×
Ad

ಇಲ್ಲ ತಡವಾಗಿಲ್ಲ, ಇವತ್ತಿನಿಂದಲೇ ವಾಕ್ ಮಾಡಿ. ಏಕೆಂದರೆ?

Update: 2016-09-29 23:30 IST

ಸರಳವಾದ ನಡಿಗೆ ಎನ್ನುವ ದೈಹಿಕ ವ್ಯಾಯಾಮ ಚಲನೆಯ ಸಮಸ್ಯೆಯಿದ್ದ ಬಹಳಷ್ಟು ಮಂದಿಗೆ, ವಯಸ್ಕರಿಗೆ ನೆರವಾಗಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಒಂದು ಆರೋಗ್ಯ ಅಧ್ಯಯನದ ಪ್ರಕಾರ ವ್ಯಾಯಾಮವನ್ನು ಸೂಚಿಸುವುದು ಔಷಧಿ ಸೂಚಿಸುವಷ್ಟೇ ಅಗತ್ಯ. “ನಿಮ್ಮ ಜೀವನದಲ್ಲಿ ಚಲನೆಯ ಸಮಸ್ಯೆ ಬಂದಲ್ಲಿ ಸ್ವಾತಂತ್ರ್ಯವೇ ಹೊರಟು ಹೋದಂತಹ ಭಾವನೆ ನಿಮಗೆ ಬರಲಿದೆ. ಇಂತಹ ಸಮಸ್ಯೆ ನಿಮಗೆ ಬಂತೆಂದರೆ ಗುಣ ಹೊಂದಿ ಮತ್ತೆ ಹಿಂದಿನಂತೆ ಸಕ್ರಿಯವಾಗಲು ಸಾಧ್ಯವಿದೆ” ಎಂದು ಈ ಹೊಸ ಅಧ್ಯಯನದ ಭಾಗವಾಗಿದ್ದ ವೈದ್ಯರಲ್ಲಿ ಒಬ್ಬರಾಗಿರುವ ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ಪ್ಯಾಟ್ರಿಶಿಯಾ ಕಟ್ಸ್ ಹೇಳಿದ್ದಾರೆ.

ವಯಸ್ಕರು ಬಹಳಷ್ಟು ಸಲ ಮೂಳೆ ಮುರಿತದ ಸಮಸ್ಯೆ ಕಂಡಲ್ಲಿ ಕನಿಷ್ಠ ತಾತ್ಕಾಲಿಕವಾಗಿಯಾದರೂ ಸ್ವತಂತ್ರ ಕಳೆದುಕೊಂಡು ಕಷ್ಟಪಡುತ್ತಾರೆ. ಅವರು ಆಸ್ಪತ್ರೆವಾಸ ಪಡೆದು ಗುಣವಾಗಬೇಕೆಂದರೂ ಸಮಯ ಹಿಡಿಯುತ್ತದೆ. ಆದರೆ ನಿತ್ಯದ ದೈಹಿಕ ಚಟುವಟಿಕೆ ಅತೀ ವೃದ್ಧರಿಗೂ ಸಕ್ರಿಯವಾಗಿ ಧೀರ್ಘಕಾಲ ಆರೋಗ್ಯವಂತರಾಗಿರಲು ನೆರವಾಗುತ್ತದೆ ಎಂದು ಸಂಶೋಧನೆ ತಿಳಿಸಿದೆ. ಈ ಅಧ್ಯಯನದಲ್ಲಿ 1600 ಮಂದಿಯಷ್ಟು ಸುಮಾರು 70ರಿಂದ 89 ನಡುವಿನ ಚಲನೆ ಸಮಸ್ಯೆಯಿರುವ ವೃದ್ಧರನ್ನು ಅಧ್ಯಯನ ಮಾಡಲಾಗಿದೆ. ಹೃದಯ ರೋಗ ಮತ್ತು ಮಧುಮೇಹದಂತಹ ರೋಗಗಳು ಹೊಂದಿದ್ದ ಇವರಲ್ಲಿ 2-5 ಮಂದಿ 80 ಅಥವಾ ಅದಕ್ಕಿಂತಲೂ ಹಿರಿಯರು. ಈ ಅಧ್ಯಯನದಲ್ಲಿ ಭಾಗವಹಿಸಲು ಅವರು ಕನಿಷ್ಠ 15 ನಿಮಿಷಗಳಲ್ಲಿ ಕಾಲು ಮೈಲಿ ನಡೆಯಬೇಕಿತ್ತು. ಕೆಲವರು ಧೀರ್ಘ ಸಮಯ ತೆಗೆದುಕೊಂಡಿದ್ದರು.

