾರ ಶೇ. 76ರಷ್ಟು ಅಮೆರಿಕದ ಉದ್ಯೋಗಿಗಳಲ್ಲಿ ಭಾನುವಾರ ರಾತ್ರಿಯ ನಡುಕವಿರುತ್ತದೆ. ಆದರೆ ಪ್ರತೀ ಭಾನುವಾರ ಹೀಗೇ ಖಿನ್ನತೆ, ಹತಾಶೆ ಮತ್ತು ಭಯದಿಂದ ಕಳೆಯುತ್ತಿದ್ದಲ್ಲಿ ಕೆಲಸದ ಪರಿಸರದ ಬಗ್ಗೆ ಮತ್ತೊಮ್ಮೆ ಯೋಚಿಸುವ ಅಗತ್ಯವಿದೆ.

ಕೃಪೆ: http://economictimes.indiatimes.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News