ಮೊಬೈಲ್ ಸಿಗ್ನಲ್ ಕಳಕೊಳ್ಳುವ ಸಮಸ್ಯೆ ನಿವಾರಣೆಗೆ ಇಲ್ಲಿದೆ ದಾರಿ

Update: 2016-09-29 17:56 GMT

ಯಾವುದೋ ಸಂಗೀತ ಹಬ್ಬದಲ್ಲಿದ್ದು ಬಹಳಷ್ಟು ಮಂದಿ ತಮ್ಮ ಫೋನ್ ಬಳಸುತ್ತಿದ್ದಲ್ಲಿ, ಸ್ನೇಹಿತರ ಜೊತೆಗೆ ಚಾರಣ ಹೋಗಿ ಅಡ್ಡಾಡುವಾಗ ಸಾಮಾನ್ಯವಾಗಿ ಸೆಲ್ ಫೋನ್ ಸೇವೆ ಸಿಗದೆ ಇರುವ ಸಮಸ್ಯೆ ಎದುರಿಸಿರುತ್ತೀರಿ. ಆದರೆ ಗೊ ಟೆನ್ನಾ ಎನ್ನುವ ಕಮ್ಯುನಿಕೇಶನ್ ಸ್ಟಾರ್ಟಪ್ ಸಹ ಸಂಸ್ಥಾಪಕ ಮತ್ತು ಸಿಇಒ ಡೇನಿಯೆಲ್ಲಾ ಪೆರ್ಡೊಮೊ ಬಳಿ ಇದಕ್ಕೆ ಉತ್ತರವಿದೆ.

ಕೆಲವೊಮ್ಮೆ ನಮ್ಮ ಸಂದೇಶಗಳು ಟವರ್ ತಲುಪದೆ ಇರುವುದೇ ಈ ಸಮಸ್ಯೆಗೆ ಕಾರಣ ಎನ್ನುತ್ತಾರೆ ಪೆರ್ಡೊಮೊ. ಅದೇ ಕಾರಣಕ್ಕೆ ಅವರು ತಮ್ಮ ಮೊದಲ ಉತ್ಪನ್ನವನ್ನು ಹೊರ ತಂದಿದ್ದಾರೆ. ಪೋರ್ಟೇಬಲ್ ಆಂಟೆನಾ ವಿಎಚ್‌ಎಫ್ ರೇಡಿಯೋ ಅಲೆಗಳನ್ನು ಬಳಸಿ ಇತರ ಗೊ ಟೆನ್ನಾಸ್ ಜೊತೆಗೆ 3-4 ಮೈಲಿ ರೇಂಜ್‌ನಲ್ಲಿ ಪ್ಯಾರ್ಡ್‌ ಸ್ಮಾರ್ಟ್‌ಫೋನ್ ಆಪ್ ಮೂಲಕ ಮಾತನಾಡುವ ಅವಕಾಶ ಕೊಡುತ್ತದೆ.

ಈಗ ಕಂಪೆನಿ ತಮ್ಮ ಗೋ ಟೆನ್ನಾ ಮೆಶ್ ಎನ್ನುವ ಮತ್ತೊಂದು ಉತ್ಪನ್ನ ಹೊರತಂದಿದೆ. ಇದು ಶೇ. 100 ಆಫ್ ಗ್ರಿಡ್, ಪೂರ್ಣ ಚಲನೆ, ಧೀರ್ಘ ರೇಂಜ್ ಮತ್ತು ಗ್ರಾಹಕರ ಬಳಕೆಗೆ ವಿನ್ಯಾಸಗೊಂಡಿದೆ. ಮೂಲ ಗೋ ಟೆನ್ನಾದಲ್ಲಿ ಬಿಂದುವಿನಿಂದ ಬಿಂದುವಿಗೆ ಇತರ ಗೋ ಟೆನ್ನಾ ಜೊತೆಗೆ ಸಂಪರ್ಕಿಸುತ್ತಿತ್ತು. ಆದರೆ ಹೊಸ ಮೆಶ್ ಮಾಡೆಲ್ ಒಂದಕ್ಕೊಂದು ಜೊತೆಗೂಡಿ ಡಿವೈಸ್ ರೇಂಜನ್ನು ಕೆಲವು ಮೈಲುಗಳ ದೂರಕ್ಕೆ ಹೆಚ್ಚಿಸುತ್ತದೆ. ಫಲಿತಾಂಶವಾಗಿ ನೆಟ್ವರ್ಕ್ ಬಲಿಷ್ಠವಾಗುತ್ತದೆಯೇ ವಿನಾ ದುರ್ಬಲವಾಗುವುದಿಲ್ಲ. ಅಂದರೆ ಇಬ್ಬರು ವ್ಯಕ್ತಿಗಳು ತಮ್ಮ ಗೋ ಟೆನ್ನಾ ಮೆಶ್ ಒಳಗೆ ಇದ್ದು ಚಾರಣಕ್ಕೆ ಹೋಗಿದ್ದಾರೆ. ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಸಂಪರ್ಕಿಸುತ್ತಾನೆ.