ಈ ಅಧ್ಯಯನದಲ್ಲಿ ವೃದ್ಧರಿಗೆ ನಿತ್ಯದ ನಡಿಗೆ ಮತ್ತು ಸ್ವಲ್ಪ ದೈಹಿಕ ಸಮತೋಲನದ ವ್ಯಾಯಾಮವೂ ಹೇಳಲಾಗಿತ್ತು. ಈ ನಿಯಂತ್ರಣ ತಂಡಕ್ಕೆ ಆರೋಗ್ಯ ಶಿಕ್ಷಣವನ್ನು ತಿಳಿ ಹೇಳಲಾಗಿತ್ತು. ಸುಮಾರು 3 ವರ್ಷಗಳಲ್ಲಿ ಈ ವೃದ್ಧರಿಗೆ ಇದ್ದ ಚಲನೆಯ ಸಮಸ್ಯೆ ಶೇ. 25ರಷ್ಟು ಕಡಿಮೆಯಾಗಿರುವುದು ಕಂಡು ಬಂದಿದೆ. ನಡಿಗೆ ಅಭ್ಯಾಸ ಮಾಡಿದವರಿಗೆ ಚಲನೆ ಮತ್ತು ಗಂಟು ಹಿಡಿದುಕೊಳ್ಳುವ ಸಮಸ್ಯೆ ಕಡಿಮೆಯಿತ್ತು. ಹೀಗಾಗಿ ಮತ್ತೊಂದು ಚಲನೆ ಸಮಸ್ಯೆ ಅವರಿಗೆ ಬರುವ ಸಂಭವವೂ ಕಡಿಮೆಯಿರುವುದು ಕಂಡುಬಂದಿದೆ. ಹಾಗೆಂದು ನಡಿಗೆಯನ್ನು ಇತರ ದೈಹಿಕ ಚಿಕಿತ್ಸೆಗೆ ಪರ್ಯಾಯವಾಗಿ ಪಡೆಯಲು ಸಾಧ್ಯವಿಲ್ಲ. ಆದರೆ ಮೂಳೆ ಸಮಸ್ಯೆಯಿಂದ ಆಸ್ಪತ್ರೆಗೆ ಸೇರಿದವರು ಬೇಗನೇ ಗುಣಮುಖರಾಗಿ ವಾಪಾಸಾಗಬಹುದು.

ಬಹಳಷ್ಟು ಮಂದಿ ವೃದ್ಧಾಪ್ಯದಲ್ಲಿ ಸಾಕಷ್ಟು ದೈಹಿಕ ಚಟುವಟಿಕೆ ನಡೆಸುವುದಿಲ್ಲ. ಆದರೆ ಆರೋಗ್ಯವಂತರಾಗಿರಲು ಮಧ್ಯ ವಯಸ್ಸಿನಲ್ಲಿ ಸಕ್ರಿಯರಾಗಿರುವುದು ಅತೀ ಅಗತ್ಯ. ಹಿರಿಯ ವಯಸ್ಸಿನವರು ಚಲನೆಯನ್ನು ಕಡಿಮೆ ಮಾಡಿದರೆ ಸಂಧಿ ನೋವಿನಂತಹ ಮೂಳೆ ಸಮಸ್ಯೆಗಳು ಬರಲಿವೆ. ಜಿಮ್ ಸದಸ್ಯತ್ವ ಇಲ್ಲದೆಯೇ ವಯಸ್ಕರು ನಡಿಗೆಯಿಂದಲೇ ತಮ್ಮ ಚಲನೆಯ ಸಮಸ್ಯೆಗಳನ್ನು ಅಭ್ಯಾಸ ಮಾಡಬಹುದು. ರಸ್ತೆಯ ಬದಿಯಲ್ಲಿ, ಅಥವಾ ಶಾಪಿಂಗ್ ಮಾಲ್‌ಗಳಲ್ಲಿ ನಡೆಯಬಹುದು. ದೈಹಿಕವಾಗಿ ಸಕ್ರಿಯವಾಗಿರುವವರು ಬೀಳುವುದು ಮತ್ತು ಗಾಯಗೊಳ್ಳುವ ಸಮಸ್ಯೆಯೂ ಕಡಿಮೆ ಇರಲಿದೆ. ವೃದ್ಧರು ಆಕಸ್ಮಿಕವಾಗಿ ವೇಗವಾಗಿ ನಡೆಯಬೇಕು ಎಂದು ಯಾರೂ ನಿರೀಕ್ಷಿಸುವುದಿಲ್ಲ. ಆದರೆ ನಿಧಾನವಾಗಿ ನಡಿಗೆಯನ್ನು ಅಭ್ಯಾಸ ಮಾಡುತ್ತಾ ವೇಗವಾಗಿ ನಡೆಯಲು ಕಲಿಯಬೇಕು ಎನ್ನುವುದು ಅಧ್ಯಯನಕಾರರ ಸಲಹೆಯಾಗಿದೆ. “ಬಹಳಷ್ಟು ಮಂದಿಗೆ ಹೇಗೆ ಆರಂಭಿಸಬೇಕು ಎನ್ನುವ ಸಂಶಯವಿರುತ್ತದೆ. ಆದರೆ ನಡೆಯುವುದಕ್ಕೆ ಭಯಪಡುವ ಬದಲು ಸುಮ್ಮನೆ ಇರುವುದಕ್ಕೆ ಹೆಚ್ಚು ಆತಂಕವಾಗಬೇಕು. ಇನ್ನೂ ತಡವಾಗಿಲ್ಲ. ನಡಿಗೆ ದೇಹಕ್ಕೆ ನಿರೋಧಕ ಶಕ್ತಿಯನ್ನು ಕೊಡುತ್ತದೆ” ಎನ್ನುವುದು ಕರ್ಟ್ಸ್ ಅಭಿಪ್ರಾಯ.

ಕೃಪೆ: http://www.hindustantimes.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News