ಅಂಟಾರ್ಕ್ಟಿಕ ಎಂಬ ವಿಸ್ಮಯ!

Update: 2016-10-01 07:06 GMT

ಜಗತ್ತಿನ ಐದನೇ ದೊಡ್ಡ ಖಂಡದ ಬಗ್ಗೆ ನಿಮಗೆಷ್ಟು ವಿವರ ಗೊತ್ತಿದೆ?

1. ಅಂಟಾರ್ಕ್ಟಿಕ ತನ್ನದೇ ಡೊಮೈನ್ ಹೊಂದಿದೆ

.aq ಇಂಟರ್ನೆಟ್ ದೇಶ ಕೋಡ್ ಡೊಮೈನ್ ಅನ್ನು ನ್ಯೂಜಿಲ್ಯಾಂಡ್‌ನ ಅಕ್ಲಂಡ್‌ನ ಪೀಟರ್ ಮಾಟ್ ಮತ್ತು ಅಸೋಸಿಯೇಟ್ಸ್ ನಡೆಸುತ್ತಿದ್ದಾರೆ. ಪ್ರಾಂತದಲ್ಲಿ ಕೆಲಸ ನಡೆಸುವ ಉದ್ದೇಶದಲ್ಲಿ ಇದನ್ನು ಬಳಸಲಾಗುತ್ತದೆ.

2. ಖಂಡಕ್ಕೆ ಟೈಮ್ ಜೋನ್ ಇಲ್ಲ

ಅಂಟಾರ್ಕ್ಟಿಕದ ಜನರು ಸಮಯವನ್ನು ತಮ್ಮ ದೇಶದ ಟೈಮ್ ಜೋನ್‌ನಲ್ಲೇ ನೋಡುತ್ತಾರೆ.

3. ಅಂಟಾರ್ಕ್ಟಿಕದಲ್ಲಿ ಬಾರ್‌ಗಳಿವೆ

ನೆಲೆಯಲ್ಲಿರುವ ವಿಜ್ಞಾನಿಗಳು ಚಳಿಯನ್ನು ತಡೆದುಕೊಳ್ಳಲು ಮದ್ಯ ಸೇವಿಸುತ್ತಾರೆ. ಮೆಕ್‌ಮರ್ಡೋದಲ್ಲಿ ಮೂರು ಬಾರ್‌ಗಳಿವೆ. ಮೆಕ್‌ಮರ್ಡೋ ಈ ಖಂಡದ ಅತೀ ದೊಡ್ಡ ಜನವಸತಿ ಪ್ರದೇಶ.

4. 1983 ಜುಲೈ 21 ಅಂಟಾರ್ಕ್ಟಿಕದ ಅತೀ ಶೀತಲ ದಿನವೆಂದು ದಾಖಲಾಗಿದೆ.

ಅಂದು -82.9 C ಉಷ್ಣತೆ ಇತ್ತು. ನಾವದನ್ನು ಊಹಿಸಲೂ ಸಾಧ್ಯವಿಲ್ಲ.

5. ಅಂಟಾರ್ಕ್ಟಿಕದಲ್ಲಿ ಭೂಮಿಯ ಒಟ್ಟು ತಾಜಾ ನೀರಿನಲ್ಲಿ ಶೇ. 70ರಷ್ಟಿದೆ

ಅದು ಸುಮಾರು 30 ಮಿಲಿಯನ್ ಕ್ಯುಬಿಕ್ ಕಿಲೋಮೀಟರ್‌ಗಳಷ್ಟು ಮಂಜುಗಡ್ಡೆಯನ್ನೇ ಹೊಂದಿದೆ.

6. ರೊವಾಲ್ಡ್ ಅಮುನ್ಡ್‌ಸನ್ ಅಂಟಾರ್ಕ್ಟಿಕವನ್ನು ತಲುಪಿದ ಮೊದಲ ಮನುಷ್ಯ

ನಾರ್ವೆಯ ರೊವಾಲ್ಡ್ ಅಮುನ್ಡ್‌ಸನ್ 1911 ಡಿಸೆಂಬರ್ 14ರಂದು ಅಂಟಾರ್ಕ್ಟಿಕ ತಲುಪಿದ್ದರು. ಹೀಗಾಗಿ ದಕ್ಷಿಣ ದ್ರುವದ ಮೇಲೆ ಕಾಲಿಟ್ಟ ಮೊದಲ ಮಾನವನೆನ್ನುವ ಹಿರಿಮೆ ಅವರದು.

7. ಅಂಟಾರ್ಕ್ಟಿಕದಲ್ಲಿ ಶಾಶ್ವತ ನಿವಾಸವಿಲ್ಲ

ಶಾಶ್ವತವಾಗಿ ಇಲ್ಲಿ ಮರಗಟ್ಟಲು ಯಾರು ಬಯಸುತ್ತಾರೆ? ಅಂಟಾರ್ಕ್ಟಿಕವನ್ನು ಭೇಟಿ ನೀಡಲು ಬಯಸುವವರು ವಿಜ್ಞಾನಿಗಳು ಮತ್ತು ಸಂಶೋಧಕರು ಮಾತ್ರ.

