ಪ್ರತಿದಿನ ಬಾಳೆಹಣ್ಣು ತಿಂದವನು ಬಾಳಿಯಾನು, ಏಕೆಂದರೆ...

Update: 2016-09-27 10:26 GMT

ಬಾಳೆಹಣ್ಣು ಪ್ರಿಯರು ಬಹಳಷ್ಟು ಮಂದಿ ಇದ್ದಾರೆ. ಅದರ ಪ್ರಯೋಜನ ಎಷ್ಟು ಎಂದು ತಿಳಿಯದಿದ್ದರೂ ಸೇವಿಸುವವರು ಅಪಾರ ಮಂದಿ. ಪ್ರತಿದಿನ ತಿಂದರೂ ಸಾಕೆನಿಸದ ವಿಶಿಷ್ಟ ಹಣ್ಣು ಅದು. ಲಘು ಸುವಾಸನೆ ಹಾಗೂ ಬೀಜರಹಿತವಾಗಿರುವ ಬಾಳೆಹಣ್ಣು ಅತ್ಯಂತ ಆರೋಗ್ಯದಾಯಕ ತಿನಸುಗಳಲ್ಲೊಂದು. ಒಯ್ಯಲು ಸುಲಭ; ಕಲುಷಿತವಾಗಿರುವ ಅಪಾಯ ಇಲ್ಲ. ಏಕೆಂದರೆ ಅದಕ್ಕೆ ನೈಸರ್ಗಿಕ ಸುರಕ್ಷೆಯ ಕವಚವಿದೆ. ಕಲ್ಪವೃಕ್ಷ ಎನಿಸಿಕೊಂಡಿರುವ ತೆಂಗಿನಂತೆ ಬಾಳೆಯ ಪ್ರತಿ ಇಂಚಿಂಚು ಕೂಡಾ ಬಳಕೆಯೋಗ್ಯ.

ಪೌಷ್ಟಿಕಾಂಶ: ಖ್ಯಾತ ಪೌಷ್ಟಿಕಾಂಶ ತಜ್ಞೆ ಸಂಧ್ಯಾ ಗುಗ್ನಾನಿ ಹೇಳುವಂತೆ, "ಬಾಳೆಹಣ್ಣಿನಲ್ಲಿ ಭಾರಿ ಪ್ರಮಾಣದ ಪೊಟ್ಯಾಷಿಂನ ಜತೆಗೆ ವಿಟಮಿನ್ ಸಿ ಹಾಗೂ ಮ್ಯಾಗ್ನೇಷಿಯಂ ಕೂಡಾ ಇದೆ. ವಿಟಮಿನ್ ಬಿ ಹಾಗೂ ಅಯೋಡಿನ್, ಕಬ್ಬಿಣ, ಸೆಲೆನಿಯಂ ಹಾಗೂ ಸತು ಕೂಡಾ ಇದೆ. ಇದು ಹೃದಯವನ್ನು ಆರೋಗ್ಯವಾಗಿ ಇಡುತ್ತದೆ ಹಾಗೂ ಎಲುಬುಗಳನ್ನು ಗಟ್ಟಿಗೊಳಿಸುತ್ತದೆ."

ಕುತೂಹಲಕರ ಅಂಶಗಳು

► ಅಡುಗೆಗೆ ಬಳಸುವ ಬಾಳೆಕಾಯಿಯನ್ನು ಪ್ಲಾಂಟೈನ್ ಎನ್ನುತ್ತಾರೆ.

►ಕನಿಷ್ಠ 107 ದೇಶಗಳಲ್ಲಿ ಇದನ್ನು ಬೆಳೆಯುತ್ತಾರೆ.

►ದ್ರಾಕ್ಷಿ ಹಾಗೂ ಸೇಬಿನ ವೈನ್‌ಪ್ರಿಯರಾಗಿದ್ದರೆ, ಬಾಳೆಹಣ್ಣಿನ ವೈನ್ ಹಾಗೂ ಬೀರ್ ರುಚಿ ನೋಡಬಹುದು. ಇದು ಅತ್ಯಂತ ರುಚಿಕರ ಆಲ್ಕೋಹಾಲ್‌ಯುಕ್ತ            ಪೇಯ.

► ಹಸಿರು, ನೀಲಿ, ತಿಳಿಗೆಂಪು, ಹಿಮಬಣ್ಣದ ಬಾಳೆ ತಳಿಗಳು ಅತ್ಯಂತ ಜನಪ್ರಿಯ ತಳಿಗಳು.

► ಬಾಳೆಹಣ್ಣು ವಿಕಿರಣಶೀಲ ಗುಣವನ್ನೂ ಹೊಂದಿದೆ.

► ಬಾಳೆ ಹೂವು, ಹಣ್ಣು, ದಂಡನ್ನು ಕೂಡಾ ಆಹಾರವಾಗಿ ಬಳಸುತ್ತಾರೆ. ಎಲೆಗಳನ್ನು ಹಬೆಯಲ್ಲಿ ಬೇಯಿಸುವ ಆಹಾರ ಸುತ್ತಲು ಮತ್ತು ಊಟಕ್ಕೆ ಬಳಸುತ್ತಾರೆ.

►ಬಾಳೆಯ ಎಲೆಯಿಂದ ಪ್ಲೇಟ್ ಹಾಗೂ ಬೌಲ್ ಕೂಡಾ ತಯಾರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News