×
Ad

ಸಹಕಾರಿ ಧುರೀಣ ಕೆ.ರಾಘವ ಶೆಟ್ಟಿಗಾರ್ ನಿಧನ

Update: 2016-09-28 20:03 IST

ಉಡುಪಿ, ಸೆ.28: ಉಡುಪಿ ಮತ್ತು ದ.ಕ. ಜಿಲ್ಲಾ ನೇಕಾರರ ಸಹಕಾರಿ ಸಂಘಗಳ ಒಕ್ಕೂಟ ಹಾಗೂ ಉಡುಪಿ ಪ್ರಾಥಮಿಕ ನೇಕಾರರ ಸಹಕಾರಿ ಸಂಘದ ಅಧ್ಯಕ್ಷರಾಗಿ ಕಳೆದ ಸುಮಾರು 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಕಾಂಗ್ರೆಸ್ ಮುಖಂಡ ಕೊಡಂಗಳ ರಾಘವ ಶೆಟ್ಟಿಗಾರ್ (60) ಇಂದು ನಿಧನರಾದರು.
 ರಾಘವ ಶೆಟ್ಟಿಗಾರ್ ಪತ್ನಿ, ಒರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.ಮಣಿಪುರ ಮಂಡಳ ಪಂಚಾಯತ್ ಸದಸ್ಯರಾಗಿ, ಮಣಿಪುರ ಗ್ರಾಪಂ ಸದಸ್ಯರಾಗಿ 4 ಅವಧಿಗೆ ಸೇವೆ ಸಲ್ಲಿಸಿದ್ದ ಇವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ನೇಕಾರರ ಸೆಲ್‌ನ ಜಂಟೀ ಕಾರ್ಯದರ್ಶಿ ಆಗಿಯೂ ಸೇವೆ ಸಲ್ಲಿಸಿದ್ದರು.
 ಅವರ ನಿಧನಕ್ಕೆ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್, ಮಾಜಿ ಸಚಿವ ಕಾಪು ಶಾಸಕ ವಿನಯ ಕುಮಾರ್ ಸೊರಕೆ, ಕಾಂಗ್ರೆಸ್ ಮುಖಂಡ ಹರೀಶ್ ಕಿಣಿ, ಕೊರಂಗ್ರಪಾಡಿ ಸಿ.ಎ. ಬ್ಯಾಂಕ್ ಅಧ್ಯಕ್ಷ ಶ್ರೀಧರ್ ಶೆಟ್ಟಿ, ಮಣಿಪುರ ಮಂಡಲ ಮಾಜಿ ಪ್ರಧಾನ ಅಲೆವೂರು ಗಣಪತಿ ಕಿಣಿ, ಬೆಳ್ಳೆ ಸಿ.ಎ. ಬ್ಯಾಂಕ್ ಅಧ್ಯಕ್ಷ ಶಿವಾಜಿ ಸುವರ್ಣ, ತಾಪಂ ಸದಸ್ಯೆ ಸಂಧ್ಯಾ ಶೆಟ್ಟಿ, ಗ್ರಾಪಂ ಸದಸ್ಯೆ ಸುನಂದಾ ನಾಗೇಂದ್ರ, ನಾಗರಿಕ ಸಮಿತಿ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಮಣಿಪುರ ಗ್ರಾಪಂ ಸದಸ್ಯ ಹಸನಬ್ಬ ಶೇಖ್, ಕರುಣಾಕರ ಪೂಜಾರಿ, ವಸಂತ ಪೂಜಾರಿ ಮರ್ಣೆ, ಉಡುಪಿ ಪ್ರಾಥಮಿಕ ನೇಕಾರರ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕ ಸದಾನಂದ ಕಾಂಚನ್, ಉಪಾಧ್ಯಕ್ಷ ಎಬ್ನೆಜರ್ ಸತ್ಯಾರ್ಥಿ ಮುಂತಾದವರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News