8. ಅಂಟಾರ್ಕ್ಟಿಕ ಚಳಿಗಾಲದಲ್ಲಿ ವಿಸ್ತಾರಗೊಳ್ಳುತ್ತದೆ

ಖಂಡದ ಮಂಜುಗಡ್ಡೆ ಚಳಿಗಾಲದಲ್ಲಿ ದಿನಕ್ಕೆ 40,000 ಚದರ ಮೈಲಿಗಳಷ್ಟು ವಿಸ್ತಾರಗೊಳ್ಳುತ್ತದೆ.

9. ಅಂಟಾರ್ಕ್ಟಿಕ ಮಿಡ್ಜ್ ಎನ್ನುವುದು ಇಡೀ ಖಂಡದಲ್ಲಿರುವ ಏಕೈಕ ಜೀವಿ 

ದ್ರುವದಲ್ಲಿರುವ ಅತೀ ದೊಡ್ಡ ಪ್ರಾಂತೀಯ ಪ್ರಾಣಿ ಅದಾಗಿದ್ದು, ಜೀವಿಯೂ ಅದೇ.

10. ಅಂಟಾರ್ಕ್ಟಿಕ ಯಾರಿಗೂ ಸೇರಿಲ್ಲ

ಆಸ್ಟ್ರೇಲಿಯ, ಅರ್ಜೆಂಟಿನಾ ಮತ್ತು ಇಂಗ್ಲೆಂಡ್ ಅಂಟಾರ್ಕ್ಟಿಕವನ್ನು ತಮ್ಮದು ಎನ್ನುತ್ತವೆ. ಆದರೆ 1959ರಲ್ಲಿ ಅಂಟಾರ್ಕ್ಟಿಕ ಒಪ್ಪಂದ ಕರಡು ಸಿದ್ಧವಾಗಿ ಈ ಭೂಮಿ ಪ್ರಾಕೃತಿಕ ಸಂಪನ್ಮೂಲ ಮತ್ತು ಶಾಂತಿ ಮತ್ತು ವಿಜ್ಞಾನಕ್ಕೆ ಮೀಸಲು ಎಂದು ನಿರ್ಧಾರವಾಗಿದೆ.

11. ಅಂಟಾರ್ಕ್ಟಿಕದಲ್ಲಿ ನೀವು ಕೆಲಸ ಮಾಡಬೇಕೆಂದರೆ ನಿಮ್ಮ ಜ್ಞಾನದ ಹಲ್ಲು ಮತ್ತು ಅಪೆಂಡಿಕ್ಸ್ ಅನ್ನು ಆರೊಗ್ಯ ಮತ್ತು ಸುರಕ್ಷೆ ಕಾರಣಗಳಿಂದ ನಿವಾರಿಸಿಕೊಳ್ಳುವ ಸಲಹೆ ನೀಡಲಾಗುತ್ತದೆ.

12. ಅಂಟಾರ್ಕ್ಟಿಕದಲ್ಲಿ ಕಾರ್ಯಕ್ರಮ ನೀಡಿದ ಮೊದಲ ಬ್ಯಾಂಡ್ ಮೆಟಾಲಿಕ

ಅಮೆರಿಕದ ರಾಕ್ ಬ್ಯಾಂಡ್ ಮೆಟಾಲಿಕ ಅಂಟಾರ್ಕ್ಟಿಕದಲ್ಲಿ ಕಾರ್ಯಕ್ರಮ ನೀಡಿ ಗಿನ್ನೆಸ್ ದಾಖಲೆ ಪುಸ್ತಕಕ್ಕೆ ಸೇರಿದೆ. 120 ಮಂದಿ ವಿಜ್ಞಾನಿಗಳು ಮತ್ತು ಸ್ಪರ್ಧೆ ವಿಜೇತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

13. ದಕ್ಷಿಣ ಗಂಗೋತ್ರಿ, ಮೈತ್ರಿ ಮತ್ತು ಭಾರತಿ ಎನ್ನುವ ಭಾರತೀಯ ಸಂಶೋಧನಾ ನಿಲ್ದಾಣಗಳು ಅಂಟಾರ್ಕ್ಟಿಕದಲ್ಲಿವೆ

ಇವರಲ್ಲಿ ದಕ್ಷಿಣ ಗಂಗೋತ್ರಿಯನ್ನು ಸ್ಥಾಪಿಸಿದ ಮೇಲೆ 6 ವರ್ಷ ಮಂಜಿನಲ್ಲಿ ಮುಚ್ಚಿ ಹೋಗಿ ಅಲ್ಲಿಂದ ಭಾರತೀಯರು ಹೊರ ಹೋಗುವ ಅನಿವಾರ್ಯತೆ ಸೃಷ್ಟಿಯಾಗಿತ್ತು.

14. ಅಂಟಾರ್ಕ್ಟಿಕದಲ್ಲಿ ಬೇಸಗೆ ಅಕ್ಟೋಬರ್‌ನಿಂದ ಫೆಬ್ರವರಿ ನಡುವೆ ಬಂದರೆ, ಮಾರ್ಚ್‌ನಿಂದ ಸೆಪ್ಟಂಬರ್ ನಡುವೆ ಚಳಿಗಾಲವಿರುತ್ತದೆ.

ಕೃಪೆ: http://www.indiatimes.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News