ಈಗ ಸರ್ಚ್ ಮಾಡಿ ಹೊಸ ಲ್ಯಾಪ್‌ಟಾಪ್, ಟ್ಯಾಬ್!

Update: 2016-09-27 17:54 GMT

ಹೊಸ ಆಂಡ್ರೋಮೇಡಾ ಅಪರೇಟಿಂಗ್ ಸಿಸ್ಟಂ ಮೂಲಕ ಗೂಗಲ್ ತನ್ನ ಹೊಸ ಲ್ಯಾಪ್‌ಟಾಪ್ ನಿರ್ಮಾಣದಲ್ಲಿದೆ. ಅದು ಕ್ರೋಮ್ ಒಎಸ್ ಮತ್ತು ಆಂಡ್ರಾಯ್ಡಾ ಎರಡನ್ನೂ ಬೆಸೆದು ನಿರ್ಮಾಣವಾಗಲಿದೆ ಎಂದು ಆಂಡ್ರಾಯ್ಡಾ ಪೊಲೀಸ್‌ನ ಡೇವಿಡ್ ರುಡಾಕ್ ಹೇಳಿದ್ದಾರೆ.

9ಟು5ಗೂಗಲ್ ಸಹಯೋಗಿಗಳ ಮತ್ತೊಂದು ಗಾಸಿಪ್ ಪ್ರಕಾರ ಗುವಾಯ್ ನೆಕ್ಸಸ್ ಟ್ಯಾಬ್ಲೆಟ್‌ನಲ್ಲೂ ಆಂಡ್ರೋಮೇಡ ಆಪರೇಟಿಂಗ್ ಸಿಸ್ಟಂ ಬರಲಿದೆ. ಇದನ್ನು ಗೂಗಲ್ ನೆಕ್ಸಸ್ 7 ನಂತರದ ತಲೆಮಾರಿನ ಮೊಬೈಲ್ ಎಂದೇ ಹೇಳಲಾಗಿದೆ.

ಲ್ಯಾಪ್‌ಟಾಪ್ ಬಿಸನ್ ಎನ್ನುವ ರಹಸ್ಯ ಹೆಸರಲ್ಲಿ ಎರಡು ವರದಿಗಳು ಹೇಳಿರುವ ಪ್ರಕಾರ ಇದನ್ನು ಅನಧಿಕೃತವಾಗಿ ಪಿಕ್ಸಲ್ 3 ಎಂದು ಕರೆಯಲಾಗಿದೆ. ಇದರಲ್ಲಿ 12.3 ಇಂಚ್ ಟಚ್ ಸ್ಕ್ರೀನ್ 10 ಎಂಎಂ ದಪ್ಪದಲ್ಲಿ ಬರಲಿದೆ. ಅದರಿಂದ ಇದು ಜಗತ್ತಿನ ಅತೀ ತೆಳುವಾದ ನೋಟ್ ಬುಕ್ ಎಂದು ಪ್ರಸಿದ್ಧಿ ಪಡೆಯಲಿದೆ. ಪಿಕ್ಸಲ್ 3ನಲ್ಲಿ ಲಿನೋವಾ ಯೋಗಾ ಲ್ಯಾಪ್‌ಟಾಪ್‌ಗಳಂತೆ ಕನ್ವರ್ಟಿಬಲ್ ಡಿಸೈನ್ ಇರಲಿದೆ ಎನ್ನಲಾಗಿದೆ. ಇದರಲ್ಲಿ ಮ್ಯಾಕ್ ಬುಕ್ ಈಕ್ವಿಗ್ಲಾಸ್ ಟ್ರಾಕ್ ಪ್ಯಾಡ್ ಇರಲಿದ್ದು, ಹ್ಯಾಪ್ಟಿಕ್ ವೈಬ್ರೇಶನ್ ಫೀಡ್ ಬ್ಯಾಕ್‌ನಿಂದ ನಡೆಯುತ್ತದೆ. ಇದನ್ನು ಗೂಗಲ್ 799 ಡಾಲರ್‌ನಿಂದ ಮಾರಲು ನಿರ್ಧರಿಸಿದೆ.

