×
Ad

ದಸರಾ ಉತ್ಸವಕ್ಕೆಸಜ್ಜಾದ ಮೈಸೂರು

Update: 2016-09-27 23:48 IST
  • ಅ.1ರಂದು ಬೆಳಗ್ಗೆ 11:40ಕ್ಕೆ ದಸರಾ ಉದ್ಘಾಟನೆ 
  • ಅ.11ರಂದು ಮಧ್ಯಾಹ್ನ 2:16ಕ್ಕೆ ಜಂಬೂಸವಾರಿ
  • 1 ಸಾವಿರ ಗೋಲ್ಡ್ ಕಾರ್ಡ್ ಮಾರಾಟಕ್ಕೆ ಸಿದ್ಧ
  • 999 ರೂ.ಗೆ ಪ್ಯಾಲೆಸ್ ಆನ್ ವ್ಹೀಲ್ ಟೂರ್

ಮೈಸೂರು, ಸೆ.27: ನಾಡ ಹಬ್ಬ ಮೈಸೂರು ದಸರಾದ ಉದ್ಘಾಟನೆಯನ್ನು ಅ.1ರಂದು ಚಾಮುಂಡಿ ತಾಯಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡೋಜ ಡಾ.ಚೆನ್ನವೀರ ಕಣವಿ ದಸರಕ್ಕೆ ಚಾಲನೆ ನೀಡುವರು ಎಂದು ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪತಿಳಿಸಿದರು.
.11ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದಸರಾ ಉದ್ಘಾಟನೆ ನೆರವೇರಿಸುವ ನಾಡೋಜ ಡಾ.ಚೆನ್ನವೀರ ಕಣವಿ ಅವರನ್ನು ಈಗಾಗಲೇ ಅಧಿಕೃತವಾಗಿ ಅಹ್ವಾನಿಸಲಾಗಿದ್ದು, ಅವರು ಸೆ.28 ರಂದು ಧಾರವಾಡದಿಂದ ರೈಲಿನ ಮೂಲಕ ಹೊರಟು ಸೆ.29ರಂದು ನಗರಕ್ಕೆ ಆಗಮಿಸಲಿದ್ದಾರೆ.ರ ಮಧ್ಯಾಹ್ನ 2:16ಕ್ಕೆ ಅರಮನೆಯ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿ ಧ್ವಜ ಪೂಜೆ ನೆರವೇರಿಸಲಿದ್ದು, 2:45ಕ್ಕೆ ಅರಮನೆ ಮುಂಭಾಗ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದರು.
.1 ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ 36 ಸ್ತಬ್ಧ ಚಿತ್ರಗಳು ಮತ್ತು 30 ಕಲಾತಂಡಗಳು ಭಾಗವಹಿಸಲಿವೆ. ಅದೇ ದಿನ ಸಂಜೆ 8 ಗಂಟೆಗೆ ಬನ್ನಿಮಂಟಪದಲ್ಲಿ ನಡೆಯಲಿರುವ ಟಾರ್ಚ್‌ಲೈಟ್ ಮೈದಾನದಲ್ಲಿ ಪಂಜಿನ ಕವಾಯತಿನಲ್ಲಿ ರಾಜ್ಯಪಾಲ ಡಾ.ವಜುಭಾಯಿ ರೂಢ ವಾಲಾ ಗೌರವ ವಂದನೆ ಸ್ವೀಕರಿಸಲಿದ್ದಾರೆ.ಂದು ನಡೆಯುವ ಪಂಜಿನ ಕವಾಯತು ಪ್ರದರ್ಶನವನ್ನು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಮತ್ತು ಮೈಸೂರು ವಿಶ್ವವಿದ್ಯಾನಿಲಯದ ಬಯಲು ರಂಗಮಂದಿರದಲ್ಲಿ ದೊಡ್ಡ ಎಲ್‌ಇಡಿ ಪರದೆಯ ಮೂಲಕ ನೇರಪ್ರಸಾರ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.ರಂದು ನಗರದ ಜೆ.ಕೆ.ಮೈದಾನದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಆಚರಿಸಲಾಗುತ್ತಿದೆ. ಅ.7 ರಂದು ಬನ್ನಿಮಂಟಪದಲ್ಲಿ ಟಾರ್ಚ್‌ಲೈಟ್ ಮೈದಾನದಲ್ಲಿ ರಿಮೋಟ್ ಕಂಟ್ರೋಲ್ಡ್ ವಿಮಾನ ಮಾದರಿಗಳ ಹಾರಾಟ ಏರ್ಪಡಿಸಲಾಗಿದ್ದು, ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ರಂದೀಪ್, ಶಾಸಕ ವಾಸು ಮತ್ತಿತರರು ಉಪಸ್ಥಿತರಿದ್ದರು.