ಆದರೆ ಇಬ್ಬರೂ ರೇಂಜ್ ಹೊರಗಿರುತ್ತಾರೆ. ಮೆಶ್ ನೆಟ್ವರ್ಕ್ ಬಳಸಿ ಮೊದಲ ವ್ಯಕ್ತಿಯು ಎರಡನೇ ವ್ಯಕ್ತಿಯ ಹೊರತಾಗಿ ಡಿವೈಸ್ ಟೆನ್ನಾ ಮೆಶ್ ಬಳಸುವ ಇತರರು ರೇಂಜ್‌ನಲ್ಲಿದ್ದಾರೆಯೇ ಎಂದು ಪರೀಕ್ಷಿಸುತ್ತಾನೆ. ಇತರ ಯಾರಾದರೂ ಮೂರ್ನಾಲ್ಕು ಮಂದಿ ಏರಿಯಾದಲ್ಲಿ ಟೆನ್ನಾ ಮೆಶ್ ಬಳಸುತ್ತಿದ್ದಲ್ಲಿ ಮೊದಲ ವ್ಯಕ್ತಿಯ ಡಿವೈಸ್ ಒಂದರಿಂದ ಮತ್ತೊಂದಕ್ಕೆ ಹಾರುತ್ತಾ ಹೋಗಿ ಎರಡನೇ ವ್ಯಕ್ತಿಯನ್ನು ತಲುಪುತ್ತದೆ! ಇವೆಲ್ಲವೂ ಸೆಕೆಂಡುಗಳಲ್ಲಿ ನಡೆದು ಹೋಗುತ್ತದೆ. ಆದರೆ ಈ ಸಂದೇಶ ಮಧ್ಯ ಹಾದು ಹೋದ ವ್ಯಕ್ತಿಗಳಿಗೆ ತಿಳಿಯದೆಯೇ ಅವರ ಡಿವೈಸ್ ಮೂಲಕ ಸಾಗಿರುತ್ತದೆ.

ಮೆಶ್ ನೆಟ್ವರ್ಕ್ ಹೊಸತೇನಲ್ಲ. ಗೋ ಟೆನ್ನಾ ಬರುವ ಮೊದಲು ಅವುಗಳನ್ನು ಮಿಲಿಟರಿ ಸಂಪರ್ಕದಲ್ಲಿ ಬಳಸಲಾಗುತ್ತಿತ್ತು. ಅಲ್ಲಿ ಡಿವೈಸ್‌ಗಳು ಮೆಶ್ ನೆಟ್ವರ್ಕ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ದುಬಾರಿ ವೆಚ್ಚದಲ್ಲಿ ಬಳಸಲಾಗುತ್ತಿದೆ. ಅದನ್ನು ಅಗ್ಗವಾಗಿಸಲು ಸಣ್ಣ ಪರ್ಯಾಯವನ್ನು ಪೆರ್ಡೊಮೊ ತಂಡ ಮುಂದಿಟ್ಟಿದೆ. ಇದರಲ್ಲಿ ಫೋನ್ ಕರೆ ಸಾಧ್ಯವಿಲ್ಲ, ಕೇವಲ ಸಂದೇಶ ಕಳುಹಿಸಬಹುದು.

ಅಧಿಕ ಬ್ಯಾಂಡ್‌ವಿಡ್ತ್ ಸಂಪರ್ಕವಾದ ಕರೆ ಮಾಡಿದರೆ ದೊಡ್ಡ ಬ್ಯಾಟರಿ ಬೇಕಾಗುತ್ತದೆ. ಈಗಿನ ಗೋ ಟೆನ್ನಾ ಮೆಶ್ ಹಿಂದಿನ ಗೋ ಟೆನ್ನಾದ ಬದಲಿಗೆ ಮಾರುಕಟ್ಟೆಗೆ ಬಂದಿಲ್ಲ, ಅದರ ಜೊತೆಗೇ ಮಾರಾಟವಾಗಲಿದೆ. ದೊಡ್ಡ ವರ್ಷನ್ ಅನ್ನು ಸಂಪರ್ಕ ಸುಲಲಿತ ಮಾಡಲು ಸೃಷ್ಟಿಸಲಾಗಿದೆ. ಒಂದು ಮಾಧ್ಯಮವನ್ನು ಬಳಸದೆ ತಮ್ಮದೇ ಸಂಪರ್ಕವನ್ನು ಸೃಷ್ಟಿಸಿಕೊಂಡು ಜನರು ಅದನ್ನು ಬಳಸುವಂತೆ ಮಾಡುವುದು ಸಂಸ್ಥೆಯ ಉದ್ದೇಶವಾಗಿದೆ. “ಪ್ರತಿಯೊಬ್ಬರೂ ತಮ್ಮದೇ ಸಂಪರ್ಕ ಸೃಷ್ಟಿಸಿಕೊಳ್ಳಲು ಮೂಲ ಸೌಕರ್ಯ ಬೇಕು. ಅಂದರೆ ಹೆಚ್ಚು ಮಂದಿ ಬಳಸಿದರೆ ಹೆಚ್ಚು ಸಂಪರ್ಕ ಸಾಧ್ಯವಿದೆ” ಎನ್ನುತ್ತಾರೆ ಪೆರ್ಡೊಮೊ.

