ಇದು ಡಿಜಿಟಲ್ ಹೆರಾಯಿನ್!

Update: 2016-09-26 10:20 GMT

ನಿಮ್ಮ ಮಕ್ಕಳು ಮೊಬೈಲ್, ಟ್ಯಾಬ್‌ಗಳಲ್ಲಿ ಮುಳುಗಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಏಕೆಂದರೆ ಇದು ಒಂದು ಬಗೆಯ ಡಿಜಿಟಲ್ ಹೆರಾಯಿನ್. ಹೇಗೆ ಇದನ್ನು ಓದಿ.

ಶಾಲೆಯಲ್ಲಿ ಪುಟ್ಟ ಮಕ್ಕಳಿಗೇ ತಂತ್ರಜ್ಞಾನ ಪರಿಚಯಿಸುವ ಅತ್ಯುತ್ಸಾಹದಿಂದ ಶಿಕ್ಷಕಿಯರು ಆರಂಭಿಕ ಹಂತದಲ್ಲೇ ಮಕ್ಕಳಿಗೆ ಮೊಬೈಲ್, ಟ್ಯಾಬ್‌ಗಳ ಬಳಕೆ ಹೇಳಿಕೊಡುತ್ತಾರೆ. ತಂದೆ ತಾಯಿ ಕೂಡಾ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮ ಮಗು ಮುಂದಿರಬೇಕೆಂದು ಇದಕ್ಕೆ ಉತ್ತೇಜನ ನೀಡುತ್ತಾರೆ. ಆರು ವರ್ಷದ ಬಾಲಕನ ತಾಯಿಯ ಕಥೆ ಕೇಳಿ. ಮುದ್ದಿನ ಮಗನಿಗೆ ತಂದುಕೊಟ್ಟ ಐಪಾಡ್ ಈಗ ಮಗುವನ್ನು ಚಿಕಿತ್ಸೆಗೆ ಕರೆದೊಯ್ಯಬೇಕಾದ ಸ್ಥಿತಿ ತಂದೊಡ್ಡಿದೆ.

ಆರಂಭದಲ್ಲಿ ಪುಟ್ಟ ಬಾಲಕ ಜಾನ್ ಶೈಕ್ಷಣಿಕ ಗೇಮ್‌ಗಳನ್ನು ಐಪಾಡ್‌ನಲ್ಲಿ ಆಡುತ್ತಿದ್ದುದನ್ನು ಸೂಸಾನ್ ಆಸ್ವಾದಿಸುತ್ತಿದ್ದರು. ಕ್ರಮೇಣ ಬಾಲಕನಿಗೆ ಶಾಲೆಗಿಂತ ಆಟವೇ ಹೆಚ್ಚು ಇಷ್ಟವಾಗತೊಡಗಿತು. ಬೇಸ್‌ಬಾಲ್ ಆಟದಲ್ಲಿ ಹೊಂದಿದ್ದ ಆಸಕ್ತಿಯೂ ಕುಗ್ಗಿತು. ಯಾರ ಜತೆಯೂ ಸೇರದೇ, ಆಟದಲ್ಲೇ ಮಗ್ನನಾಗಿ ಬಿಡುತ್ತಿದ್ದ. ಇಷ್ಟಾಗಿಯೂ ಸೂಸಾನ್ ಧನಾತ್ಮಕವಾಗಿಯೇ ಇದ್ದರು.

ಒಂದು ದಿನ ರಾತ್ರಿ ಮಗ ನಿದ್ರಿಸುತ್ತಿದ್ದಾನೆ ಎಂಬ ನಂಬಿಕೆಯಿಂದ ಮಲಗುವ ಕೋಣೆಗೆ ಹೋದರೆ ಬಾಲಕ ಟೆರೇಸ್‌ನಲ್ಲಿ ನಿದ್ದೆಗೆಟ್ಟು, ಕೆಂಪು ಕಣ್ಣುಗಳೊಂದಿಗೆ ಐಪಾಡ್‌ನಲ್ಲಿ ಆಟವಾಡುತ್ತಿದ್ದ. ಒಂದು ರೀತಿಯಲ್ಲಿ ಐಪಾಡ್ ವ್ಯಸನಕ್ಕೆ ತುತ್ತಾಗಿದ್ದ.

ಅಮೆರಿಕ ಮಾತ್ರವಲ್ಲದೇ ಎಲ್ಲೆಡೆ ಈ ವ್ಯಸನ ಬೆಳೆಯುತ್ತಿದೆ. ನಿಮ್ಮ ಮಕ್ಕಳ ಬಗ್ಗೆ ಎಚ್ಚರ ವಹಿಸಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News