 ಗೋಲ್ಡ್ ಕಾರ್ಡ್: 1,000 ಗೋಲ್ಡ್ ಕಾರ್ಡ್ ಮುದ್ರಿಸಲಾಗಿದ್ದು, 7,500 ರೂ. ದರ ನಿಗದಿಪಡಿಸಲಾಗಿದೆ. ಪ್ರತಿಯೊಂದು ಗೋಲ್ಡ್ ಕಾರ್ಡ್‌ಗೆ ಇಬ್ಬರು ವಯಸ್ಕರು ಮತ್ತು ಒಂದು ಮಗುವಿಗೆ ಪ್ರವೇಶಾವಕಾಶವಿರುತ್ತದೆ. ಆನ್‌ಲೈನ್‌ನಲ್ಲಿ ಬುಕ್ ಮಾಡಲು ಡಿಡಿಡಿ.ಞಟ್ಟಛಿಚ್ಟ.ಜಟ.ಜ್ಞಿಭೇಟಿ ನೀಡಬಹುದಾಗಿದೆ.ಸದಿಂದ ಮೈಸೂರು: ಲಲಿತಮಹಲ್ ಹೆಲಿಪ್ಯಾಡ್‌ನಿಂದ ‘ಆಗಸದಿಂದ ಮೈಸೂರು’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಹೆಲಿಕಾಪ್ಟರ್ ಮೂಲಕ ಹತ್ತು ನಿಮಿಷಗಳ ಕಾಲ ಮೈಸೂರು ನಗರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ವಯಸ್ಕರಿಗೆ 2,499 ರೂ. ಮತ್ತು ಹತ್ತನೆ ತರಗತಿ ಒಳಗಿನ ಮಕ್ಕಳಿಗೆ ಮತ್ತು ವಿಕಲ ಚೇತನರಿಗೆ 2,299 ರೂ. ದರ ನಿಗದಿಪಡಿಸಲಾಗಿದೆ.
 ಪ್ಯಾಲೆಸ್ ಆನ್ ವ್ಹೀಲ್ಸ್: ಅ.2 ರಿಂದ 9ರವರೆಗೆ ಪ್ಯಾಲೆಸ್ ಆನ್ ವ್ಹೀಲ್ಸ್ ಕಾರ್ಯಕ್ರಮದ ಮೂಲಕ ನಗರದಲ್ಲಿರುವ 8 ಅರಮನೆಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ಒಬ್ಬರಿಗೆ 999 ರೂ. ದರ ನಿಗದಿ ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ನೆನಪಿನ ಕಾಣಿಕೆಯಾಗಿ ಒಂದು ಕಲಾತ್ಮಕ ಕೀ ಚೈನ್, ಸಿಹಿ ತಿಂಡಿ, ಕುಡಿಯುವ ನೀರು ಮತ್ತು ನುರಿತ ಗೈಡ್‌ನ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ಊಟವನ್ನು ಲಲಿತಮಹಲ್ ಹೊಟೇಲ್‌ನಲ್ಲಿ ಹಾಗೂ ಸಂಜೆ ಉಪಾಹಾರವನ್ನು ಅಲೋಕ ಅರಮನೆಯಲ್ಲಿ ವ್ಯವಸ್ಥೆ ಮಾಡಲಾಗಿದೆ  ದೊರೆಯುವ ಸ್ಥಳ: ಪ್ರವಾಸಿಗರು ಟಿಕೆಟ್‌ಗಳನ್ನು ಡಿಡಿಡಿ.ಠ್ಟಠ್ಚಿ.ಜ್ಞಿವೆಬ್‌ಸೈಟ್‌ನಲ್ಲಿ ಪ್ಯಾಲೆಸ್ ಆನ್ ವೀಲ್ಸ್ ಬುಕ್ ಮಾಡಬಹುದಾಗಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತ್ತು ರಾಜ್ಯಾದ್ಯಂತ ಕೆಎಸ್ಸಾರ್ಟಿಸಿ ರಿಸರ್ವೇಶನ್ ಕೇಂದ್ರಗಳಲ್ಲಿ ಟಿಕೆಟ್‌ಗಳನ್ನು ಖರೀದಿಸಬಹುದಾಗಿದೆ.
 ದಸರಾಗೆ ಸಂಬಂಧಪಟ್ಟ ಮಾಹಿತಿಗಳಿಗಾಗಿ ದಸರಾ ವೆಬ್‌ಸೈಟ್    ಠಿಠಿ://ಡಿಡಿಡಿ.ಞಟ್ಟಛಿಚ್ಟ.ಜಟ.ಜ್ಞಿಭೇಟಿ ನೀಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News