ಲ್ಯಾಪ್ ಟಾಪ್ ಹಾರ್ಡ್ ವೇರ್ ಕ್ಷೇತ್ರದಲ್ಲಿ ಗೂಗಲ್ ಪ್ರವೇಶಿಸುತ್ತಿರುವುದು ಇದೇ ಮೊದಲಲ್ಲ. ಕ್ರೋಮ್ ಬುಕ್ ಪಿಕ್ಸಲ್‌ಗಳನ್ನು ಈ ಹಿಂದೆಯೂ ಅದು ಬಿಡುಗಡೆ ಮಾಡಿದೆ. ಪಿಕ್ಸಲ್ 3 ಕ್ರೋಮ್ ಒಎಸ್‌ನಲ್ಲಿ ನಡೆಯುತ್ತದೆ/ ಇದಕ್ಕೆ ಬದಲಾಗಿ ಹ್ಯುವಾಯ್ ನಿರ್ಮಿತ ಟ್ಯಾಬ್ಲೆಟ್ ಆಂಡ್ರೋಮೇಡಾದ ವೇದಿಕೆಯನ್ನು ಬಳಸಲಿದೆ. ಇದು ಕ್ರೋಮ್ ಒಎಸ್ ಮತ್ತು ಆಂಡ್ರಾಯ್ಡಾ ಎರಡರ ಮಿಶ್ರಣ. ಆದರೆ ಆಂಡ್ರೋಮೇಡಾದಲ್ಲಿ ಏನು ವ್ಯತ್ಯಾಸವಿರಲಿದೆ ಎನ್ನುವುದು ಇನ್ನೂ ನಿಗೂಢ. ಆದರೆ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಆಪರೇಟಿಂಗ್ ಸಿಸ್ಟಂಗಳನ್ನು ಗೂಗಲ್ ಜೊತೆಗೂಡಿಸುತ್ತಿರುವುದಕ್ಕೆ ಕ್ರೋಮ್ ಎಸ್‌ನಿಂದಲೇ ಆರಂಭವಾಗಿದೆ. ವಾಲ್ ಸ್ಟ್ರೀಟ್ ಜರ್ನಲ್ ವರದಿಯಲ್ಲಿ ಗೂಗಲ್‌ನ ಆಪರೇಟಿಂಗ್ ಸಿಸ್ಟಂ ನೇತೃತ್ವ ವಹಿಸಿದ ಗಿರೋಶಿ ಲಾಕ್ಮೆರ್ ಹೊಸ ಲ್ಯಾಪ್‌ಟಾಪ್ ಸೂಚನೆ ನೀಡಿದಂದಿನಿಂದ ಇದನ್ನು ನಿರೀಕ್ಷಿಸಲಾಗುತ್ತಿದೆ. ಅದೇನೇ ಇದ್ದರೂ ಕ್ರೋಮ್ ಒಎಸ್ ಮತ್ತು ಆಂಡ್ರಾಯ್ಡಾ ವಿಲೀನವು ಎರಡು ಪ್ರತ್ಯೇಕ ಟೆಕ್ ದೈತ್ಯರ ಸಂಗಮವೆನ್ನಬಹುದು. ಆಯ್ದ ಕ್ರೋಮ್ ಬುಕ್‌ಗಳಿಗೆ ಇತ್ತೀಚೆಗೆ ಆಂಡ್ರಯ್ಡೋ ಆಪ್ಸ್‌ನಲ್ಲಿ ಕ್ರೋಮ್ ಒಎಸ್‌ನಲ್ಲಿ ನಡೆಯುವ ಅವಕಾಶ ಸಿಕ್ಕಿದೆ. ಆದರೆ ಇದು ಡಿವೈಸ್ ವಿಧಗಳಲ್ಲೇ ಹೆಚ್ಚು ಬಿಗಿಯಾದ ವಿಲೀನ ಎಂದುಕೊಳ್ಳಲಾಗಿದೆ. ಮುಖ್ಯವಾಗಿ ಮೈಕ್ರೋಸಾಫ್ಟ್ ಈಗ ವಿಂಡೋಸ್ ಜೊತೆಗೆ ನಡೆಯುವುದಕ್ಕೆ ಸಮನಾದ ವಿಲೀನ ಎನ್ನಲಾಗುತ್ತಿದೆ.

ಸುದ್ದಿಗಳು ಹೊರ ಬರುತ್ತಿರುವುದು ನೋಡಿದಲ್ಲಿ ಆಂಡ್ರೋಮೇಡಾ ಶೀಘ್ರವೇ ಮಾರುಕಟ್ಟೆಗೆ ಬರಲಿದೆ. ಆದರೆ ಅದೇನು ಎನ್ನುವುದು ಬಿಡುಗಡೆಯವರೆಗೂ ನಿಗೂಢ. 2017ರಲ್ಲಿ ಮೂರನೇ ಕ್ವಾರ್ಟರಲ್ಲಿ ಗೂಗಲ್ ಪಿಕ್ಸಲ್ 3ರನ್ನು ಬಿಡುಗಡೆ ಮಾಡಲಿದೆ. ಹುವಾಯ್ ನಿರ್ಮಿತ ಟ್ಯಾಬ್ಲೆಟ್ ಮುಂದಿನ ವರ್ಷಾಂತ್ಯದಲ್ಲಿ ಬಿಡುಗಡೆಯಾಗಲಿದೆ. ಅಕ್ಟೋಬರ್ 4ರ ಕಾರ್ಯಕ್ರಮದಲ್ಲಿ ಗೂಗಲ್ ಈಗಾಗಲೇ ಎರಡು ಹೊಸ ಪಿಕ್ಸಲ್ ಫೋನ್‌ಗಳು, ಅದರ ಗೂಗಲ್ ಹೋಮ್ ಸ್ಮಾರ್ಟ್ ಸ್ಪೀಕರ್, 4ಕೆ ಮತ್ತು ಎಚ್‌ಡಿಆರ್ ಸಮರ್ಥ ಕ್ರೋಮ್‌ಕಾಸ್ಟ್ ಮತ್ತು ಹೊಸ ಗೂಗಲ್ ವೈಫೈ ರೌಟರ್ ಬಿಡುಗಡೆ ಮಾಡುತ್ತಿದೆ. ಆಂಡ್ರೋಮೆಡಾ ಸುದ್ದಿ ಅಧಿಕೃತವಾದಲ್ಲಿ ಕಂಪೆನಿಯ ಇತಿಹಾಸದಲ್ಲೇ ವಿಶಿಷ್ಠವೆನಿಸುವ ಹೊಸ ಸುದ್ದಿಗಾಗಿ ಕಾಯಬೇಕಾಗುತ್ತದೆ.

ಕೃಪೆ: http://www.businessinsider.in/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News