ಮೆಶ್ ಮಾಡೆಲ್‌ಗಳನ್ನು ಅಮೆರಿಕದ ಹೊರಗೂ ಬಳಸಬಹುದು. ಲಾಸ್ ಏಂಜಲೀಸ್‌ನಿಂದ ಲಂಡನ್‌ಗೆ ಹೋದರೆ ಫೋನಿನ ಜಿಪಿಎಸ್ ಆಪ್‌ಗೆ ಸಿಂಕ್ ಆಗಿ ಸರಿಯಾದ ರೇಡಿಯೋ ಫ್ರೀಕ್ವೆನ್ಸಿಯನ್ನು ಇಂಗ್ಲೆಂಡಿನಲ್ಲಿ ಕೊಡುತ್ತದೆ. ಇತರ ಯುರೋಪ್ ದೇಶಗಳಿಗೂ ಇದು ಅನ್ವಯಿಸುತ್ತದೆ. ಸದ್ಯ ಗೋ ಟೆನ್ನಾ ಮೆಶ್ 179 ಡಾಲರ್ ಗೆ ಸಿಗುತ್ತಿದೆ. ಟೆನ್ನಾ ಪ್ಲಸ್ (9.99 ಡಾಲರ್ ವಾರ್ಷಿಕ, ನಂತರ 29.99 ಡಾಲರ್) ಎನ್ನುವ ಪ್ರೀಮಿಯಂ ಸಾಫ್ಟ್‌ವೇರ್‌ನಲ್ಲಿ ಪ್ರಾದೇಶಿಕ ನಕ್ಷೆಗಳಿರುತ್ತವೆ. ಗ್ರೂಪ್ ಚಾಟ್‌ಗಳನ್ನೂ ಮಾಡಬಹುದು. ನಿಮ್ಮ ಸ್ಥಳವನ್ನು ಪ್ರತೀ ಐದು ನಿಮಿಷಕ್ಕೊಮ್ಮೆ ಯಾರಿಗಾದರೂ ತಿಳಿಸಬೇಕಿದ್ದಲ್ಲಿ ಬಳಸಬಹುದು. 2017ರಲ್ಲಿ ಕಂಪನಿ ಗೋ ಟೆನ್ನಾ ಪ್ರೊ ಎನ್ನುವ ಮತ್ತೊಂದು ಉತ್ಪನ್ನದ ಬಿಡುಗಡೆಗೆ ಸಿದ್ಧತೆ ಮಾಡುತ್ತಿದೆ. ಇದನ್ನು ವೃತ್ತಿಪರ ಸಂಘಟನೆಗಳೂ ಬಳಸಬಹುದು. ಆದರೆ ಈ ಸವಾಲು ಇನ್ನೂ ಸಂಸ್ಥೆಯ ಮುಂದಿದೆ. ನೆಟ್ವರ್ಕ್ ಬಳಕೆ ಅದರ ಗಾತ್ರವನ್ನು ಅನುಸರಿಸಿದೆ. ಹೀಗಾಗಿ ಗೋ ಟೆನ್ನಾವನ್ನು ಕೆಲವಷ್ಟೇ ಮಂದಿ ಬಳಸಿದರೆ ಮೆಶ್ ನೆಟ್ವರ್ಕ್ ದುರ್ಬಲವಾಗಿದ್ದು, ನೆರವಾಗುವುದಿಲ್ಲ. ದೊಡ್ಡ ಸಮುದಾಯ ಇದನ್ನು ಬಳಸುವಂತೆ ಮಾಡಲು ಸಂಸ್ಥೆ ಕೆಲವು ಹೊಸ ಕೊಡುಗೆಗಳನ್ನು ನೀಡುತ್ತಿದೆ.

ಕೃಪೆ: http://www.businessinsider.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News