ಬ್ಯಾಂಕುಗಳಿಗೆ ಸರಣಿ ರಜೆ ವಹಿವಾಟಿಗೆ ಧಕ್ಕೆ
ಬೆಂಗಳೂರು, ಸೆ. 30: ದಸರಾ, ದೀಪಾವಳಿ ಹಬ್ಬ, ಮೊಹರಂ ಕಡೆಯ ದಿನದ ಹಿನ್ನೆಲೆಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಬ್ಯಾಂಕುಗಳಿಗೆ ಸರಣಿ ರಜೆ ಇರಲಿದ್ದು, ಐದು ದಿನಗಳ ಕಾಲ ಬ್ಯಾಂಕುಗಳ ವಹಿವಾಟಿಗೆ ಧಕ್ಕೆಯಾಗಲಿದೆ.
.13 .29ಅಕ್ಟೋಬರ್ ತಿಂಗಳ ಎರಡನೆ ವಾರಾಂತ್ಯದಲ್ಲಿ ಎರಡನೆ ಶನಿವಾರ(ಅ.8), ರವಿವಾರ(ಅ.9), ಆಯುಧ ಪೂಜೆ(ಅ.10), ವಿಜಯ ದಶಮಿ(ಅ.11), ಮೊಹರಂ ಕೊನೆಯ ದಿನ(ಅ.12)ದ ಅಂಗವಾಗಿ ರಜೆ. ಹೀಗಾಗಿ ಐದು ದಿನಗಳ ಕಾಲ ಯಾವುದೇ ಬ್ಯಾಂಕುಗಳು ಕಾರ್ಯ ನಿರ್ವಹಿಸುವುದಿಲ್ಲ.ಮತ್ತು 14ರಂದು ಬ್ಯಾಂಕುಗಳು ಕಾರ್ಯ ನಿರ್ವಹಿಸಲಿದ್ದು, ಅ.15ರ ಶನಿವಾರದಂದು ವಾಲ್ಮೀಕಿ ಜಯಂತಿ ರಜೆ ಇದೆ. ತಿಂಗಳ ಕೊನೆಯಲ್ಲಿ ದೀಪಾವಳಿ ಹಬ್ಬ ಮತ್ತು ನವೆಂಬರ್ 1ಕ್ಕೆ ಕನ್ನಡ ರಾಜ್ಯೋತ್ಸವ ಇರುವುದರಿಂದ ನಾಲ್ಕು ದಿನಗಳು ಸರಣಿ ರಜೆಗಳು ಬಂದಿವೆ.ರ ಶನಿವಾರದಂದು ನರಕ ಚತುದರ್ಶಿ, ಅ.30 ರವಿವಾರ, ಅ.31 ಬಲಿಪಾಢ್ಯಮಿ, ನ.1 ಕನ್ನಡ ರಾಜ್ಯೋತ್ಸವ ಇರುವುದರಿಂದ ಆ ವಾರದಲ್ಲಿಯೂ ನಾಲ್ಕು ದಿನಗಳ ಕಾಲ ಬ್ಯಾಂಕುಗಳು ಯಾವುದೇ ವಹಿವಾಟು ನಡೆಸುವುದಿಲ್ಲ.